ಹಸಿರುಭೂಮಿ ಪ್ರತಿಷ್ಠಾನ

ಹಾಸನ|| ಕೋವಿಡ್ ಕಾಲದಲ್ಲಿ ಮಾನವ ಯಥೇಚ್ಛವಾಗಿ ತೊಂದರೆಗೊಳಗಾಗಿದ್ದು ಆಮ್ಲಜನಕದ ಅಲಭ್ಯತೆಯ ಕುರಿತು ಮತ್ತು ಕೋವಿಡ್ ಪ್ಯಾಂಡಮಿಕ್ ವಿವಿಧ ಅವತಾರಗಳು ಮತ್ತು ಅಲೆಗಳು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ಮಾರ್ಮಿಕವಾಗಿ ಹೇಳಿದರು. ಅವರು ಇತ್ತೀಚೆಗೆ ನಗರದ ಕೇಂದ್ರೀಯ ವಿದ್ಯಾಲಯದ ಆವರಣದಲ್ಲಿ ಹಸಿರುಭೂಮಿ ಪ್ರತಿಷ್ಠಾನವು ಕೇಂದ್ರೀಯ ವಿದ್ಯಾಲಯ ಹಾಗೂ ಹಾಸನ ಅರಣ್ಯ ಇಲಾಖೆಯ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವನಮಹೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು.


ಕೋವಿಡ್ ಮಹಾರೋಗ ಹಣ್ಣು ತಿನ್ನುವ ಬಾವಲಿಗಳ ಮೂಲಕ ಮಾನವನಿಗೆ ತಲುಪಿದ್ದು ಅದು ಶ್ವಾಸಕೋಶಕ್ಕೆ ನುಗ್ಗಿ ಅವನ ಅಸ್ತಿತ್ವವನ್ನೇ ಧ್ವಂಸ ಮಾಡಿತು ಇದು ಏನು ಪಾಠ ಹೇಳುತ್ತೆ ಅಂದರೆ ಕೋವಿಡ್ ಸಸ್ಯಗಳಲ್ಲಿಯೂ ಇದೆ, ಪ್ರಾಣಿ-ಪಕ್ಷಿಗಳಲ್ಲಿಯೂ ಇದೆ ಆದರೆ ಇದರಿಂದ ಮರಗಿಡ-ಪ್ರಾಣಿಪಕ್ಷಿಗಳಿಗೆ ಯಾವ ಹಾನಿಯೂ ಆಗಿಲ್ಲ, ಆಗುವುದಿಲ್ಲ. ಕಾರಣ ಇವೆಲ್ಲವೂ ಪರಿಸರ ಮುಖಿ, ಮಾನವನಿಗೆ ಮಾತ್ರವೇ ಮಾರಣಾಂತಿಕವಾಗಿರಲು ಕಾರಣ ಮಾನವ ಪರಿಸರ ಸಂಬAಧದಿAದ ಕಳಚಿ ತನ್ನದೇ ಪಾರುಪತ್ಯ ಬೆಳಸಿಕೊಂಡ ಕಾರಣಕ್ಕೆ ನಿಸರ್ಗ ಒದಗಿಸಬಹುದಾದ ಪರಿಹಾರಕ್ಕೆ ದೂರವಾಗಿದ್ದಾನೆ ಎಂದು ವಿವರಿಸಿದರು.

ಜೀವ ವಿಕಾಸದ ಪ್ರಕ್ರಿಯೆಯಲ್ಲಿ ಮೊದಲು ಬಂದದ್ದು ಮರಗಿಡಗಳು, ಅವುಗಳ ಚಯಾಪಚಯ ಕ್ರಿಯೆಯ ಮೂಲಕ ಹಂತ ಹಂತವಾಗಿ ಜೀವಿಗಳ ವಿಕಾಸ, ಕಡೆಯಲ್ಲಿ ಮಾನವನ ವಿಕಾಸವಾಯಿತು ಈ ವಿಕಾಸ ಪ್ರಕ್ರಿಯೆಗೆ ಮತ್ತು ನಂತರದ ಜೀವಿಗಳಿಗೆ ಪೂರ್ವಜೀವಿ ಮರ-ಗಿಡಗಳು ಹೇರಳವಾಗಿ ಶಕ್ತಿಯನ್ನ ಪೂರೈಸುತ್ತಾಬರುತ್ತಿವೆ ಆದರೆ ಕಡೆಯಲ್ಲಿ ವಿಕಾಸಗೊಂಡ ಮಾನವನ ಅಧೋಮುಖ ಅಭಿವೃದ್ಧಿಯ ನಡವಳಿಕೆಗಳು ಪ್ರೆöÊಮರಿ ಪ್ರಡ್ಯೂರ‍್ಗಳ ಅಸ್ತಿತ್ವವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ಕಾರಣಕ್ಕೆ ಮಾರಣಾಂತಿಕ ರೋಗಗಳು ಉದ್ಭವವಾಗುತ್ತಿರುವುದು ಎಂದು ಸವಿವರವಾಗಿ ವಿವರಿಸಿದ ಅವರು

