ಭಾನುವಾರದ ಲಾಕ್ ಡೌನ್ ಲೆಕ್ಕಿಸದೇ ರಸ್ತೆಗಿಳಿದ ವಾಹನಗಳು

ಹಾಸನ: ಕೊರೋನಾ ಆವರಿಸಿ ಸರಕಾರವು ವಾರಕ್ಕೆ ಮೂರು ದಿಗಳ ಕಾಲ ವ್ಯಾಪಾರ ಮಾಡಲು ಅವಕಾಶ ಕೊಟ್ಟು, ಉಳಿದ ನಾಲ್ಕು ದಿನಗಳು ಸಂಪೂರ್ಣ ಲಾಕ್ ಡೌನ್ ಆದೇಶದ ನಿಯಮವಿದ್ದರೂ ಯಾವುದನ್ನು ಲೆಕ್ಕಿಸದೇ ವಾಹನ ಸವಾರರು ರಸ್ತೆಗಳಿದಿದ್ದರು.


       ನಗರದ ಬಹುತೇಕ ರಸ್ತೆಗಳಲ್ಲಿ ವಾಹನಗಳ ಸಂಚಾರ ಕಂಡು ಬಂದರೇ ಮುಖ್ಯ ರಸ್ತೆಗಳಲ್ಲಿ ಸಂಪೂರ್ಣ ಅಂಗಡಿ-ಮುಗ್ಗಟುಗಳು ಬಂದ್ ಆಗಿದ್ದವು. ಆದರೇ ಗಲ್ಲಿ-ಗಲ್ಲಿಗಳಲ್ಲಿ ಹಿಂದಿನ ಬಾಗಿಲಿನಿಂದ ಮತ್ತು ಮುಂದಿನ ಬಾಗಿಲಿನಿಂದ ಎಲ್ಲಾ ವ್ಯಾಪಾರವು ಸಲಿಸಾಗಿಯೇ ನಡೆಯುತಿತ್ತು. ಇನ್ನು ಭಾನುವಾರದ ಬಾಡುಟಕ್ಕೆ ಯಾವ ತೊಂದರೆ ಆಗಲಿಲ್ಲ. ಕೋಳಿ, ಕುರಿ ಮಟನ್ ಕೂಡ ಹಿಂಬಾಗಿಲಿನಿAದ ಸಿಗುತಿತ್ತು. ಕೆಲ ರಸ್ತೆಗಳಲ್ಲಿ ವಾಹನಗಳ ಓಡಾಟ ಹೆಚ್ಚಾಗಿ ಟ್ರಾಫೀಕ್ ಸಮಸ್ಯೆ ಕೂಡ ಕಂಡು ಬಂದಿತು. ಕೆಲ ಭಾಗಗಳಲ್ಲಿ ಮಾತ್ರ ವಾಹನ ತಪಾಸಣೆ ಮಾಡುತ್ತಿದ್ದರು. ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಸೀಝ್ ಮಾಡುತ್ತಿದ್ದ ಪೊಲೀಸರು ಭಾನುವಾರ ಕಾರ್ಯವೈಕರಿ ಅಷ್ಟೊಂದು ಕಾಣಿಸಲಿಲ್ಲ. ಇದರಿಂದಲೇ ಹಾಸನ ನಗರ ಸೇರಿದಂತೆ ಎಲ್ಲಾ ಭಾಗಗಳಲ್ಲೂ ಅನಗತ್ಯ ವಾಹನಗಳು ಯಾವ ಭಯವಿಲ್ಲದೇ ಓಡಾಟ ಜೋರಾಗಿಯೇ ನಡೆದಿತ್ತು.


Post a Comment

Previous Post Next Post