ಹಾಸನ: ಕೊರೋನಾ ಮಹಾಮಾರಿ ವೇಳೆ ಮುಖ್ಯವಾಗಿ ಅವಶ್ಯಕವಾಗಿರುವ ರಕ್ತವನ್ನು ಶೇಕರಿಸುವ ನಿಟ್ಟಿನಲ್ಲಿ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿರುವ ರಕ್ತ ನಿಧಿ ವಿಭಾಗದಲ್ಲಿ ಎಸ್.ಎಫ್.ಐ. –ಡಿ.ವೈ.ಎಫ್.ಐ. ವತಿಯಿಂದ ರಕ್ತದಾನ ಶಿಬಿರ ನಡೆಸಲಾಯಿತು.
ಕಳೆದ ಒಂದು ತಿಂಗಳಿAದಲೂ ಕೋವಿಡ್ ತನ್ನ ಆರ್ಭಟವನ್ನುವ ಮುಂದುವರೆಸಿದೆ, ಇಂತಹ ಸಂಧರ್ಭದಲ್ಲಿ ಜನರು ಕೂಡ ತತ್ತರಿಸಿ ಹೋಗಿದ್ದಾರೆ. ಈಗಾಗಲೆ ಸಾವು ನೋವುಗಳಿಂದ ಬೆಡ್ ಗಳು ಸಿಗದೆ, ಆಕ್ಸಿಜನ್ ಸಿಗದೆ ಬಹಳ ಸಂಕಷ್ಟಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕ್ರಾಂತಿಕಾರಿ ಸಂಘಟನೆಗಳಾದ ಎಸ್.ಎಫ್.ಐ ಮತ್ತು ಡಿ.ಐ.ಎಫ್.ಐ ಸಂಘಟನೆಗಳ ನೇತೃತ್ವದಲ್ಲಿ ನಗರದ ಸರ್ಕಾರಿ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಸಾಮೂಹಿಕವಾಗಿ ಸಂಘಟನೆÀಗಳ ಕಾರ್ಯಕರ್ತರು , ನಾಗರೀಕರು ಎಲ್ಲರು ಒಳಗೊಂಡAತೆ ರಕ್ತದಾನವನ್ನು ಮಾಡಿದ್ದಾರೆ. ಕರೊನಾ ಕಡಿಮೆಯಾದಂತೆ ಬೇರೆ ಕಾರಣಗಳಿಗೆ ಮತ್ತು ತುರ್ತು ಸಂಧರ್ಭಗಳಲ್ಲಿ ರಕ್ತ ಬೇಕಾಗತ್ತದೆ ಹಾಗಾಗಿ ನಾವು ಎಚ್ಚರದಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದೇವೆ. ಈಗಾಗಲೆ ಖಾಸಗೀ ಆಸ್ಪತ್ರೆಗಳ ಹಾವಳಿಯಿಂದ ಜನರಿಗೆ ಯಾವುದು ಸರಿಯಾದ ಕ್ರಮದಲ್ಲಿ ಮತ್ತು ದರದಲ್ಲಿ ಔಷದಿಗಳು ಸಿಗುತ್ತಿಲ್ಲಾ, ಸರ್ಕಾರಗಳು ಕೂಡ ಕೈಕಟ್ಟಿ ಕುಳಿತಾಗಿದೆ ಹಾಗಾಗಿ ನಾವು ಸರ್ಕಾರಿ ಆಸ್ಪತ್ರೆಯಲ್ಲಿ ಬರುವ ಬಡ ಜನರಿಗಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದೇವೆ ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಜನ ರಕ್ತದಾನವನ್ನುವ ಮಾಡಿ ಜೀವ ಉಳಿಸುವ ಕೆಲಸ ಮಾಡಲಿ ಎಂಬುದೆ ನಮ್ಮ ಆಶಯ.
ಶಿಬಿರದಲ್ಲಿ ಹಾಸನ ವೈದ್ಯಕೀಯ ಮಹಾವಿದ್ಯಾಲಯ ರಕ್ತ ಶೇಖರಣೆ ವಿಭಾಗದ ವರಲಕ್ಷಿö್ಮ, ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್, ಡಿ.ಐ.ಎಫ್.ಐ ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಎಂ.ಜಿ ರೈತ ಉಖಂಡರಾದ ವಾಸಣ್ಣ, ರಕ್ಷಿತ, ನಂದನ್, ಸ್ವರೂಪ್, ದವಾಕರ್ ಆಜಾಡ್ ಇತರರು ಉಪಸ್ಥಿತರಿದ್ದರು.