ದೇಹದೊಳಗಿನ ಶ್ವಾಸಕೋಶ ಎಂಬ ಮರಕ್ಕೂ ಭೂಮಿಯ ಮೇಲಿರುವ ಮರಗಳ ರಾಶಿಗಳಿಗೂ ಒಂದಕ್ಕೊAದು ಅಂತರ್ಸAಬಧ ಇದೆ, ಅದೇ ನಾವು ಹೊರಬಿಟ್ಟಿದ್ದನ್ನ ಅದು ಒಳ ಸೆಳೆದುಕೊಳ್ಳುತ್ತದೆ ಅದು ಇಂಗಾಲದ ಡೈ ಆಕ್ಸೆöÊಡ್, ಅದು ಹೊರ ಬಿಟ್ಟಿದ್ದನ್ನ ನಾವು ಒಳಗೆಳೆದುಕೊಳ್ಳುತ್ತೇವೆ ಅದುವೇ ಆಮ್ಲಜನಕ ನಾವು ಕೊಡುವ ಇಂಗಾಲಕ್ಕೆ ಪ್ರತಿಯಾಗಿ ಯಥೇಚ್ಛಾವಾಗಿ ಆಮ್ಲಜನಕ ಕೊಡುವ ಮರಗಳನ್ನ, ಪ್ರಕೃತಿಯನ್ನ ನಾವು ಕಾಪಿಟ್ಟುಕೊಳ್ಳಬೇಕಿದೆ ಈ ನಿಟ್ಟಿನಲ್ಲಿ ಮಾನವ ಜೀವಿಗಳನ್ನ ಎಚ್ಚರಿಸಲು ಒಂದು ಕಡೆ ಕೊರೋನಾ ಬಂದಿದ್ದರೆ ಇನ್ನೊಂದು ಕಡೆ ವಿಶ್ವ ಸಂಸ್ಥೆ ನಮ್ಮ ಪರಿಸರ ವ್ಯವಸ್ಥೆಯನ್ನ ಪುರ್‌ನಿರ್ಮಿಸಿ ಎಂಬ ಘೋಷಣೆ ನಿಡಿ ಹತ್ತು ವರ್ಷಗಳ ಗಡುವನ್ನೂ ಕೂಡ ನೀಡಿದೆ ಎಂದು ತಿಳಿಸಿ ಎಲ್ಲೆಲ್ಲೂ ವನರಾಶಿಗಳನ್ನ ಹಬ್ಬಿಸಲು ಮಾನವ ಸೈನ್ಯವನ್ನು ಸಜ್ಜುಗೊಳಿಸಬೇಕಿದೆ ಎಂದರು.

