ಲಾಕ್ ಡೌನ್ ಸಂರ‍್ಭದಲ್ಲಿ ಪ್ರತಿನಿತ್ಯ ತಮ್ಮ ಜೀವನದ ಹಂಗನ್ನು ತೊರೆದು ಪಟ್ಟಣ ಸ್ವಚ್ಚತೆ ಜೊತೆಗೆ ಜನರ ಅರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ನರ‍್ವಹಿಸುತ್ತಿರುವ ಸುಮಾರು ೫೦೦ ಕೊರೋನಾ ವಾರಿರ‍್ಸ್ ಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಸಂರ‍್ಭದಲ್ಲಿ ಐಡಿಎಂಸಿ ಹೊಯ್ಸಳ ಮಾರುಕಟ್ಟೆ ಸಂಘದ ಅಧ್ಯಕ್ಷ ರಾಜು ಮಾತನಾಡಿ ಪ್ರತಿನಿತ್ಯ ಸ್ವಚ್ಚತೆ ಜೊತೆಗೆ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವ ಪುರಸಭೆಯ ಪೌರ ಕರ‍್ಮೀಕರು ಹಾಗೂ ಪುರಸಭೆಯ ಸಿಬ್ಬಂದಿಗಳಿಗೆ ಲಾಕ್ ಡೌನ್ ಸಂರ‍್ಭದಲ್ಲಿ ಪೋಲೀಸ್ ಇಲಾಖೆ ಹಾಗೂ ಹೊಂಗ್ವರ‍್ಡ್ಸ್ ಸೇರಿದಂತೆ ಕೂಲಿಕರ‍್ಮಿಕರಿಗೆ ಒಂದು ದಿನದ ಉಪಹಾರದ ವ್ಯವಸ್ಥೆಯನ್ನು ಮಾಡಬೇಕು ಎಂಬ ಉದ್ದೇಶದಿಂದ ಸುಮಾರು ೫೦೦ ಕ್ಕೂ ಹೆಚ್ಚು ಜನರಿಗೆ ಮದ್ಯಾಹ್ನದ ಉಪಹಾರದ ವ್ಯವಸ್ಥೆ ಮಾಡುವ ಮೂಲಕ ಅವರ ಸೇವೆಗೆ ನಮ್ಮ ಸಂಘದ ವತಿಯಿಂದ ಒಂದು ಅಳಿಲು ಸೇವೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಗೌರವ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ನಮ್ಮ ಹೊಯ್ಸಳ ಮಾರುಕಟ್ಟೆಯ ಎಲ್ಲಾ ರ‍್ತಕರು ಸೇರಿಕೊಂಡು ಕೊರೊನಾ ವಾರಿರ‍್ಸ್ ಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು,ಅಲ್ಲದೆ ಕೊರೋನಾ ವಾರಿರ‍್ಸ್ ಗಳಾಗಿ ಹಗಲಿರುಳು ಕೆಲಸ ಮಾಡುತ್ತಿರುವ ಇವರಿಗೆ ನೀಡುತ್ತಿರುವ ವೇತನವನ್ನು ಹೆಚ್ಚು ಮಾಡಬೇಕು.ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮುತುರ‍್ಜಿ ವಹಿಸಬೇಕು ಎಂದರು.
ಈ ಸಂರ‍್ಭದಲ್ಲಿ ಪುರಸಭೆ ಅಭ್ಯಂತರರಾದ ಮಧುಸೂದನ್, ಮಾರುಕಟ್ಟೆ ಉಪಾಧ್ಯಕ್ಷ ಯೋಗೇಶ್,ಕರ‍್ಯರ‍್ಶಿ ಪ್ರದೀಪ್, ಸಂತೋಷ್,ಪುನೀತ್,ಕೃಷ್ಣಪ್ಪ,ಮೋಹನ್,ಮಂಜು,ರಿಜ್ವಾನ್,ಶೇಖರ್ ,ಹೊನ್ನಪ್ಪಶೆಟ್ಟಿ,ಗುರುದತ್,ಗುರುಪ್ರಸಾದ್,ವಿನಯ್ ಹಾಜರಿದ್ದರು.