ಆಲೂರು: ಸೋಮವಾರ ಚನ್ನಹಳ್ಳಿ ಗ್ರಾಮದಲ್ಲಿ ನಡೆದ ಸ್ಪೋಟ ಪ್ರಕರಣ ಕುರಿತು ಪೊಲೀಸ್ ಇಲಾಖೆ, ಬಾಂಬ್ದ ನಿಷ್ಕ್ರೀಯ ಳದ ಸಹಕಾರದೊಂದಿಗೆ ತನಿಖೆ ಚುರುಕುಗೊಳಿಸಿದೆ.
ಸ್ಪೋಟಗೊಂಡ ಸಮೀಪ ಕೆಲ ರ‍್ಷಗಳಿಂದ ಒಂದೆ ಸ್ಥಳದಲ್ಲಿ ನಿಂತಿದ್ದ ಲಾರಿಯೊಂದರಲ್ಲಿ, ೭೦ ಡೆಟೋನೇರ‍್ಸ್, ಜೆಲ್, ಉಪ್ಪು ದೊರಕಿದೆ. ನ್ಯಾಯಾಲಯದ ಅನುಮತಿ ಪಡೆದು ನಿಷ್ಕಿçಯೆಗೊಳಿಸಿ ಮಾದರಿಯನ್ನು ಎಫ್.ಎಸ್.ಎಲ್. ಗೆ ಕಳುಹಿಸಿಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಪೊಲೀಸ್ ಅಧೀಕ್ಷಕಿ ನಂದಿನಿ ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಚ್. ಕೆ. ಕುಮಾರಸ್ವಾಮಿ ಯವರು ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಎತ್ತಿನಹೊಳೆ ಯೋಜನೆ ಗುತ್ತಿಗೆದಾರರ ನರ‍್ಲಕ್ಷದಿಂದ ಸೋಮವಾರ ನಡೆದ ಸ್ಪೋಟದಲ್ಲಿ ಎರಡು ಮಕ್ಕಳಿಗೆ ಗಾಯಗಳಾಗಿವೆ. ಗಾಯಾಳುಗಳು ಮತ್ತು ಕುಟುಂಬದ ನರ‍್ವಹಣೆಯನ್ನು ರ‍್ಕಾರ ಮತ್ತು ಗುತ್ತಿಗೆದಾರರು ಹೊರಬೇಕು.
ವಾಟೆಹೊಳೆ ಜಲಾಶಯ ಸಮೀಪದಲ್ಲಿ ಸ್ಪೋಟ ಪ್ರಕರಣ ನಡೆದಿರುವುದರಿಂದ ಲಾರಿಯಲ್ಲಿ ದೊರಕಿರುವ ವಸ್ತುಗಳ ಬಗ್ಗೆ ತನಿಖೆಯಾಗಬೇಕು. ರಾಜ್ಯದಲ್ಲಿ ಇದು ಐದನೆ ಘಟನೆಯಾಗಿದೆ. ಈಗಾಗಲೆ ಘಟನೆ ಬಗ್ಗೆ ಎಫ್.ಐ.ಆರ್. ದಾಖಲಾಗಿದೆ ಎಂದರು.
ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ಡಿವೈಎಸ್ಪಿ ಗೋಪಿ, ಪೊಲೀಸ್ ಇನ್ಸ್ಪೆಕ್ಟರ್ ಬಿ. ಜಿ. ಕುಮಾರ್. ತಾ. ಪಂ. ನರ‍್ವಹಣಾಧಿಕಾರಿ ಎಚ್. ಕೆ. ಸತೀಶ್, ಎಪಿಎಂಸಿ ನರ‍್ದೇಶಕ ಕೆ. ಎಸ್. ಮಂಜೇಗೌಡ ಭೇಟಿ ನೀಡಿದ್ದರು
: ಆಲೂರು ತಾ. ಚನ್ನೇನಹಳ್ಳಿ ಗ್ರಾಮದಲ್ಲಿ ಜಿಲೆಟಿನ್ ಸ್ಪೋಟಕ್ಕೆ ಸಂಬಂಧಿಸಿದಂತೆ, ಲಾರಿಯಲ್ಲಿ ಡೆಟೋನೇರ‍್ಸ್, ಜಿಲೆಟಿನ್, ತಂತಿ, ಉಪ್ಪು ದೊರಕಿದೆ.
ಬಾಂಬ್ ನಿಷ್ಕಿçಯ ದಳ ಸ್ಪೋಟ ಪ್ರಕರಣದ ಸ್ಥಳದಲ್ಲಿ ತನಿಖೆ ಕೈಗೊಂಡಿತು. ಶಾಸಕ ಎಚ್. ಕೆ. ಕುಮಾರಸ್ವಾಮಿ, ಎ.ಎಸ್ಪಿ. ನಂದಿನಿ, ತಹಶೀಲ್ದಾರ್ ಶಿರೀನ್‌ತಾಜ್, ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಇತರರು ಹಾಜರಿದ್ದರು.
