ಬೇಲೂರು: ಕೋವಿಡ್ ಸೋಂಕಿತರು ಸಿಸಿ ಕೇಂದ್ರದಿಂದ ಗುಣಮುಖರಾಗಿ ಹೊರಟ ಸಂದರ್ಭದಲ್ಲಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟ ಮಿಮಿಕ್ರಿ ರಾಮು ಅವರಿಗೆ ಸವಿತಾ ಸಮಾಜದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ನಗರಾಧ್ಯಕ್ಷ ನರಸಿಂಹಸ್ವಾಮಿ ಮಾತನಾಡಿ, ಅರೇಹಳ್ಳಿಯಲ್ಲಿನ ಸಿಸಿ ಕೇಂದ್ರದಲ್ಲಿ ಕ್ವಾರೆಂಟೇನ್ ಇದ್ದಂತ ಕೋವಿಡ್ ಸೋಂಕಿತರು ಗುಣಮುಖರಾಗಿ ಹೊರಡುವ ಸಂದರ್ಭದಲ್ಲಿ ಅವರಿಗೆ ರಸಮಂಜರಿ ಕಾರ್ಯಕ್ರಮವನ್ನು ಮಿಮಿಕ್ರಿ ರಾಮು ಹಾಗೂ ಲಲಿತಕುಮಾರ್ ಅವರು ನಡೆಸಿ ಅವರ ಮನಸ್ಸು ಹಗುರವಾಗುವಂತೆ ಮಾಡಿದ್ದಾರೆ. ಇದನ್ನು ಮನಗಂಡು ಸವಿತಾಸಮಾಜದ ವತಿಯಿಂದ ಅವರಿಗೆ ಸನ್ಮಾನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೇಲೂರು ಸವಿತಾ ಸಮಾಜದ ಚಂದ್ರು, ಮೋಹನ್, ಹರೀಶ್, ನರಸಿಂಹಮೂರ್ತಿ, ಅನಿಲ್ ವಿಷ್ಣು ಪ್ರಸಾದ್, ಜಗದೀಶ್, ಕುಮಾರ್, ರಾಜು ಇದ್ದರು.
Tags
ಬೇಲೂರು
