ಹಾಸನ: ನಗರದ ಸಮೀಪ ಇರುವ ಸತ್ಯಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ದಲಿತ ಸಮುದಾಯದವರಿಗೆ ನಿವೃತ್ತ ನೌಕರರ ಸಂಘದ ನಿರ್ದೇಶಕ ಮತ್ತು ಜಿಲ್ಲಾ ಬಳಕೆದಾರರ ಸಂಘದ ಉಪಾಧ್ಯಕ್ಷ ರಂಗೇಗೌಡರು ದಿನನಿತ್ಯ ಉಪಯೋಗಿಸುವ ಆಹಾರದ ಕಿಟ್ ಗಳನ್ನು ವಿತರಿಸಿದರು.
ಇದೆ ವೇಳೆ ಮಾತನಾಡಿದ ಅವರು, ಕೊರೋನಾ ಆವರಿಸಿ ಹಿಂದುಳಿದ ವರ್ಗಗಳು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಂತವರನ್ನು ಗುರುತಿಸಿ ನಿವೃತ್ತ ನೌಕರರ ಸಂಘ ಮತ್ತು ಜಿಲ್ಲಾ ಬಳಕೆದಾರರ ಸಂಘದವತಿಯಿAದ ಆಹಾರದ ಕಿಟ್ ಗಳನ್ನು ವಿತರಣೆ ಮಾಡುವ ಮೂಲಕ ಸಲ್ಪವಾದರೂ ಸಹಾಯ ಮಾಡಲಾಗುತ್ತಿದೆ ಎಂದರು.
ಇದೆ ವೇಳೆ ಸತ್ಯಮಂಗಲ ಗ್ರಾಪಂ ಮಾಜಿ ಅಧ್ಯಕ್ಷೆ ಹೇಮಾ ಮೋಹನ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಎಸ್.ಆರ್. ಮೋಹನ್ ಕುಮಾರ್, ಬಳಕೆದಾರರ ಸಂಘದ ಸಿದ್ದಯ್ಯ, ಮಾರ್ಕೇಟ್ ಉಪಾಧ್ಯಕ್ಷರಾದ ಎಸ್.ಆರ್. ವೆಂಕಟೇಶ್, ಎಸ್.ಆರ್. ರಮೇಶ್, ಕುಮಾರಸ್ವಾಮಿ, ನಿವೃತ್ತ ಸಂಘದ ಎಂ.ಆರ್. ಜಗದೀಶ್, ಇಂದ್ರನಗರದ ನಿವಾಸಿಗಳಾದ ಕೃಷ್ಣಕುಮಾರ್, ಸತೀಶ್, ಬಿ. ರಮೇಶ್, ಜಿಲ್ಲಾ ಬಳಕೆದಾರರ ವೇದಿಕೆ ಉಪಾಧ್ಯಕ್ಷ ಹಾಗೂ ನಿವೃತ್ತ ನೌಕರರ ಸಂಘದ ನಿರ್ದೇಶಕ ಎಸ್.ಎ. ರಂಗೇಗೌಡ ಇತರರು ಪಾಲ್ಗೊಂಡಿದ್ದರು.