ಹಾಸನಕ್ಕೆ ತಹಸೀಲ್ದಾರ್ ಆಗಿ ನಟೇಶ್ ವರ್ಗಾವಣೆ : ಬೇಲೂರಿನ ತಹಸೀಲ್ದಾರ್ ಆಗಿ ಮೋಹನ್ ಕುಮಾರ್ ಯು.ಎಂ. ಅವರನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಿದ್ದಾರೆ

ಹಾಸನ: ಬೇಲೂರು ತಹಸೀಲ್ದಾರ್ ಆಗಿದ್ದ ಎನ್.ವಿ.ನಟೇಶ್ ಅವರನ್ನು ಹಾಸನ ತಹಸೀಲ್ದಾರ್ ಆಗಿ ವರ್ಗಮಾಡಿ ಗುರುವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಸನದಲ್ಲಿ ಶಿವಶಂಕರಪ್ಪ ಅವರು ನಿವೃತ್ತಿಯಾಗಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಧಾರ್ಮಿಕ ದತ್ತಿ ತಹಸೀಲ್ದಾರ್ ಆಗಿದ್ದ ಮೋಹನ್ ಕುಮಾರ್ ಯು.ಎಂ. ಅವರನ್ನು ನಟೇಶ್ ಅವರಿಂದ ತೆರವಾಗಿರುವ ಬೇಲೂರು ತಹಸೀಲ್ದಾರ್ ಆಗಿ ನಿಯೋಜನೆ ಮಾಡಲಾಗಿದೆ.

Post a Comment

Previous Post Next Post