ಊಟ ನೀಡದೆ ಬಂದ್ ಆದ ಇಂದಿರಾ ಕ್ಯಾಂಟೀನ್

ಸಕಲೇಶಪುರ: ಕೋವಿಡ್ ಲಾಕ್‌ಡೌನನಂತಹÀ ತುರ್ತ ಸಂಧರ್ಭದಲ್ಲಿ ಜನರಿಗೆ ಉಚಿತ ಆಹಾರ ನೀಡಬೇಕಿದ್ದ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ತಿಂಡಿ ಸಿಗದೆ ಬಡ ಜನರು ಉಪವಾಸ ಬಿಳುವಂತಾಗಿದೆ.
ಪಟ್ಟಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲ ದಿನಗಳಿಂದ ಹಸಿದು ಬರುವ ಬಡ ಜನರು ಹಾಗೂ ನಿರ್ಗತಿಕರಿಗೆ ಊಟ ತಿಂಡಿ ನೀಡುತಿಲ್ಲಾ , ಕ್ಯಾಂಟೀನ್‌ನಲ್ಲಿ ಯಾವುದೇ ಸಿಬ್ಬಂದಿ ಇಲ್ಲದೆ ಊಟಕ್ಕಾಗಿ ಬರುವ ಜನರು ಹೊಟ್ಟೆಗೆ ಹಿಟ್ಟಿಲ್ಲದೆ ವಾಪಸ್ಸು ಹೊಗುವಂತಾಗಿದೆ.
ಇಲ್ಲಿ ಊಟ ಕೊಡುತಿಲ್ಲ ಎಂಬ ಸುದ್ದಿ ತಿಳಿದು ಶುಕ್ರವಾರ ಪುರಸಭೆ ಅಧ್ಯಕ್ಷ ಹಾಗೂ ಕೆಲ ಸದಸ್ಯರು ಭೇಟಿ ನೀಡಿದ ಸಂಧರ್ಭ, ಇಂದಿರಾ ಕ್ಯಾಂಟೀನ್‌ನ ಗುತ್ತಿಗೆದಾರಗಾಲಿ, ಸಿಬ್ಬಂದಿಗಳಾಗಲಿ ಯಾರು ಇರಲಿಲ್ಲಾ. ಕ್ಯಾಂಟೀನ್ ಅನರ್ಮೈಲ್ಯದಿಂದ ಕೂಡಿತ್ತು, ಅಡುಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಕೆಲ ಪಾದರ್ಥಗಳು ಬಿದ್ದಿದ್ದರೆ, ಹಿಟ್ಟು ರುಬ್ಬವ ಯಂತ್ರ ತುಕ್ಕು ಹಿಡಿದಿದ್ದು ಅದು ಚಾಲನೆಯಯಾಗದೆ ಹಲವು ತಿಂಗಳೆ ಕಳೆದಿದೆ. 
ಕ್ಯಾಂಟಿನಲ್ಲಿ ಅಳವಡಿಸಿರುವ ಶುದ್ಧ ನಿರಿನ ಯಂತ್ರದಲ್ಲಿ ಪಾಚಿ ಕಟ್ಟಿದ ಫಿಲ್ಟರ್‌ನಿಂದ ನೀರು ಬರುತಿದ್ದು. ಅದರೊಳಗೆ ಗಿಡ ಬೆಳೆದಿದೆ. ಕ್ಯಾಂಟೀನ ಒಳಗೆ ಹಾಗೂ ಹೊರಗೆ ಸ್ವಚ್ಛತೆಯ ನಿರ್ವಹಣೆ ಇಲ್ಲದೆ, ಇಲ್ಲಿ ಊಟಕ್ಕೆ ಬಂದರೆ ಸಾಂಕ್ರಮಿಕ ರೋಗ ಹರಡುವುದು ಗ್ಯಾರಂಟಿ ಎಂಬAತಾಗಿದೆ.

 
ಲಾಕ್‌ಡೌನ್ ಸಂಧರ್ಭದಲ್ಲಿ ಬಡ ಜನರಿಗೆ ಊಟ ತಿಂಡಿ ನೀಡದೆ ಗುತ್ತಿಗೆದಾರರು ಮೋಸ ಮಾಡುತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡುತಿದ್ದು, ಕೂಡಲೆ ಗುತ್ತಿಗೆ ದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರ ಗುತ್ತಿಗೆಯನ್ನು ರದ್ದು ಮಾಡಬೇಕು 
ಕಾಡಪ್ಪ, ಪುರಸಭೆ ಅಧ್ಯಕ್ಷರು

ಇಂದಿರಾ ಕ್ಯಾಂಟೀನ್‌ನಲ್ಲಿ ಹಸಿದು ಬರುವ ಬಡ ಜನರಿಗೆ ಊಟ ತಿಂಡಿ ನೀಡದೆ ಮೋಸÀ ಮಾಡುತಿದ್ದಾರೆ. ಪ್ರತಿ ನಿತ್ಯ 300 ಕ್ಕೂ ಊಟ ತಿಂಡಿ ನೀಡಿದ್ದೇವೆ ಎಂದು ಗುತ್ತಿಗೆದಾರರು 27,000 ರೂಪಾಯಿಷ್ಟು ಹಣವನ್ನುವನ್ನು ಸರ್ಕಾರದಿಂದ ಪಡೆಯಿತ್ತದೆ. ಇದಕ್ಕೆ ಕೆಲ ಅಧಿಕಾರಿಗಳು ಶಾಮಿಲಾಗಿದ್ದಾರೆ.

Post a Comment

Previous Post Next Post