ಮಾನವ ಹಕ್ಕುಗಳ ವೇದಿಕೆಯಿಂದ ಬಡವರಿಗೆ ಆಹಾರ ಪದಾರ್ಥ ವಿತರಣೆ

ಹಾಸನ: ನಗರದ ಬಿ.ಎಂ. ರಸ್ತೆ, ಸುವರ್ಣ ಹೋಟೆಲ್ ಬಳಿ ಮಲಬಾರ್ ಚಾರಿಟಬಲ್ ಟ್ರಸ್ಟ್ ಸಹಕಾರದಲ್ಲಿ ಅಂತರಾಷ್ಟಿçÃಯ ಮಾನವ ಹಕ್ಕುಗಳ ಸಮಿತಿವತಿಯಿಂದ ನೂರಾರು ಜನ ಬಡವರಿಗೆ ಪ್ರತಿನಿತ್ಯ ಉಪಯೋಗಿಸುವ ಆಹಾರದ ಕಿಟ್ ಗಳನ್ನು ವಿತರಿಸಿದರು.


      ನಂತರ ಮಾತನಾಡಿದ ಸಮಿತಿ ಜಿಲ್ಲಾಧ್ಯಕ್ಷ ಸಯ್ಯಾದ್ ಏಜಾಜ್ ಮತ್ತು ಮಲಬಾರ್ ಚಾರಿಟಬಲ್ ಟ್ರಸ್ಟ್ ಮ್ಯಾನೇಜರ್ ದೀಪಕ್ ರವರು, ಕೊರೋನಾ ಇರುವುದರಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ಬಡವರು ಮತ್ತು ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಒಂದು ಹೊತ್ತು ಊಟ ಮಾಡುವುದಕ್ಕೂ ಸಮಸ್ಯೆ ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಮಲ್ಬಾರ್ ಗೋಲ್ಡ್ ಸಹಕಾರದಲ್ಲಿ ಅಂತರಾಷ್ಟಿçÃಯ ಮಾನವ ಹಕ್ಕುಗಳ ಸಮಿತಿಯಿಂದ ಇದುವರೆಗೂ ೨ ಸಾವಿರಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಅವಶ್ಯಕವಾಗಿ ಬೇಕಾಗಿರುವ ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆೆ ಎಂದರು. ಜೊತೆಗೆ ಮಾಸ್ಕ್ ಹಾಕಿ, ಸಾಮಾಜಿಕ ಅಂತರದಲ್ಲಿ ಇದ್ದು, ಅನವಶ್ಯಕವಾಗಿ ಹೊರಗೆ ಬಾರದಂತೆ ಅರಿವು ಕೂಡ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

       ಈಸಂದರ್ಭದಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್ ಮ್ಯಾನೇಜರ್ ದೀಪಕ್, ಅಂತರಾಷ್ಟಿçÃಯ ಮಾನವ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಸಯ್ಯಾದ್ ಏಜಾಜ್, ವಿಜಿಕುಮಾರ್, ಜಗನ್ನಾಥ್, ಬಕ್ಸಿ, ಸಾಧಿಕ್ ಆಲಿ ಖಾನ್, ಸಯ್ಯಾದ್ ನಯಿಮ್ ಇತರರು ಉಪಸ್ಥಿತರಿದ್ದರು,


Post a Comment

Previous Post Next Post