ರಾಜ್ಯ ಮಟ್ಟದ ಚರ್ಚಾಸ್ಪರ್ಧೆಗೆ ಆಹ್ವಾನ

ಕೊಟ್ಟಿಗೆಹಾರ:ಯುವ ವಾಗ್ಮಿಗಳ ಬಳಗ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸಾಹಿತ್ಯ, ಕಲೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುತ್ತಿದ್ದು ರಾಜ್ಯಮಟ್ಟದ ಚರ್ಚಾಸ್ಪರ್ಧೆಯನ್ನು ಏರ್ಪಡಿಸಿದ್ದು ಸ್ಪರ್ಧೆಗೆ  ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಆಯೋಜಕ ದೀಕ್ಷಿತ್ ನಾಯರ್ ತಿಳಿಸಿದ್ದಾರೆ.


ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಸರ್ಕಾರವು ಪಿ.ಯು.ಸಿ ಪರೀಕ್ಷೆ ರದ್ದು ಪಡಿಸಿರುವ ಹಿನ್ನೆಲೆ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು; ವಿದ್ಯಾರ್ಥಿಗಳ ಭವಿಷ್ಯದ ಅಧಃಪತನಕ್ಕೆ ಆಹ್ವಾನವೇ? ವಿಷಯದ ಕುರಿತು ರಾಜ್ಯಮಟ್ಟದ ಚರ್ಚಾಸ್ಪರ್ಧೆಯನ್ನು ಏರ್ಪಡಿಸಿದ್ದು ಸ್ಪರ್ಧೆಗೆ  ನೋಂದಣಿ ಮಾಡಿಸಿಕೊಳ್ಳಬಹುದು. ಹೆಸರು ನೋಂದಾಯಿಸಿಕೊಳ್ಳಲು ಜೂನ್ ೧೮ ಕಡೆ ದಿನಾಂಕವಾಗಿದ್ದು ಸ್ಪರ್ಧೆಯು ಎರಡು ಸುತ್ತು ನಡೆಯುತ್ತದೆ. ವಿಜೇತರಾದ ಐದು ಸ್ಪರ್ಧಿಗಳಿಗೆ ನಗದು ಬಹುಮಾನ ಮತ್ತು ಅಭಿನಂದನಪತ್ರವಿರುತ್ತದೆ. ಮಾಹಿತಿಗಾಗಿ ೭೪೦೬೮ ೫೪೦೦೭ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.


Post a Comment

Previous Post Next Post