ಹಾಸನದ ಮಣಿ ಸ್ಪೆಶಾಲಿಟಿ ಆಸ್ಪತ್ರೆ ಮತ್ತು ಬೆಂಗಳೂರಿನ ಬೆಳಂದೂರು ಜೊತೆಗೆ ತಂಡದ ಸಂಯುಕ್ತಾಶ್ರಯದಲ್ಲಿ ಬೇಲೂರು ತಾಲ್ಲೂಕು ಹಗರೆ ಪ್ರಾಥಮಿಕ ಆರೋಗ್ಯ ಕೇಂದ್ರ, ಹಗರೆ ಇಲ್ಲಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ , ಪಲ್ಸ್ ಆಕ್ಸೀಮೀಟರ್, ಆಕ್ಸಿಜನ್ ಮಾಸ್ಕ್, ಥರ್ಮೋಮೀಟರ್, ಫೇಸ್ ಶೀಲ್ಡ್, ಮಾಸ್ಕ್‌ಗಳನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿದ್ದ ಹಾಜರಿದ್ದ ಡಾ. ಸೌಮ್ಯಮಣಿ ಮತ್ತು ಡಾ. ಯತೀಶ್‌ರವರು ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಆಸ್ಪತ್ರೆಯ ಸಿಬ್ಬಂಧಿಗಳನ್ನು ಅಭಿನಂದಿಸಿದರು. ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶಾಲಿನಿ ಮತ್ತು ಸಿಬ್ಬಂಧಿ ವರ್ಗ ಹಾಜರಿದ್ದರು
Tags
ಬೇಲೂರು
