ಚಿಕ್ಕಮಗಳೂರು: ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ .
ತರೀಕೆರೆ ಪಟ್ಟಣದ ವೈದ್ಯ ದೀಪಕ್ ಮೇಲೆ ದುಷ್ಕರ್ಮಿಗಳು ಮಾರಣಾಂತಕ ಹಲ್ಲೆ ನಡೆಸಿದ್ದು ವೈದ್ಯರನ್ನು ವೈದ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು .
ತನಿಖೆ ನಡೆಸಿದ ಡಿವೈಎಸ್ಪಿ ನೇತೃತ್ವದ ತಂಡ ಅತ್ತಿಗನಾಳಿನ ವೇಣು ಗೋಪಾಲ್ ‘ ನಿತೀನ್ ಹಾಗೂ ವೆಂಕಟೇಶ್ ನನ್ನು ಬಂಧಿಸಿದ್ದಾರೆ .
ಕೆಲ ದಿನಗಳ ಹಿಂದೆ ವೇಣುಗೋಪಾಲ್ ತನ್ನ ಅಕ್ಕನ ಮಗ 7ವರ್ಷದ ಬಾಲಕನನ್ನು ಆಸ್ಪತ್ರೆಗೆ ಚಿಕಿತ್ಸೆಗೆ ತರೀಕೆರೆ ಜಗದೀಶ್ವರ ಕ್ಲಿನಿಕ್ ಗೆ ದಾಖಲಿಸಿದ್ದ.
ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ದಿದ್ದು ಬಾಲಕ ಮೃತಪಟ್ಟಿದ್ದ .
ಇದರಿಂದ ರೊಚ್ಚಿಗೆದ್ದ ವೇಣುಗೋಪಾಲ್ ಸ್ನೇಹಿತರೊಂದಿಗೆ ಸೇರಿ ವೈದ್ಯರ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದ ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದ್ದಾರೆ.
