ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಅವರು ತಿರುಗೇಟು ನೀಡಿದ್ದಾರೆ.

 ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಜೆಡಿಎಸ್ ಸಂಘಟನೆ ಮಾಡಲು ಸಾಧ್ಯವಾಗದೆ  ಹತಾಶರಾಗಿಕಾಂಗ್ರೆಸ್ ‌ಪಕ್ಷದ‌  ಬಗ್ಗೆ ‌ಇಲ್ಲ ಸಲ್ಲದ‌ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ‌ಮುಖಂಡ ಬಾಗೂರು ಮಂಜೇಗೌಡ ಅವರು ತಿರುಗೇಟು ನೀಡಿದ್ದಾರೆ. 



 ಪತ್ರಿಕೆ ಹೇಳಿಕೆ ನೀಡಿರುವ ಅವರು ತಮ್ಮ ಪಕ್ಷದಲ್ಲಿರುವ ಬಿರುಕು ಸರಿಪಡಿಸಿಕೊಳ್ಳಲು‌ ಆಗದ‌ ಇರುವ ಕಾಂಗ್ರೆಸ್ ‌ಪಕ್ಷದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಸಿದ್ದರಾಮಯ್ಯ ‌ಅವರು ಪಕ್ಷದ‌  ಶಕ್ತಿ‌ ಏನೆಂಬುವುದು  ಕಾಂಗ್ರೆಸ್  ಕರ‍್ಯರ‍್ತರಿಗೆ ಗೊತ್ತಿದೆ.ಅದನ್ನು ರೇವಣ್ಣ ರ‍್ಥ  ಮಾಡಿಸುವ ಅಗತ್ಯವಿಲ್ಲ.‌ ಸುಖಾಸುಮ್ಮನೆ ಏನೇನೋ ಗೊಂದಲ  ಹೇಳಿಕೆ ‌ನೀಡುವ‌ ಮೂಲಕ  ಪ್ರಚಾರಗಿಟ್ಟಿಸಿಕೊಂಡು ರಾಜ್ಯಮಟ್ಟದಲ್ಲಿ ಜಿಲ್ಲೆಯ‌ ಶಾಸಕರ ಕೆಲಸ ಕರ‍್ಯಗಳು‌ ನಡೆಯದಂತೆ ಆಗಾಗ ತಂತ್ರಗಾರಿಕೆ ನಡೆಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


‌ಮುಂದಿನ ಸಿಎಂ ಸಿದ್ದರಾಮಯ್ಯ  ಎಂದು ಘೋಷಿಸಲಿ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದ್ದಾರೆ. ಇಂತಹ ಹೇಳಿಕೆಗಳನ್ನು ‌ನೀಡಲು ರೇವಣ್ಣ ಅವರು ಕಾಂಗ್ರೆಸ್ ಪರ‍್ಟಿ ಯಲ್ಲಿದ್ದಾರೆಯೇ ಎಂದು ಪ್ರಶ್ನಿಸಿರುವ ಅವರು ,ಕಾಂಗ್ರೆಸ್ ಪಕ್ಷ ರೇವಣ್ಣ ಅವರಿಂದ ‌ಸಲಹೆ ಸ್ವೀಕರಿಸುವ ಅಗತ್ಯವಿಲ್ಲ. ಇಂತಹ ಹೇಳಿಕೆಯಿಂದ ಮುಂದಿನ‌ ದಿನಗಳಲ್ಲಿ ಜೆಡಿಎಸ್ ಗೆ ಭವಿಷ್ಯ ‌ಇಲ್ಲ ಎಂಬುವುದನ್ನು ಇವರೇ ಸಾಕ್ಷೀಕರಿಸಿದ್ದಾರೆ  ಎಂದಿದ್ದಾರೆ.


ರೇವಣ್ಣ ಅವರನ್ನು ಜೆಡಿಎಸ್ ಮೂಲೆ ಗುಂಪು ಮಾಡಿದೆ.ಅದಕ್ಕಾಗಿ ಕೆಲಸವಿಲ್ಲದೆ  ಕಾಂಗ್ರೆಸ್ ಬಗ್ಗೆ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ.ಕಾಂಗ್ರೆಸ್ ‌ವಿಶಾಲವಾದ ಪಕ್ಷ ಇದರ ರಾಜಕೀಯ ‌ಚಟುವಟಿಕೆಗಳ‌ ಬಗ್ಗೆ ‌ರ‍್ಚಿಸಲು ಹೈಕಮಾಂಡ್ ಸಧೃಡವಾಗಿದೆ.ರೇವಣ್ಣ  ಅವರು ಕಾಂಗ್ರೆಸ್ ‌ಬಗ್ಗೆ‌‌  ಒಲವು ತೋರಿಸುತ್ತಿದ್ದಾರೆ. ಪಕ್ಷಕ್ಕೆ‌ ಬರುವುದಾದರೆ ಬಹಿರಂಗ ‌ಪಡಿಸಲಿ ಅದನ್ನು  ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.


ಹಾಸನ‌ ಜಿಲ್ಲೆಗೆ‌ ಮುಖ್ಯ ಮಂತ್ರಿ‌ ಬಂದು ಹೋಗಿದ ಮೇಲೆ ಬಿಜೆಪಿ ಬಗ್ಗೆ ಪ್ರೀತಿ ಹೆಚ್ಚಾಗಿದೆ. ಕಡತಗಳಿಗೆ ಸಹಿ ಹಾಕಿಸಿಕೊಳ್ಳಲು‌ ನಾಟಕೀಯ ಮಾತನಾಡುತ್ತಿದ್ದಾರೆ.ಜೆಡಿ ಎಸ್‌ ಹುಳುಕು ಮುಚ್ಚಿಕೊಳ್ಳಲು  ಸಲ್ಲದ ಹೇಳಿಕೆ‌ ನೀಡುತ್ತಿರುವುದು ಖಂಡನೀಯ ಎಂದಿದ್ದಾರೆ.

Post a Comment

Previous Post Next Post