ರಾಜ್ಯ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕುಟುಂಬ ಸಾಲುಮರದ ತಿಮ್ಮಕ್ಕವರನ್ನು ಬೇಟಿ ಮಾಡಿ ಆರೋಗ್ಯ ವಿಚಾರಿಸಿದರು .

ತಾಯಿ ಮಕ್ಕಳನ್ನು ಪ್ರೀತಿಯಿಂದ ಸಲಹುವಂತೆ,  ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರು  ಲೆಕ್ಕವಿಲ್ಲದಷ್ಟು ಗಿಡಮರಗಳನ್ನು ಜತನದಿಂದ ಕಾಯ್ದುಕೊಂಡು ಪೋಷಿಸಿ ಬೆಳೆಸಿ ವೃಕ್ಷಮಾತೆಯಾಗಿದ್ದಾರೆ ಎಂದು ರಾಜ್ಯ ಕರ‍್ಯನಿರತ ಪತ್ರರ‍್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.


     ತಾಲೂಕಿನ ಬಳ್ಳೂರು ಗ್ರಾಮದ ಉಮೇಶ್ ನಿವಾಸದಲ್ಲಿರುವ  ಸಾಲುಮರದ ತಿಮ್ಮಕ್ಕನವರನ್ನು  ಶಿವಾನಂದ ತಗಡೂರು ಹಾಗೂ ಕುಟುಂಬ ರ‍್ಗದವರು ಆತ್ಮೀಯ ಬೇಟಿ ನೀಡಿ ಆರೋಗ್ಯ ವಿಚಾರಿಸಿ  ವಿಶ್ವ ಪರಿಸರ ದಿನಾಚರಣೆ ನೆನಪಿಗಾಗಿ ಗಿಡವನ್ನು ನೆಟ್ಟ ನಂತರ ಮಾತನಾಡಿ  ಸಾಲುಮರದ ತಿಮ್ಮಕ್ಕನವರು ಪರಿಸರ ಪ್ರೇಮವನ್ನು ಮಾತಿನಲ್ಲಿ ತೋರಿಸದೆ ಕಾಯಕದ ಮೂಲಕ  ಮಾಡಿ ತೋರಿಸಿ ಲಕ್ಷಾಂತರ ವಿದ್ಯರ‍್ಥಿಗಳು ಸರ‍್ವಜನಿಕರಿಗೆ  ಪರಿಸರ ಸಂರಕ್ಷಣೆ ಮಾಡಲು ಪ್ರೇರಣೆಯಾಗಿದ್ದಾರೆ . ಮಕ್ಕಳಿಲ್ಲ ಎಂಬ ಕೊರಗನ್ನು ನೀಗಲು ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಆಲದ ಮರಗಳನ್ನು ಬೆಳೆಸಿ ಸಾಲುಮರದ ತಿಮ್ಮಕ್ಕ ಎಂದು ವಿಶ್ವದಾದ್ಯಂತ ಹೆಸರು ಮಾಡಿ  ರ‍್ನಾಟಕಕ್ಕೆ ಕರ‍್ತಿ ತಂದಿದ್ದಾರೆ ಎಂದರು .

    ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಮಾತನಾಡಿ  ಪ್ರಕೃತಿ ನಾಶದಿಂದ ಇಂದು ಮನುಷ್ಯರು  ಬಟ್ಟೆಯಿಂದ ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನರ‍್ಮಾಣವಾಗಿದೆ . ೧೧೦ ರ‍್ಷದ ಈ ಇಳಿವಯಸ್ಸಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಸಾವು ನೋವು ಕಂಡು ಮನಸ್ಸಿಗೆ ಬೇಸರವಾಗಿದೆ . ಈಗಲಾದರೂ ಮಾನವರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಮತ್ತು ಈ ಭೀಕರ ದರಿದ್ರ ಕಾಯಿಲೆ ದೇಶದಿಂದ ತೊಲಗಬೇಕು ಎಂದು ದೇವರಲ್ಲಿ ಪ್ರರ‍್ಥಿಸುವುದಾಗಿ ತಿಳಿಸಿದರು.

  ಸಾಲುಮರದ ತಿಮ್ಮಕ್ಕನವರ ದತ್ತು ಪುತ್ರ ಬಳ್ಳೂರು ಉಮೇಶ್ ಮಾತನಾಡಿ  ರಾಜ್ಯ ಕರ‍್ಯನಿರತ ಪತ್ರರ‍್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ್ ಅವರು  ಕಳೆದ ಇಪ್ಪತ್ತು ರ‍್ಷಗಳಿಂದ  ನಮಗೆ ಮರ‍್ಗರ‍್ಶನ ನೀಡುತ್ತಿದ್ದಾರೆ ತೀರಾ ಕಷ್ಟಕರ ಸಂರ‍್ಭದಲ್ಲಿ ತಾವು ಖುದ್ದಾಗಿ ನಿಂತು ಸಹಾಯ ಮಾಡಿದ್ದು  ತಿಮ್ಮಕ್ಕ ನವರ ಮೇಲೆ ಅವರಿಗೆ ಅಭಿಮಾನ ಹಾಗೂ ಪ್ರೀತಿ ಇರುವುದರಿಂದ ತಿಂಗಳಿಗೆ ಒಮ್ಮೆಯಾದರೂ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಿರುತ್ತಾರೆ ಎಂದರು .

Post a Comment

Previous Post Next Post