ಕಸ ವಿಲೇವಾರಿ ಮಾಡುವ ಅಫೆ ವಾಹನಕ್ಕೆ ಯಾರು ಹಣ ಕೊಡಬೇಡಿ ಅಧ್ಯಕ್ಷ ಮೋಹನ್

ಹಾಸನ: ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಲ್ಲಿ ಜುಲೈ ತಿಂಗಳಲ್ಲಿ ಒಂದೊಂದು ದಿನ ವಿವಿಧ ವಾರ್ಡ್ಗಳಲ್ಲಿ ಪ್ರತಿ ಶುಕ್ರವಾರ ಬೆಳಿಗ್ಗೆ ೯ ಗಂಟೆಯಿಂದ  ಮಧ್ಯಾಹ್ನ ೧ ಗಂಟೆವರೆಗೆ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಹಾಸನ ನಗರದ ೩೫ ವಾರ್ಡ್ಗಳಲ್ಲೂ ಕಸ ವಿಲೇವಾರಿ ಮಾಡುವ ಅಫೆ ವಾಹನ ಬರುತ್ತಿದ್ದು, ಅವರಿಗೆ ಯಾರು ನಿವಾಸಿಗಳು ಹಣ ಕೊಡಬಾರದು ಎಂದು ನಗರಸಭೆ ಅಧ್ಯಕ್ಷರಾದ ಮೋಹನ್ ಕುಮಾರ್ ತಿಳಿಸಿದರು.


