ಹಿಮ್ಸ್ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸಟ್ರೇಟರ್ ಕೊಡುಗೆ ಡಿಸಿ ಮೂಲಕ ಹಸ್ತಂತರಿಸಿದ ಬಿ.ಕೆ. ರಂಗಸ್ವಾಮಿ

ಹಾಸನ: ಕೊರೋನಾ ಸಂದರ್ಭದಲ್ಲಿ ಬಹುಮುಖ್ಯವಾಗಿ ಬೇಕಾಗಿರುವ ೪ ಆಕ್ಸಿಜನ್ ಕಾನ್ಸಟ್ರೇಟರ್ ಮತ್ತು ವೈದ್ಯಕೀಯ ಪರಿಕರಗಳನ್ನು ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ ಅವರು ಜಿಲ್ಲಾಧಿಕಾರಿಗಳಾದ ಆರ್. ಗಿರೀಶ್ ಮೂಲಕ ಹಿಮ್ಸ್ ಆಸ್ಪತ್ರೆಗೆ ಕೊಡುಗೆಯಾಗಿ ಹಸ್ತಂತರಿಸಿದರು.


       ನಂತರ ಬಿ.ಕೆ. ರಂಗಸ್ವಾಮಿ ರವರು ಮಾತನಾಡಿ, ಕೊರೋನಾ ಆವರಿಸಿದ ಹಿನ್ನಲೆಯಲ್ಲಿ ಲಾಕ್ ಡೌನ್ ನಿಯಮ ಜಾರಿಗೆ ತರಲಾಗಿದ್ದು, ಸಂಕಷ್ಟದ ವೇಳೆ ವೈದ್ಯರು ದಿನದ ೨೪ ಗಂಟೆಯೂ ನಿರಂತರವಾಗಿ ತಮ್ಮ ಶ್ರಮವನ್ನು ವಹಿಸುತ್ತಿದ್ದಾರೆ. ವೈದ್ಯರಿಗೆ ಉತ್ತೇಜನ ಕೊಡುವ, ವಿಶ್ವಾಸ ತುಂಬುವುದು ನಮ್ಮ ಆದ್ಯಾ ಕರ್ತವ್ಯವಾಗಿದೆ ಎಂದರು. ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವಾಗ ಉಂಟಾಗುವ ಸಮಸ್ಯೆ ಏನು ಉದ್ದೇಶದಲ್ಲಿ ನಾಲ್ಕು ಆಕ್ಸಿಜನ್ ಕಾನ್ಸಟ್ರೇಟರ್ ಮತ್ತು ವೈದ್ಯಕೀಯ ಪರಿಕರಗಳನ್ನು ಕೊಡುಗೆಯಾಗಿ ಕೊಡಲಾಗಿದೆ. ಹಸಿದ ಜನರಿಗೆ ಆಹಾರದ ಕಿಟ್ ಮತ್ತು ಸಿದ್ಧಪಡಿಸಿದ ಆಹಾರವನ್ನು ಕೊಡುವ ಕೆಲಸ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೊರೋನಾ ಎಂಬುದು ಕಣ್ಮರೆಯಾಗಿ ಸಾರ್ವಜನಿಕರು ಸಂತೋಷವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.

      ಇದೆ ವೇಳೆ ಹಿಮ್ಸ್ ನಿರ್ದೇಶಕರಾದ ಬಿ.ಸಿ. ರವಿಕುಮಾರ್, ಜಿಲ್ಲಾ ಸರ್ಜನ್ ಕೃಷ್ಣಮೂರ್ತಿ, ವೈದ್ಯರಾದ ಲೋಕೇಶ್ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post