ವನಮಹೋತ್ಸವವನ್ನು ಸಂಚಾಲಿಸಿದ ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷ ಪುಟ್ಟಯ್ಯ ಮಾತನಾಡಿ ಬಾಯಿಗಳಿಗಿಂತ ಕೈಗಳು ಹೆಚ್ಚು ಕೆಲಸ ಮಾಡಬೇಕಾದ ಕಾಲ. ಭೂಮಿಯನ್ನ ತೀವ್ರವಾಗಿ ಏರುತ್ತಿರುವ ಬಿಸಿಯಿಂದ ತಂಪಾಗಿಸಿಡಲು ಕನಿಷ್ಠ ೩೩% ಅರಣ್ಯದ ಅಗತ್ಯವಿದೆ ಹಾಗಾಗಿ ಹಸಿರುಭೂಮಿ ಪ್ರತಿಷ್ಠಾನ ಗಿಡನೆಡೋಣ ಉಸಿರು ಉಳಿಸಿಕೊಳ್ಳೋಣ ಹಾಗೂ ಜಲಸಂರಕ್ಷಣಾ ರಚನಾತ್ಮಕ ಚಟುವಟಿಕೆಗಳನ್ನು ಜನರ ಸಹಭಾಗಿತ್ವದಲ್ಲಿ ಕಳೆದ ೪ ವರ್ಷಗಳಿಂದಲೂ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಈಗ ಜನರು ಹೆಚ್ಚೆಚ್ಚು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ ಹಾಗೂ ಹಸಿರುಭೂಮಿ ಪ್ರತಿಷ್ಠಾನದ ಸದಸ್ಯ ಆರ್.ಪಿ.ವೆಂಕಟೇಶಮೂರ್ತಿ ಮಾತನಾಡಿ ಪರಿಸರ, ಕಾಡು, ಮರ, ನೆಲ, ಜಲ ಇದು ಕೇವಲ ಮಾತನಾಡುವ ವಿಷಯಮಾತ್ರವೇ ಅಲ್ಲ ಇದರ ಸಂರಕ್ಷಣೆ ಅತ್ಯಗತ್ಯ ಎನ್ನುವುದನ್ನ ಜನರಿಗೆ ಮನದಟ್ಟು ಮಾಡಿಸುವುದು ಅತ್ಯಂತ ಸಾಹಸದಾಯಕ ಕೆಲಸ ಎಂದು ತಮ್ಮ ಕಣ್ಣೆದುರೇ ಓದಿಕೊಂಡ ನಾಗರೀಕನೊಬ್ಬ ಮನೆಯ ಕಸವನ್ನು ಕೆರೆಯ ಒಳಗೆ ಎಸೆದಿದ್ದನ್ನು ನೆನಪಿಸಿ ನೋವಿನಂದ ನುಡಿದ ಅವರು ಇನ್ನು ಜನರಲ್ಲಿ ಪರಿಸರಕ್ಕಾಗಿ ಬದ್ಧರನ್ನಾಗಿಸುವ ಪ್ರಕ್ರಿಯೆ ಅತ್ಯಂತ ಸವಾಲಿನದ್ದು ಆದರೂ ಈ ಕೆಲಸ ಮಾಡದಿದ್ದರೆ ಪರಿಸರದ ಉಳಿವು ಅಸಾಧ್ಯ ಎಂದು ನುಡಿದು ಶಾಲೆ-ಕಾಲೇಜುಗಳ ಮೂಲಕ ಪರಿಸರ ಸಾಕ್ಷರತೆಯ ಚಟುವಟಿಕೆ ಬಲಗೊಳ್ಳಬೇಕು ಎಂದು ಹೇಳಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಹಸಿರುಭೂಮಿ ಪ್ರತಿಷ್ಠಾನದ ಕಾರ್ಯದರ್ಶಿ ಚಿನ್ನೇನಳ್ಳಿ ಸ್ವಾಮಿ ಕೋವಿಡ್ ಪರಿಸರ ಸಂರಕ್ಷಣೆಯ ಪಾಠವನ್ನು ನಮಗೆ ಚೆನ್ನಾಗಿ ಕಲಿಸಿದೆ, ಅದು ಮಾನವನನ್ನು ಕೃತಕ ಆಮ್ಲಜನಕದ ಮೂಲಕ ಬದುಕುವ  ಹಂತಕ್ಕೆ ತಳ್ಳಿ ಸಾವಿರಾರು ಜನರನ್ನ ಬಲಿತೆಗೆದುಕೊಂಡಿದೆ ಈ ನರಬಲಿ ಹೇಳುತ್ತಿರುವುದು ನೆಲದ ಮೇಲೆ ಸಜೀವ ಆಮ್ಲಜನಕವನ್ನ ಹೆಚ್ಚಿಸುವ ಕೆಲಸ ಆಗಬೇಕು ಎಂದು ಎಂದು ಮಾರ್ಮಿಕವಾಗಿ ನುಡಿದ ಅವರು ಅದು ಪರಿಸರ ಸಂರಕ್ಷಣೆಯಿAದ ಮಾತ್ರವೇ ಸಾಧ್ಯ ಹಾಗಾಗಿ ಮರ ಉಳಿಸುವುದು, ಗಿಡನೆಡುವುದು, ಕೆರೆ-ಕಲ್ಯಾಣಿ ಸಂರಕ್ಷಣೆ ಮತ್ತು ಸಂಪೋ಼ಣೆ ಹಾಗೂ ಒಂದಿಷ್ಠ ಪರಿಸರ ಪಾಠ ಅರಿಯುವ ಮೂಲಕ ಎಂದರು. ಈ ಪಾಠವನ್ನ ಹೇಳಲು ಹಸಿರುಭೂಮಿ ಪ್ರತಿಷ್ಠಾನ ಕಳೆದ ನಾಲ್ಕು ವರ್ಷಗಳಿಂದಲೂ ಶ್ರಮಿಸುತ್ತಿದೆ ಎಂದ ಅವರು ಇತ್ತೀಚೆಗೆ ಅರಣ್ಯ ಇಲಾಖೆ ಪ್ರತಿಷ್ಠಾನದ ಜೊತೆ ಕೈಜೋಡಿಸಿ ಪರಿಸರಬಲವರ್ಧನೆ ಚಟುವಟಿಕೆಯನ್ನ ವೇಗವಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ವಾಲ್ಮೀಕಿ ಮಾತನಾಡಿ ಬಯಲಂಗಳವಾಗಿದ್ದ ಕೇಂದ್ರೀಯ ವಿದ್ಯಾಲಯದ ಹನ್ನೆರೆಡೆಕರೆ ಪ್ರದೇಶವನ್ನ ಹಸಿರು ಬನಗಳ ಶಾಂತನಿಕೇತನ ಮಾಡಿದ ಇಡಿ ಸಂಸ್ಥೆಯ ಸಿಬ್ಬಂಧಿ ಅಭಿನಂದನಾರ್ಹರು ಹೀಗೆಯೆ ಎಲ್ಲ ಸಂಸ್ಥೆಯ ಅಂಗಳಗಳು ಕನಿಷ್ಠಾ ೩೦% ಜಾಗ ಹಸಿರುಬನಗಳನ್ನಾಗಿಸುವ ಪ್ರೇರಣೆ ನೀಡ ಬೇಕು ಎಂದು ಆಶಿಸಿದರು.