      ನಗರಸಭೆಯ ರಾಷ್ಟ್ರೀಯ  ಕುವೆಂಪು ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನಗರದ ವ್ಯಾಪ್ತಿಯಲ್ಲಿ ದಲ್ಟ್ ಯೋಜನೆಯಡಿ ೧೦ ಕೋಟಿ ಅಂದಾಜು ವೆಚ್ಚದಲ್ಲಿ ೨ ಕಿ.ಮಿ ಉದ್ದದ ಸೈಕಲ್ ಪಾದಚಾರಿ ರಸ್ತೆ ನಿರ್ಮಿಸಲು ಯೋಜನೆ ಕೈಗೊಳ್ಳಲಾಗಿದೆ. ಪ್ರತಿನಿತ್ಯ ೬೨ ಉತ್ಪತ್ತಿಯಾಗುತ್ತಿದ್ದು, ಪಕ್ಕದ ಗ್ರಾಮ ಪಂಚಾಯತಿ ವ್ಯಾಪ್ತಿಗಳಿಂದ ೩೮ ಟನ್ ಬರುತ್ತಿದ್ದು, ಒಟ್ಟು ೧೦೦ ಟನ್ ಕಸವನ್ನು ೩೦ ರಷ್ಟು ಎರೆಹುಳು ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತಿದ್ದು, ಕೃಷಿ ಇಲಾಖೆ ಅನುಮತಿ ಪಡೆದು ರೈತರಿಗೆ ಕಡಿಮೆ ದರದಲ್ಲಿ ವಿತರಿಸಲಾಗುವುದು. ನಗರದ ೧೭ ವಾರ್ಡ್ಗಳಲ್ಲಿ  ಅಮೃತ್ ಯೋಜನೆಯ ನೀರು ವಿತರಣಾ ಕಾಮಗಾರಿ ಒಂದು ಹಂತದಲ್ಲಿ ಪೂರ್ಣಗೊಂಡಿದ್ದು, ಎರಡನೇ ಹಂತದಲ್ಲಿ ಉಳಿದ ೧೮ ವಾರ್ಡಗಳಲ್ಲಿ ಕಾಮಗಾರಿ ನಿರ್ವಹಿಸಲು ಉದ್ದೇಶಿಸಲಾಗಿದೆ ಎಂದರು. ಅಮೃತ್ ಯೋಜನೆ ಪೂರ್ಣಗೊಂಡ ನಂತರ ನಗರಕ್ಕೆ ಪ್ರತಿದಿನ ೫೧ ಎಂ.ಎಲ್.ಡಿ ನೀರು ಲಭ್ಯವಾಗಲಿದ್ದು, ನಗರಕ್ಕೆ ೨೪ ಗಂಟೆಗಳ ಕಾಲ ಸರಬರಾಜು ವ್ಯವಸ್ಥೆ ಕಲ್ಪಿಸಲಾಗುವುದು. ಕ್ಷೇತ್ರದ ಶಾಸಕರು ಹೇಳಿರುವಂತೆ ೧೪೪ ಕೋಟಿ ರೂಗಳಲ್ಲಿ ಹಾಸನ ನಗರದ ಪ್ರಮುಖ ಉದ್ಯಾನವನ ಮತ್ತು ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗುವುದು. ನಗರದ ೧ ರಿಂದ ೩೫ ವಾರ್ಡ್ಗಳಲ್ಲಿ ೧೩ ಸಾವಿರ ವಿದ್ಯುತ್ ಕಂಬಗಳಿದ್ದು, ಅದರಲ್ಲಿ ೩೧೫೩ ಟ್ಯೂಬ್ ಲೈಟ್, ೬೧೫೦ ಸೋಡಿಯಂ ಲೈಟ್, ೫೭ ಹೈಮಾಸ್ಕ್ ಹಾಗೂ ೧೩೫೫ ಎಲ್.ಇ.ಡಿ. ಲೈಟ್ ಸೇರಿ ಒಟ್ಟು ೧೦೭೧೫ ಲೈಟ್ ಗಳನ್ನು ಅಳವಡಿಸಲಾಗಿದೆ. ಜೊತೆಗೆ ನಗರ ವ್ಯಾಪ್ತಿಯಲ್ಲಿ ಇರುವ ಬೀದಿ ದೀಪಗಳಿಗೆ ಇಂಧನ ಕ್ಷಮತೆ ಯೋಜನೆಯಡಿ ಎಲ್.ಇ.ಡಿ. ದೀಪಗಳನ್ನು ಅಳವಡಿಸಲು ಜಿಲ್ಲಾಧಿಕಾರಿಗಳು ಟೆಂಡರ್ ಕರೆದಿದ್ದಾರೆ. ಇದರಿಂದ ಶೇಕಡ ೬೦ ರಷ್ಟು ಇಂಧನ ಉಳಿತಾಯ ಮಾಡುವ ಬಗ್ಗೆ ಅಂದಾಜಿಸಲಾಗಿದೆ ಎಂದು ಹೇಳಿದರು. ನಗರ ವ್ಯಾಪ್ತಿಯಲ್ಲಿ ೪೫ ಕಿಮೀ ಕಾಂಕ್ರಿಟ್ ರಸ್ತೆ, ೧೭೩ ಕಿಮೀ ಡಾಂಬರ್ ರಸ್ತೆ, ೩ ಕಿಮೀ ಮಣ್ಣು ರಸ್ತೆ ಸೇರಿ ಒಟ್ಟು ೨೨೧ ಕಿಮೀ ರಸ್ತೆ ಇದೆ ಎಂದರು. ನಗರಪಾಲಿಕೆಗೆ ೨೫ ಹಳ್ಳಿಗಳು ಸೇರ್ಪಡೆಗೊಂಡು ಈಗಾಗಲೇ ಹಣ ಬಿಡುಗಡೆ ಆಗಿರುವುದರಲ್ಲಿ ಯುಜಿಡಿ ಸಂಪರ್ಕ ಮಾಡುವ ಕೆಲಸ ನಡೆಯುತ್ತಿದೆ ಎಂದು ವಿವರಣೆ ನೀಡಿದರು.

      ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ಅವರು ಮಾತನಾಡಿ ನಗರದಲ್ಲಿ ಕಸ ಸಂಗ್ರಹಣೆ ವೇಳೆಯಲ್ಲಿ ಹಣವನ್ನು ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು ಹಣ ಪಡೆಯದಂತೆ ನಿರ್ದೇಶನ ನೀಡಲಾಗುವುದು. ನಗರದ ೩೫ ವಾರ್ಡ್ಗಳಲ್ಲಿ ನಗರಸಭೆವತಿಯಿಂದ ೨೬ ವಾರ್ಡ್ಗಳಲ್ಲಿ ಪ್ರತಿದಿನ ಕಸ ಸಂಗ್ರಹಣೆ ಮಾಡಲಾಗುತ್ತಿದ್ದು, ಒಂಬತ್ತು ವಾರ್ಡಗಳಲ್ಲಿ ಸ್ವಸಾಯ ಸಂಘಗಳ ಮೂಲಕ ನಿರ್ವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇನ್ನು ನಗರದಲ್ಲಿ ತಲೆ ದೂರಿರುವ ಬೀದಿ ನಾಯಿಗಳ ಹಾವಳಿ ಬಗ್ಗೆ ಸಭೆ ಮಾಡಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು. 

      ಸುದ್ದಿಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷೆ ಮಂಗಳ ಹಾಗೂ ಇಂಜಿನಿಯರ್ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post