ಹಾಸನ: ತಾಲೂಕಿನ ದುದ್ದದಲ್ಲಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಮುಂಜಾನೆ ಮಿತ್ರರು ತಂಡದಿAದ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಣೆಯನ್ನು ಗ್ರಾಪಂ ಅಧ್ಯಕ್ಷರಾದ ಹರೀಶ್, ಸದಸ್ಯರು ಹಾಗೂ ಮುಂಜಾನೆ ಮಿತ್ರ ತಂಡದಿAದ ವಿತರಣೆ ಮಾಡಲಾಯಿತು.
ನಂತರ ಮಾತನಾಡಿದ ಗ್ರಾಮ ಪಂಚಾಯಿತಿ ಹರೀಶ್ ರವರು, ಇಂದು ಎಲ್ಲೆಡೆ ಕೊರೋನಾ ಆವರಿಸಿ ಜನರು ತತ್ತರಿಸಿ ಹೋಗಿದ್ದು, ಈವೇಳೆ ಗ್ರಾಮಗಳಲ್ಲಿ ಕೊರೋನಾ ಬ್ಗಗೆ ಜಾಗೃತಿ ಮೂಡಿಸಿ ಪ್ರಕರಣ ಕಡಿಮೆ ಮಾಡುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಶ್ಲಾಘನೀಯವಾಗಿದೆ. ಹಳ್ಳಿಗಳಲ್ಲಿ ಕೊರೋನಾ ಎಂಬುದು ದಿನೆ ದಿನೆ ಹೆಚ್ಚು ಕಂಡು ಬರುತ್ತಿರುವುದರಿಂದ ಕೊರೋನಾ ನಿಯಂತ್ರಣಕ್ಕೆ ಮುಖ್ಯವಾಗಿ ಆಶಾ ಕಾರ್ಯಕರ್ತೆಯರ ಪಾತ್ರ ಹೆಚ್ಚು ಇದೆ. ಅವರ ಸೇವೆಯನ್ನು ನೆನಪಿಸಿಕೊಳ್ಳುವುದು ನಮ್ಮ ಆಧ್ಯ ಕರ್ತವ್ಯ. ಕೇವಲ ಹಣದಿಂದ ಸೇವೆ ಕೊಡಲು ಸಾಧ್ಯವಿಲ್ಲ. ಒಳ್ಳೆ ಸೇವೆಯಂತಹ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ ಎಂದರು. ಆಶಾ ಕಾರ್ಯಕರ್ತೆಯರನ್ನು ಪ್ರೋತ್ಸಹಿಸುವ ನಿಟ್ಟಿನಲ್ಲಿ ಮುಂಜಾನೆ ಮಿತ್ರ ತಂಡದಿAದ ಆಹಾರದ ಕಿಟ್ ನೀಡುತ್ತಿರುವುದು ಉತ್ತಮವಾದ ಕೆಲಸ ಎಂದು ಇದೆ ವೇಳೆ ಹೇಳಿದರು.
ಈಸಂದರ್ಭದಲ್ಲಿ ಮುಂಜಾನೆ ಮಿತ್ರರು ತಂಡದ ಅಧ್ಯಕ್ಷರಾದ ಸಿ.ಬಿ. ವೆಂಕಟೇಗೌಡ, ಕಾರ್ಯದರ್ಶಿ ಎ.ಎಸ್. ಸುದೀರ್, ಖಜಾಂಚಿ ಹೆಚ್.ಟಿ. ರಾಮೇಗೌಡ, ಸದಸ್ಯರಾದ ನಮೃತ ಧನರಾಜ್, ಎಸ್.ಪಿ. ಯೋಗೀಶ್, ಎಸ್. ಜಗದೀಶ್, ಡಾ. ಪಾಟೀಲ್, ನಾಗೇಶ್, ಧನರಾಜ್, ಅಭಯ್, ವಿಜಯಕುಮಾರ್ ಹಾಗೂ ಇತರರು ಪಾಲ್ಗೊಂಡಿದ್ದರು.