ಹಾಸನ: ಜಿಲೈಟಿನ್ ಸ್ಪೋಟದಿಂದ ತೀವ್ರ ಗಾಯಗೊಂಡಿರುವ ಬಡ ಕುಟುಂಬಕ್ಕೆ ಸರಕಾರದಿಂದ ಆರ್ಥಿಕ ಸಹಾಯ ಕೋರಿ ಕ್ಷೇತ್ರದ ಶಾಸಕರಾದ ಪ್ರೀತಂ ಗೌಡ ರವರ ಮೂಲಕ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಆಲೂರು ತಾಲ್ಲೂಕಿನ ವಾಟೇಹೋಳೆ ಹತ್ತಿರ ಚೆನ್ನಾಹಳ್ಳಿ ಗ್ರಾಮದ ಬಳಿ ನಡೆದ ಜೀಲೈಟಿನ್ ಸ್ಫೋಟದಿಂದ ಚನ್ನಹಳ್ಳಿಯ ಅಭಿಲಾಷ್ ೧೩ ವರ್ಷ ಹಾಗೂ ಹಾಸನ ತಾಲ್ಲೂಕು ಕಟ್ಟಾಯ ಹೋಬಳಿಯ ದೋರನಹಳ್ಳಿ ಗ್ರಾಮದ ಕೃತೀಕಾ ೧೦ ವರ್ಷ ಇವರು ಜಿಲೈಟಿನ್ ಸ್ಪೋಟದಿಂದ ತೀವ್ರ ಗಾಯಗೊಂಡಿರುವ ಮಕ್ಕಳ ಪೋಷಕರು ದಿ£ ಜಿಲ್ಲಾ ಧಿಕಾರಿಗಳಾದ ಆರ್. ಗಿರೀಶ್ ರವರಿಗೆ ಹಾಸನ ಕ್ಷೇತ್ರದ ಶಾಸಕರಾದ ಪ್ರೀತಂ ಗೌಡ ರವರ ಮೂಲಕ ಮನವಿ ಸಲ್ಲಿಸಲಾಯಿತು.
ಜಿಲೈಟಿನ್ ಸ್ಪೋಟದಿಂದ ಗಾಯಗೊಂಡಿರುವ ಮಕ್ಕಳಿಗೆ ಸರ್ಕಾರದಿಂದ ಪರಿಹಾರ ಕೋಡಿಸುವಲ್ಲಿ ಮಂದಿನ ಕ್ರಮ ಕೈಗೊಳ್ಳತ್ತೇನೆ ಎಂದು ಹಾಸನ ಕಲಾಕ್ಷೇತ್ರದ ಶಾಸಕರಾದ ಶ್ರೀ ಪ್ರಿತಂ ಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲೈಟಿನ್ ನಿಂದು ಗಾಯಗೊಂಡ ಮಕ್ಕಳ ಪೋಷಕರಾದ ದೋರನಹಳ್ಳಿ ರಂಗಸ್ವಾಮಿ, ಚನ್ನಹಳ್ಳಿ ರಘು ಹಾಗೂ ಕಟ್ಟಾಯ ಶಿವಕುಮಾರ್ ಶ್ರೀನಿವಾಸ್ ಹಾಗೂ ಚನ್ನಹಳ್ಳಿಯ ಮತ್ತಿತರರು ಉಪಸ್ಥಿತರಿದ್ದರು.
