ಫ್ರೆಂಚ್ ಬಿರಿಯಾನಿ ಖ್ಯಾತಿಯ ನಟ ದಾನೀಶ್ ಸೇಠಿ ಗೆಳತಿ ಅನ್ಯಾ ರಂಗಸ್ವಾಮಿ ಜತೆ ರಿಜಿಸ್ಟರ್ ಮದುವೆ ಆಗಿದ್ದಾರೆ .

ಮುಂಬೈ : ಫ್ರೆಂಚ್ ಬಿರಿಯಾನಿ ಖ್ಯಾತಿಯ ನಟ , ನಿರೂಪಕ ದಾನೀಶ್ ಸೇಠಿ ಬಹುಕಾಲದ ಗೆಳತಿ ಅನ್ಯಾ ರಂಗಸ್ವಾಮಿ ಜತೆ ರಿಜಿಸ್ಟರ್ ಮದುವೆ ಆಗಿದ್ದಾರೆ . 

ಜೂ .9 ರಂದು ಮದುವೆ ನೋಂದಾವಣೆ ಮಾಡಿಸಿ , ಜೂ . 10 ರಂದು ಉಂಗುರ ಬದಲಾಯಿಸಿಕೊಂಡಿದ್ದಾರೆ . ಕೊರೋನಾ ಕಾಲದಲ್ಲಿ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ದಾನೀಶ್‌ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ . ಅನ್ಯಾ ಹಾಗೂ ನನ್ನ ಕುಟುಂಬದ ಹಾಗೂ ಸ್ನೇಹಿತರ ಸಮ್ಮುಖದಲ್ಲಿ 15 ಜನರ ಮುಂದೆ ಉಂಗುರ ಬದಲಾಯಿಸಿಕೊಂಡೆವು . ಈ ಪಯಣ ಪ್ರೀತಿಯಿಂದ ಕೂಡಿರಲಿ ಎಂದು ಬಯಸುತ್ತ , ನಮ್ಮಿಬ್ಬರಿಗೂ ಹಾರೈಸಿ ಎಂದು ಹೇಳಿದ್ದಾರೆ . ಕೆಲವು ತಿಂಗಳ ಹಿಂದೆ ದಾನೀಶ್ ಸೇರ್ , ಬಹುಕಾಲದ ಗೆಳತಿ ಅನ್ಯಾ ರಂಗಸ್ವಾಮಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿ ಫೋಟೋ ಶೇರ್ ಮಾಡಿ ಖುಷಿ ಹಂಚಿಕೊಂಡಿದ್ದರು .


https://twitter.com/DanishSait/status/1402902626061086721?s=19

Post a Comment

Previous Post Next Post