ಜಾವಗಲ್: ನೆಫೆಡ್ ವತಿಯಿಂದ ರಾಗಿ ಖರೀದಿ ಕೇಂದ್ರದಲ್ಲಿ ಹೋಬಳಿಯ ರೈತರಿಂದ 26-03- ರಾಗಿಯನ್ನು ಖರೀದಿ ಮಾಡಲಾಗಿದ್ದು, ಜೂನ್ 2ನೇ ವಾರ ಕಳೆದರೂ, ರೈತರ ಬ್ಯಾಂಕ್ ಖಾತೆಗೆ ಹಣ ಪಾವತಿಯಾಗಿಲ್ಲ. ಈ ಸಂಬಂಧ ಕೂಡಲೆ ಹಣ ಬಿಡುಗಡೆ ಮಾಡಿಸಿಕೊಡುಂತೆ ರೈತರು ಆಗ್ರಹಿಸಿದ್ದಾರೆ.
ಫೆಬ್ರವರಿ 10 ರಂದು ಜಾವಗಲ್ ಕೃಷಿ ಉತ್ಪನ ಮಾರುಕಟ್ಟೆ ರಾಗಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿತ್ತು. ಫೆ10 ರಂದು ರಾಗಿ ಖರೀದಿ ಕೇಂದ್ರ ಜಾವಗಲ್‌ನ ಕೃಷಿ ಉತ್ಪನ್ನ ಉಪಮಾರುಕಟ್ಟೆಯ ಆವರಣದಲ್ಲಿ ಪ್ರಾರಂಭವಾಗಿದ್ದು 4600 ರೈತರು ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಸಿಕೊಂಡಿದ್ದರು. ಇದರಲ್ಲಿ ಬಹುತೇಕ ರೈತರು ಏಪ್ರಿಲ್ 30 ರ ವರೆಗೆ ತಾವು ಬೆಳೆದ ರಾಗಿಯನ್ನು ಮಾರಟ ಮಾಡಿದ್ದರು. ಜಾವಗಲ್ ರಾಗಿ ಖರೀದಿ ಕೇಂದ್ರದಲ್ಲಿ ಸುಮಾರು 32 ಕೋಟಿ ಮೊತ್ತದ ರಾಗಿ ಖರೀದಿ ಮಾಡಲಾಗಿತ್ತು. ಕ್ವಿಂಟಾಲ್‌ಗೆ 3,295 ರೂ. ಹಾಗೂ ಖಾಲಿ ಚೀಲದ ಬಾಬ್ತು ರೈತರಿಗೆ 44 ರೂ. ಸೇರಿಸಿ ಒಟ್ಟು 3339 ರೂ.ನಂತೆ ಹಣ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಫೆಬ್ರವರಿ 10 ರಿಂದ 28 ರ ವರೆಗೆ ರಾಗಿ ಖರೀದಿ ಮಾಡಲಾಗಿದ್ದ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಪಾವತಿ ಮಾಡಲಾಗಿದೆ. ಮಾರ್ಚ್ 1 ರಿಂದ ಏಪ್ರೀಲ್ 30 ರ ವರೆಗೆ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಖರೀದಿಸಿರುವ ರಾಗಿ ಬಾಬ್ತು ಇದುವರೆಗೂ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿ ಮಾಡದೆ ತುಂಬಾ ತೊಂದರೆಯಾಗುತ್ತಿದೆ ಎಂದು ರಾಗಿ ಮಾರಾಟ ಮಾಡಿರುವ ರೈತರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಕೋಳಗುಂದ ತಾಪಂ ಸದಸ್ಯ ಬಸವರಾಜು ಮಾತನಾಡಿ, ಕೋವಿಡ್ 2ನೇ ಅಲೆ ಗ್ರಾಮೀಣ ಭಾಗದಲ್ಲೂ ಹರಡುತ್ತಿದ್ದು, ಈ ಸಾಲಿನ ಮುಂಗಾರಿನ ಪ್ರಾರಂಭ ದಿನಗಳಲ್ಲಿ ಮಳೆ ಆಶಾದಾಯಕವಾಗಿ ಕಂಡು ಬಂದಿದೆ.
ಕೃಷಿಕರು ಮುಂಗಾರು ಬೆಳೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಕಳೆದು 15-20 ದಿನಗಳಿಂದ ಮಳೆ ಕೈಕೊಟ್ಟಿದೆ. ರೈತರು ಗೊಬ್ಬರ, ಔಷಧಿ, ಕಳೆ ಕೀಳಲು ಹಣಕ್ಕಾಗಿ ಪರಿತಪಿಸುವಂತಾಗಿದೆ ಎಂದರು.
ರಾಗಿ ಬಾಬ್ತು ಹಣ ಬಿಡುಗಡೆಯಾಗಿದ್ದಲ್ಲಿ, ಗೊಬ್ಬರ, ಔಷಧಿ, ನೀರು ಒದಗಿಸುವ ಸೌಲಭ್ಯಕ್ಕೆ ಅನುಕೂಲವಾಗುತ್ತಿತ್ತು. ಈಗಲಾದರೂ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಧಾವಿಸಿ ಕೂಡಲೆ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಿಸುವಂತೆ ಸಂಬAಧಪಟ್ಟ ಅದಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳನ್ನು ಒತ್ತಾಯಪಡಿಸಿದ್ದಾರೆ.
ಹಾಸನದ ನಫೇಡ್ ಅಧಿಕಾರಿ ರಂಗಸ್ವಾಮಿ ಮಾತನಾಡಿ, ರಾಗಿ ಖರೀದಿ ಹಣದ ಬಾಬ್ತು ಹಣವನ್ನು ಆನ್‌ಲೈನ್ ಮೂಲಕ ಸರ್ಕಾರವು ಹಣವನ್ನು ರೈತರ ಬ್ಯಾಂಕ್ ಖಾತೆಗೆ ಜಮಾಮಾಡಬೇಕಾಗಿತ್ತು. ಫೆ.28 ರಂದು ರಾಗಿ ಮಾರಾಟ ಮಾಡಿರುವ 15,404 ರೈತರಿಗೆ 1,16,649 ಕೋಟಿ ರೂ. ಜಮಾ ಮಾಡಲಾಗಿದೆ, 4-5 ದಿನಗಳಲ್ಲಿ 300 ಕೋಟಿ ಬಿಡುಗಡೆ ಮಾಡಲ್ಲಿದ್ದು, ಹಾಸನ ಜಿಲ್ಲೆಯ 18,383 ರೈತರಿಗೆ ಪಾವತಿ ಮಾಡುವ ಹಣ 130.21 ಕೋಟಿ ರೂ. ಬಾಕಿ ಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದರು.
