ಕಾಡಾನೆ ದಾಳಿಗೆ ಕೃಷಿಕ ಬಲಿ. ದೇಹ ಛಿದ್ರ ಛಿದ್ರ; ಜನರ ಆಕ್ರೋಶ

ಹಾಸನ : ಮಲೆನಾಡು ಭಾಗದಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದೆ .ಕಾಡಾನೆ ದಾಳಿಗೆ ಕೃಷಿಕ ರೊಬ್ಬರು ಬಲಿಯಾಗಿದ್ದಾರೆ .

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಿರುಹುಣಸೆಯ ರಾಜಣ್ಣ ನನ್ನು ಒಂಟಿ ಸಲಗ   ಭೀಕರವಾಗಿ ಹತ್ಯೆ ಮಾಡಿದೆ .
ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಇವರು ಕಳೆದುಕೊಂಡಿದ್ದಾರೆ . ಆನೆ ಭೀಕರವಾಗಿ ದಾಳಿ ಮಾಡಿದ್ದು ದೇಹ ಛಿದ್ರಗೊಂಡಿದೆ .
ಈ ಪ್ರದೇಶದಲ್ಲಿ ಕಾಡಾನೆ ಹಾವಳಿ ತೀವ್ರವಾಗಿದ್ದು ಅನೇಕ ಬಾರಿ ಅರಣ್ಯ ಇಲಾಖೆ ಸಚಿವರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಕೃಷಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ .

Post a Comment

Previous Post Next Post