ಕಟ್ಟಡ ಕಾರ್ಮಿಕರ ಪುಡ್ ಕಿಟ್ ವಿತರಣೆಲಿ ದುರುಪಯೋಗ ಖಂಡಿಸಿ ಸಂಸದ ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ

ಹಾಸನ: ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಪುಡ್ ಕಿಟ್ ವಿತರಣೆ ಮಾಡುವಲ್ಲಿ ದುರುಪಯೋಗವಾಗಿದೆ ಎಂದು ಖಂಡಿಸಿ ಹಾಸನದ ಶಾಸಕರ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ನಿಂದ ಡಿಸಿ ಕಛೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.


      ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಹಂಚಬೇಕಾದ ಆಹಾರ ಧಾನ್ಯಗಳ ಕಿಟ್ ಗಳನ್ನು ಶಾಸಕ ಪ್ರೀತಂ ಜೆ ಗೌಡರ ಬೆಂಬಲಿಗರು ತಮ್ಮ ಗೋಡಾನ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಬಿಜೆಪಿ ನಗರಸಭೆ ಸದಸ್ಯರು. ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರಿಗೆ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಹಾಸನ ಜಿಲ್ಲೆಯಲ್ಲಿ ಸುಮಾರು ೫೮ ಸಾವಿರ ಜನ ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡಿದ್ದು ಜಿಲ್ಲೆಗೆ ಇದುವರೆಗು ೨೦ ಸಾವಿರ ಆಹಾರದ ಕಿಟ್ ವಿತರಣೆ ಆಗಿದ್ದು. ಹಾಸನ ವಿಧಾನಸಭೆ ಕ್ಷೇತ್ರದ ಕಟ್ಟಡ ಕಾರ್ಮಿಕರಿಗೆ ನಿಡಬೇಕಾದ ಆಹಾರದ ಕಿಟ್ ಗಳು ಶಾಸಕರ ಬೆಂಬಲಿಗ ಬಾಳೆಕಾಯಿ ಗೋಡಾನ್ ಮತ್ತು ಸಮುದಾಯಭವನಗಳಲ್ಲಿ ಸುಮಾರು ೧೦ ಸಾವಿರ ಕಿಟ್ ದಾಸ್ತಾನು ಮಾಡಿರುವುದಾಗಿ ತಿಳಿದು ಬಂದಿದೆ. ಅಧಿಕೃತವಾಗಿ ಕಾರ್ಯಕ್ರಮ ಏರ್ಪಡಿಸಿ ಆಹಾರದ ಕಿಟ್ ವಿತರಣೆ ಮಾಡಿರುವುದಿಲ್ಲ ಎಂದು ದೂರಲಾಯಿತು. ನಂತರ ಜೆಡಿಎಸ್ ಕಾರ್ಯಕರ್ತರು ಶಾಸಕರಾದ ಪ್ರೀತಂ ಜೆ ಗೌಡರ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿದರು. ನಂತರ ಮನವಿ ಸಲ್ಲಿಸಿದರು. 

