ಹಾಸನ : ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹಾಸನ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರದAದು ಕಾಂಗ್ರೆಸ್ ಮುಖಂಡರಾದ ಬಿ.ಕೆ. ರಂಗಸ್ವಾಮಿ (ಬನವಾಸೆ) ಹಾಗೂ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಅವರ ನೇತೃತ್ವದಲ್ಲಿ ಬಡವರಿಗೆ ಕೂಲಿ ಕಾರ್ಮಿಕರಿಗೆ ನಿರ್ಗತಿಕರಿಗೆ ಬೀದಿಬದಿ ವ್ಯಾಪಾರಿಗಳಿಗೆ ಆಹಾರದ ಕಿಟ್ ಹಾಗೂ ಮಾಸ್ಕ್ ಮತ್ತು ಮಕ್ಕಳಿಗೆ ಮೆಡಿಕಲ್ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ನಂತರ ಮಾತನಾಡಿದ ಅವರು, ಕೊರೋನಾ ಆವರಿಸಿ ಲಾಕ್ ಡೌನ್ ಇರುವ ಪರಿಸ್ಥಿತಿಯಲ್ಲಿ ಹಸಿದವರಿಗೆ ಆಹಾರ ಕೊಡುವುದೆ ಒಳ್ಳೆಯ ಧರ್ಮ. ಕಾಂಗ್ರೆಸ್ ಪಕ್ಷದ ನಿಲುವು ಹಸಿವು ಮುಕ್ತ ಭಾರತ ಮತ್ತು ಕರ್ನಾಟಕ ಮಾಡುವುದೆ ನಾಯಕರ ನಿಲುವು. ಈವೇಳೆ ದೊಡ್ಡವರಿಂದ ಕೆಳ ಮಟ್ಟದವರಿಗೂ ತುಂಬ ಸಮಸ್ಯೆ ಆಗಿದೆ. ಎರಡನೇ ಅಲೆಯಲ್ಲಿನ ಲಾಕ್ ಡೌನ್ ನಲ್ಲಿ ಕೂಡ ಜೀವ ಉಳಿಸಿಕೊಳ್ಳುವುದರ ಜೊತೆಗೆ ಆರ್ಥಿಕ ಸಮಸ್ಯೆಗಳು ಕೂಡ ಹೆಚ್ಚಾಗಿದೆ ಎಂದು ಆತಂಕವ್ಯಕ್ತಪಡಿಸಿದರು. ಕೊರೋನಾ ಎಂಬುದು ಶ್ರೀಮಂತರು ಮತ್ತು ಬಡವರು ಎನ್ನದೆ ಎಲ್ಲಾರಿಗೂ ಸೋಂಕು ಹರಡುತ್ತಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಕೈ ಶುದ್ದವಾಗಿ ಇಟ್ಟುಕೊಳ್ಳುವುದನು ಮರೆಯಬಾರದು ಎಂದು ಕಿವಿಮಾತು ಹೇಳಿದರು. ಮೂರನೇ ಅಲೆಯ ಬಗೆ ಈಗಲೇ ತಯಾರಾಗಬೇಕು. ರಕ್ಷಣೆಗಾಗಿ ಮೊದಲು ಎಲ್ಲಾರು ಲಸಿಕೆ ಪಡೆಯಬೇಕು. ಸರಕಾರವು ಉಚಿತ ಲಸಿಕೆ ಕೊಡುವುದಾಗಿ ಹೇಳಿ ಇದುವರೆಗೂ ಅನೇಕರಿಗೆ ಲಸಿಕೆ ಸಿಗುತ್ತಿಲ್ಲ ಎಂದು ದೂರಿದರು.
ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ ಮಾತನಾಡಿ, ಬಿಜೆಪಿ ಸರಕಾರವು ಕೊರೋನಾ ನಿರ್ವಹಣೆ ಬಗ್ಗೆ ಹಮನ ಕೊಡದೆ ಕೇವಲ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಕುರ್ಚಿಗಾಗಿ ಕಿತ್ತಾಟಗಳು ಮತ್ತು ಲಂಚಕ್ಕಾಗಿ ಇವರ ಕೆಲಸಗಳು ನಡೆಯುತ್ತಿರುವ ಬಗ್ಗೆ ಜನತೆ ಗಮನಿಸುತ್ತಿದ್ದಾರೆ. ಕೂಡಲೇ ಇಂತಹ ಭ್ರಷ್ಟ ಸರಕಾರವನ್ನು ಹೊಡೆದೋಡಿಸಿ ಜನಸಾಮಾನ್ಯರಿಗೆ ಅನುಕೂಲವಾಗುವ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತು ದೇಶದಲ್ಲಿ ತರಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ತಾರಾಚಂದನ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ವೀರಾಪುರ ಬಸವರಾಜ್, ಹಿರಿಯ ಕಾಂಗ್ರೆಸ್ ಮುಖಂಡರಾದ ಬಾಲಶಂಕರ್, ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾದ ಕೋಮಲೇಶ್, ಜಿಲ್ಲಾ ಪ್ರಜಾಶಕ್ತಿ ಸೇನೆಯ ಮಹಿಳಾ ಜಿಲ್ಲಾ ಅಧ್ಯಕ್ಷರಾದ ಪಾರ್ವತಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾದ ಸಂಧ್ಯಾ, ಜಗನ್ನಾಥ್ ಹಾಗೂ ರಂಗಸ್ವಾಮಿ, ಶಿವಕುಮಾರ್ ಮತ್ತು ಅಭಿಮಾನಿ ಬಳಗದವರು, ಹಿರಿಯ ಮತ್ತು ಕಿರಿಯ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರುಗಳು ಪದಾಧಿಕಾರಿಗಳು ಸೇರಿದಂತೆ ಇತರರು ಪಾಲ್ಗೊಂಡಿದ್ದರು.