ಹಾಸನ: ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರೀ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಪತಂಜಲಿ ಯೋಗ ಸಮಿತಿ ಮತ್ತು ವೇದಭಾರತೀ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಕೊರೋನಾ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಆಗ್ನಿಹೋತ್ರವನ್ನು ನೆರವೇರಿಸಲಾಯಿತು.
ಇದೆ ವೇಳೆ ಮಾತನಾಡಿದ ಪತಂಜಲಿ ಯೋಗಾ ಸಮಿತಿ ಸಹ ಪ್ರಭಾರಿ ದೊರೆಸ್ವಾಮಿ ಇದೆ ವೇಳೆ ಮಾತನಾಡಿ, ಕೊರೋನಾ ಎಂಬ ಸೋಂಕು ಹರಡಿ ಇಂದು ಜನರು ಸಾವು-ನೋವಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಈನಿಟ್ಟಿನಲ್ಲಿ ಕೊರೋನಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪತಂಜಲಿ ಪರಿವಾರದಿಂದ ಅಗ್ನಿಹೋತ್ರವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸಮರ್ಪಕವಾದ ಆಕ್ಸಿಜನ್ ಸಿಗಬೇಕಾದರೇ ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಬೇಕು. ಪರಿಸರವನ್ನು ನಾಶ ಮಾಡದೇ ಉಳಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಬಹುಮುಖ್ಯವಾಗಿ ಪ್ರತಿನಿತ್ಯ ಕೆಲ ಸಮಯವನ್ನು ಯೋಗಕ್ಕಾಗಿ ಮೀಸಲಿಟ್ಟು ಅಭ್ಯಾಸ ಮಾಡಿದರೇ ಮಾನವನಲ್ಲಿ ಶಕ್ತಿ ಹೆಚ್ಚುತ್ತದೆ. ಯಾವ ರೋಗಗಳು ತಟ್ಟುವುದಿಲ್ಲ ಎಂದು ಕಿವಿಮಾತು ಹೇಳಿದರು. ಇನ್ನು ಪ್ರಾಣಾಯಾಮದಿಂದ ಉಸಿರಾಟದ ತೊಂದರೆಯಿAದ ಮುಕ್ತಿ ಹೊಂದಬಹುದು ಎಂದು ಸಲಹೆ ನೀಡಿದರು. ಶ್ರೀ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಪತಂಜಲಿ ಯೋಗ ಸಮಿತಿಗೆ ಯೋಗ ಮಾಡಲು ಉಚಿತವಾಗಿ ನೀಡಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ೫:೧೫ ರಿಂದ ೬:೩೦ರ ವರೆಗೂ ಯೋಗಾವನ್ನು ಉಚಿತವಾಗಿ ಹೇಳಿಕೊಡಲಾಗುವುದು ಎಂದು ಹೇಳಿದರು.
ಇದೆ ವೇಳೆ ಭಾರತ್ ಸೇವಾ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ, ಯುವ ಪ್ರಭಾರಿ ಸುರೇಶ್ ಪ್ರಜಾಪತಿ, ವೇಧ ಶಿವಕುಮಾರ್, ಶಾರದ ಧರ್ಮನಂದ್, ಲೀಲಾ ಉಮೇಶ್, ರಾಣಿ, ಚಂದ್ರಿಕಾ, ರುಕ್ಮಿಣಿ ಇತರರು ಪಾಲ್ಗೊಂಡಿದ್ದರು.
