ಎಬಿವಿಪಿಯಿಂದ ಗೆಂಡೆಕಟ್ಟೆ ಅರಣ್ಯ ಪ್ರದೇಶದಲ್ಲಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ

ಹಾಸನ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತ್ (ಎಬಿವಿಪಿ) ಇವರ ಸಂಯುಕ್ತಾಶ್ರಯದಲ್ಲಿ ನಗರದ ಸಮೀಪ ಇರುವ ಗೆಂಡೆಕಟ್ಟೆ ಅರಣ್ಯ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


      ಅರಣ್ಯ ಇಲಾಖೆಯ (ಆರ್.ಎಫ್) ಶಿವರಾಂ ಮತ್ತು ಉದಯಪುರ ಡಿಗ್ರಿ ಕಾಲೇಜು ಪ್ರಾಂಶುಪಾಲರಾದ ಶಿವಕುಮಾರ್ ಅವರು ಮಾತನಾಡಿ, ಪ್ರಕೃತಿಗಾಗಿ ವಿದ್ಯಾರ್ಥಿ ಶಕ್ತಿ ಎನ್ನುವ ಮೂಲಕ ಸೀಡ್ ಬಾಲ್ ಮತ್ತು ಗಿಡ ನೆಡುವ ಕಾರ್ಯಕ್ರಮ ಏರ್ಪಡಿಸಿರುವುದು ಅರ್ಥಪೂರ್ಣವಾಗಿದೆ. ಕೊರೋನಾ ಸಂದರ್ಭದಲ್ಲಿ ಉತ್ತಮ ವಾತವರಣ ಅವಶ್ಯಕವಾಗಿದೆ ಎಂಬುದನ್ನು ಕೊರೋನಾ ಎರಡನೇ ಅಲೆಯಿಂದ ಜಾಗೃತರಾಗಿದ್ದೇವೆ ಎಂದರು. ಆಕ್ಸಿಜನ್ ಎಂಬುದು ಸರಿಯಾಗಿ ಸಿಗದೇ ಅದೇಷ್ಟೊ ಜನರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಪರಿಸರ ಎನ್ನುವಂತಹದ್ದು ಎಲ್ಲರಿಗೂ ಬೇಕಾಗಿದೆ. ಗಾಳಿ, ಬೆಳಕು, ಆಹಾರ ಇದರಲ್ಲಿ ಕಲ್ಮಶವಾದರೆ ಜೀವನದ ಪರಿಸ್ಥಿತಿ ಅದಗಿಡುತ್ತದೆ. ಪರಿಸರದ ಉಳಿವಿಗಾಗಿ ಗಿಡ ಮರ ಉಳಿಸಿ ಬೆಳೆಸುವುದಕ್ಕೆ ಹೆಚ್ಚು ಉತ್ತೇಜನದ ಅವಶ್ಯಕತೆ ಇದೆ. ಇಂತಹ ಕಾರ್ಯಕ್ರಮ ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕಾಗಿದೆ. ಅದರಲ್ಲೂ ವಿದ್ಯಾರ್ಥಿಗಳ ಸಮೂಹದಲ್ಲಿ ಇಂತಹ ಕಾಳಜಿ ಬಂದಿರುವುದು ನಿಜವಾಗಲು ಹೆಮ್ಮೆಯ ವಿಚಾರವಾಗಿದೆ. ಎ.ಬಿ.ವಿ.ಪಿ ಸಂಘಟನೆಯು ಅರಣ್ಯ ಅಭಿವೃದ್ಧಿಗಾಗಿ ಸೀಡ್ ಬಾಲ್ ಅನ್ನು ಹಾಕುವುದರ ಮೂಲಕ ಕೈಜೋಡಿಸುತ್ತಿರುವುದು ಮಹತ್ವದ ಕಾರ್ಯವಾಗಿದೆ. ಬೀಜದ ಉಂಡೆಗಳನ್ನು ಮಳೆಗಾಲದಲ್ಲಿ ಹಾಕಿದರೆ ಉತ್ತಮವಾಗಿ ಬೆಳೆದುಕೊಳ್ಳುತ್ತದೆ ಎಂದು ಹೇಳಿದರು.

     ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಪ್ರಮುಖ್ ಭರತ್, ವಿಭಾಗ ಮಾಧ್ಯಮ ಪ್ರಮುಖರಾದ ಪ್ರಣವ್ ಭಾರಧ್ವಾಜ್, ನಗರ ಕಾರ್ಯದರ್ಶಿ ಅರುಣ್, ನಗರ ಸಹ ಕಾರ್ಯದರ್ಶಿ ತಿಲಕ್, ಚೈತನ್ಯ, ಪ್ರೀತಮ್, ಜೀವನ್ ಕಾಂತರಾಜ್, ಚಂದನ್, ದೀಪಕ್, ಶರತ್ ಇತರರು ಉಪಸ್ಥಿತರಿದ್ದರು.


Post a Comment

Previous Post Next Post