      ನಂತರ ಮಾತನಾಡಿದ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಅವರು, ರಾಜ್ಯ ಸರ್ಕಾರದ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ ಮಾಡಲು ಸ್ಥಳೀಯ ಶಾಸಕರು ಮತ್ತು ಸಂಸದರಿಗೆ ಆಹಾರ ಕಿಟ್ ಕೊಡಲಾಗಿದೆ. ಆದರೆ ಹಾಸನ ಶಾಸಕರು ಸರ್ಕಾರದಿಂದ ಬಂದAತಹ ಕಿಟ್ ಗಳನ್ನು ನಾನೆ ಸ್ವತಃ ಹಣಹಾಕಿ ತಂದ ರೀತಿ ತಮ್ಮ ಬೆಂಬಲಿಗರಿಗೆ ಹಂಚುತ್ತಿದ್ದಾರೆ. ನಿಜವಾಗಿ ಯಾರಿಗೆ ಆಹಾರದ ಕಿಟ್ ತಲುಪಬೇಕಿತೊ ಅವರಿಗೆ ತಲುಪಿಲ್ಲ ಎಂದರು. ಹಾಸನ ತಾಲ್ಲೂಕಿನ ಶಾಸಕರೆ ಕಾರ್ಮಿಕ ಇಲಾಖೆ ಅಧಿಕಾರಿ ಬಿಟ್ಟು ತಮ್ಮ ಬೆಂಬಲಿಗರ ಮೂಲಕ ಕಿಟ್ ಹಂಚುತ್ತಿದ್ದಾರೆ. ಕೊರೊನಾ ಮೊದಲನೆ ಆಲೆಯ ೪ ಸಾವಿರ ಕಿಟ್ ಸರಿಯಾಗಿ ಹಂಚಿಕೆಯಾಗಿಲ್ಲದಿರುವುದು ಜಿಲ್ಲಾಡಳಿತದ ವೈಫಲ್ಯವಾಗಿದ್ದು, ಇದರ ಬಗ್ಗೆ ತನಿಖೆಯಾಗಬೇಕು ಮತ್ತು ಸಂಬAದಪಟ್ಟ ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ಕಟ್ಟಡ ಕಾರ್ಮಿಕ ಅಧ್ಯಕ್ಷರೆ ನನ್ನ ಬಳಿ ಹೇಳಿದ್ದು, ನಿಜವಾದ ಒಬ್ಬ ಕಟ್ಟಡ ಕಾರ್ಮಿಕರಿಗೆ ಆಹಾರದ ಕಿಟ್ ಸಿಕ್ಕಿಲ್ಲವೆಂದು. ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆ ಅಧಿಕಾರಿಗಳ ಬಳಿ ಈ ಬಗ್ಗೆ ಕೇಳಿದ್ದಾರೆ ನಾವು ಹೆಚ್ಚುವರಿ ಕಿಟ್ ತರಿಸಿ ಹಂಚುತ್ತೆವೆ ಮಾಧ್ಯಮದ ಮುಂದೆ ಹೊಗಬೇಡಿ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಹೇಳುತ್ತಾರೆ. ಸರ್ಕಾರದ ಲಸಿಕೆಗೆ ಶಾಸಕರು ತಮ್ಮ ಬ್ಯಾನರ್ ಹಾಕಿ ನನ್ನ ಸ್ವಂತ ಹಣದಿಂದ ಲಸಿಕೆ ಕೊಡುತ್ತಿದ್ದೆನೆಂದು ಬಿಟ್ಟಿ ಪ್ರಚಾರ ಕೊಡುತ್ತಿದ್ದಾರೆ. ಪ್ರಾಥಮಿಕ ಕೇಂದ್ರದ ವೈದ್ಯರಿಗೆ ಬೆದರಿಸಿ ತಮ್ಮ ಬೆಂಬಲಿಗರಿಗೆ ಲಸಿಕೆ ಕೊಡಿಸಿದ್ದಾರೆ. ಶಾಸಕರ ಬೆಂಬಲಿಗರು ಹಣ ಪಡೆದು ಸಾರ್ವಜನಿಕರಿಗೆ ಲಸಿಕೆ ಕೊಡಿಸಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿ ಇಲ್ಲದೆ ಆಹಾರದ ಕಿಟ್ ವಿತರಣೆ ಮಾಡಿದ್ದಾರೆ. ಬಿಜೆಪಿ ಬೆಂಬಲಿಗನ ಮನೆಯಲ್ಲಿ ಕಿಟ್ ದಾಸ್ತಾನು ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು. ಈಬಗ್ಗೆ ಕ್ರಮಕೈಗೊಳ್ಳದಿದ್ದರೇ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು. 

     ಅರಸೀಕೆರೆ ನಗರಸಭೆ ಜೆಡಿಎಸ್ ಸದಸ್ಯರನ್ನು ಭ್ರಷ್ಟಾಚಾರದ ಹಣದಲ್ಲಿ ಖರೀದಿ ಮಾಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದಲ್ಲು ಹಾರ್ಸ್ ರೈಡಿಂಗ್ ನಡೆಯುತ್ತಿದೆ. ದುಡ್ಡು ಪಡೆದ ಸದಸ್ಯರು ಮಾನ ಮರ್ಯಾದೆ ಇಲ್ಲದೆ ಎಲ್ಲೋ ಕುಳಿತು ಮಾತನಾಡುತ್ತಿದ್ದಾರೆ. ಶಾಸಕರಾದ ಶಿವಲಿಂಗೇಗೌಡ ತಾಲ್ಲೂಕಿನ ಸಣ್ಣ ಸಮಾಜ ಗುರುತಿಸಿ ಸಮಾಜದ ಅಭಿವೃದ್ಧಿ ಮಾಡಿದ್ದಾರೆ. ಅರಸೀಕೆರೆ ಕ್ಷೇತ್ರದ ೪೦೦ ಹಳ್ಳಿಗಳಿಗು ಹೇಮಾವತಿ ಕುಡಿಯುವ ನೀರಿನ ಯೊಜನೆ ಕಲ್ಪಿಸಿದ್ದಾರೆ. ಪಕ್ಷಾಂತರ ಮಾಡಿ ಹೊಗಿರುವ ಸದಸ್ಯರ ಬಗ್ಗೆ ನಾವು ಹೇಳುವುದು ಬೇಡ ಅರಸೀಕೆರೆ ಜನರೆ ಮಾತನಾಡುತ್ತಿದ್ದಾರೆ ಎಂದರು. 

      ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಹೆಚ್.ಪಿ. ಸ್ವರೂಪ್, ನಗರಸಭೆ ಸದಸ್ಯರಾದÀ ಸಿ.ಆರ್. ಶಂಕರ್, ಗಿರೀಶ್ ಚನ್ನವೀರಪ್ಪ, ರಫೀಕ್ ಅಹಮದ್, ಕ್ರಾಂತಿ, ಅಗಿಲೆ ಯೋಗೀಶ್, ದಸ್ತಾಗೀರ್, ರಘು, ಅಕ್ಮಲ್, ಬಿದರಿಕೆರೆ ಜಯರಾಮ್ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post