ಕಾರ್ಯಕ್ರಮವನ್ನು ಕೇಂದ್ರೀಯ ವಿದ್ಯಾಲಯದ ಸಂಸ್ಕೃತ ಶಿಕ್ಷಕ ವಿ.ವಿ.ಭಟ್ ನಿರ್ವಹಿಸಿದರು, ಅರಣ್ಯ ಇಲಾಖೆಯ ಸಿಬ್ಬಂದಿ ಸಂತೋಷ್ ಸ್ವಾಗತಿಸಿ ಕಡೆಯಲ್ಲಿ ಕೇಂದ್ರೀಯ ವಿದ್ಯಾಲಯದ ಶಿಕ್ಷಕ ವಾಜಿದ್ ವಂದಿಸಿದರು. ಈ ಸಂದರ್ಬದಲ್ಲಿ ಹಸಿರುಭೂಮಿ ಪ್ರತಿಷ್ಠಾನದ ಉಪಾಧ್ಯಕ್ಷ ಮಒಂಜುನಾಥ್, ಖಜಾಂಚಿ ಅಹಮದ್ ಹಗರೆ, ಸಹಕಾರ್ಯದರ್ಶಿ ಮಮತಾಪ್ರಭು, ಸದಸ್ಯರುಗಳಾದ ಸುಬ್ಬಸ್ವಾಮಿ, ಅಪ್ಪಾಜಿಗೌಡ, ವೆಂಕಟೇಗೌಡ, ಹಸಿರುಭೂಮಿ ಅಂದೋಲನದ ಸಂಚಾಲಕರುಗಳಾದ ಗೌಡೇಗೌಡ, ಗಿರಿಜಾಂಬಿಕ, ವಿಜಯಶಾಲೆ, ಕೇಂದ್ರೀಯ ಶಾಲೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಂತರ ಹಸಿರುಭೂಮಿ ಪ್ರತಿಷ್ಠಾನದ ಉಪಾದ್ಯಕ್ಷ ಮಂಜುನಾಥ್ ಹಾಗೂ ತಾಂತ್ರಿಕ ಸಮಿತಿಯ ಸಂಚಾಲಕ ಸುಬ್ಬಸ್ವಾಮಿಯವರ ಮಾರ್ಗದರ್ಶನ ಹಾಗೂ ಸಂಚಾಲಕತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ, ಹಸಿರುಭೂಮಿ ಪ್ರತಿಷ್ಠಾನದ ಕಾರ್ಯಕರ್ತರು, ಹಾಸನ ವಿಜಯಶಾಲೆಯ ಸಿಬ್ಬಂಧಿಗಳು ಹಾಗೂ ಕೇಂದ್ರೀಯ ವಿದ್ಯಾಲಯದ ಸಿಬ್ಬಂದಿ ಶಿಸ್ತುಬದ್ಧವಾಗಿ ಮೊದಲು ೧೦೦ ಗಿಡ ನಂತರ ಅವುಗಳ ನಡುವೆ ಒತ್ತೊತ್ತಾಗಿ "ಮಿಯಾವಕಿ" ಮಾದರಿಯಲ್ಲಿ ವಿವಿಧ ಮಾದರಿಯ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಿದರು.

                                                            


                                                          

Post a Comment

Previous Post Next Post