ಹಾಸನ: ಕಟ್ಟಡ ಕಾರ್ಮಿಕರಿಗೆ ಸರಕಾರ ನೀಡಲಾಗಿರುವ ೧೦ ಸಾವಿರ ಪುಡ್ ಕಿಟ್ ಗಳು ಶಾಸಕರ ವಯಕ್ತಿಕ ಬಳಕೆಗೆ ಉಪಯೋಗಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ ಗಂಭೀರವಾಗಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರದಂದು ಮಾತನಾಡುತ್ತಾ, ಕೊರೋನಾ ಸೋಂಕು ಆವರಿಸಿ ಲಾಕ್ ಡೌನ್ ಆದೇಶ ಇರುವುದರಿಂದ ಯಾವ ಕೆಲಸವಿಲ್ಲದೇ ಸಮಸ್ಯೆಗೆ ಸಿಲುಕಿರುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಉಪಯೋಗವಾಗಲಿ ಎಂದು ಹಾಸನ ತಾಲೂಕು ಒಂದಕ್ಕೆ ಸರಕಾರವು ೧೦ ಸಾವಿರಕ್ಕೂ ಹೆಚ್ಚು ಆಹಾರದ ಕಿಟ್ ಗಳನ್ನು ಕಳುಹಿಸಿದೆ. ಆದರೇ ಅರ್ಹ ಕಟ್ಟಡ ಕಾರ್ಮಿಕರಿಗೆ ಆಹಾರದ ಕಿಟ್ ಸರಿಯಾಗಿ ಸಿಗದೇ ಇಲ್ಲಿನ ಕ್ಷೇತ್ರದ ಶಾಸಕರು ತಮ್ಮ ಗೋಡನ್ ಗಳಿಗೆ ಎಲ್ಲಾವನ್ನು ಇಳಿಸಿಕೊಂಡು ಅವರಿಗೆ ಬೇಕಾದವರಿಗೆ ಮನೆ ಮನೆಗೆ ಪುಡ್ ಕಿಟ್ ಗಳನ್ನು ಬೆಂಬಲಿಗರೊAದಿಗೆ ಹಂಚುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಕಾರ್ಮಿಕ ಇಲಾಖೆಯಿಂದ ಬಡಕಾರ್ಮಿಕರಿಗೆ ವಿತರಣೆ ಮಾಡುವ ಆಹಾರ ಕಿಟ್ ಗಳನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಸನ ಕ್ಷೇತ್ರದ ಸ್ಥಳೀಯ ಶಾಸಕರು ಹೇಳಿದ ಜಾಗಕ್ಕೆ ಇಡಲಾಗಿರುವುದು ಎಷ್ಟು ಸರಿಯಾಗಿದೆ? ಎಂದು ಪ್ರಶ್ನಿಸಿದರು. ಕಟ್ಟಡ ಕಾರ್ಮಿಕರಿಗೆ ಆಹಾರದ ಕಿಟ್ ಸಿಗದೆ ದುರುಪಯೋಗವಾಗಿದ್ದು, ಇದರಲ್ಲಿ ಬಾಗಿಯಾಗಿರುವ ಸಂಬAಧಪಟ್ಟ ಅಧಿಕಾರಿಗಳ ಮೇಲೆ ಕೂಡಲೆ ಶಿಸ್ತು ಕ್ರಮ ಜರುಗಿಸಬೇಕು. ಇನ್ನು ಹಾಸನ ಕ್ಷೇತ್ರದ ಶಾಸಕರು ಕಾರ್ಮಿಕರಿಗೆ ಅನ್ಯಾಯ ಮಾಡಿ ತಮಗೆ ಇಷ್ಟ ಬಂದವರಿಗೆ ಆಹಾರದ ಕಿಟ್ ನೀಡುತ್ತಿರುವುದನ್ನು ಇಲ್ಲಿನ ಜನತೆ ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ತಾಲೂಕಿನ ಹುಡಾ ಕಛೇರಿ, ನಗರಸಭೆ, ತಾಲೂಕು ಕಛೇರಿ ಸೇರಿದಂತೆ ಎಲ್ಲಾ ಕಛೇರಿಗಳನ್ನು ತನ್ನ ಕಫಿಮುಷ್ಠಿಯಲ್ಲಿ ಶಾಸಕರು ಇಟ್ಟುಕೊಂಡು ತಮಗೆ ಬೇಕಾದ ರೀತಿ ನಡೆಸುತ್ತಿದ್ದಾರೆ. ಯಾವುದೇ ಕಛೇರಿಗೆ ಬಡವರು ಬಂದರೆ ಯಾವ ಕೆಲಸವಾಗುತ್ತಿಲ್ಲ. ಸರಕಾರಿ ಕೆಲಸ ಆಗಬೇಕಾದರೇ ಶಾಸಕರ ಅಪ್ಪಣೆ ಬೇಕು. ಬಳ್ಳಾರಿಯಲ್ಲಿ ಆದಾಗೆ ಹಾಸನದಲ್ಲಿ ರಿಪಬ್ಲಿಕ್ ಹಾಸನವಾಗುತ್ತಿದೆ. ಈರೀತಿ ಆಗದಂತೆ ತಡೆಯಬೇಕು ಎಂದರು. ಇನ್ನು ನಗರದ ಹೊರ ವಲಯದಲ್ಲಿರುವ ಜಾಕಿ ಮತ್ತು ಹಿಮತ್ ಸಿಂಗ್ ಕಾ ಸೇರಿದಂತೆ ವಿವಿಧ ಕಂಪನಿಯಲ್ಲಿ ಕೆಲಸ ಮಾಡುವವರನ್ನು ಯಂತ್ರದAತೆ ಅಗತ್ಯ ಸಮಯಕ್ಕಿಂತ ಹೆಚ್ಚು ಸಮಯಗಳ ಕಾಲ ದುಡಿಸಿಕೊಳ್ಳಲಾಗುತ್ತಿದ್ದು, ಈಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಅಂತಹ ಕಂಪನಿ ಮೇಲೆ ಶಿಸ್ತು ಕ್ರಮ ಜರುಗಿಸಿ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕು ಎಂಬುದು ನಮ್ಮ ಮನವಿ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾಧ ಕೆಲವತ್ತಿ ಸೋಮಶೇಖರ್, ಬಸವರಾಜು ಇತರರು ಉಪಸ್ಥಿತರಿದ್ದರು.