ಹಾಸನ: ವರ್ತುಲ ರಸ್ತೆ ಕೆರೆ ಅಭಿವೃದ್ಧಿ ಸಮಿತಿವತಿಯಿಂದ ಚಿಕ್ಕ ಕೊಂಡಗುಳ ಪಾರ್ಕಿನಲ್ಲಿ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಲಾಯಿತು.
ಪಾರ್ಕಿನಲ್ಲಿ ಆರೋಗ್ಯಕ್ಕೆ ಸಾರ್ವಜನಿಕರಿಗೆ ಬೇಕಾಗಿರುವ ಬೇವಿನಮರ, ಪಕ್ಷಿಗಳಿಗೆ ನೇರಳೆ ಹಾಗೂ ಹಲಸಿನ ಮರವನ್ನು, ನೆರಳಿಗೆಂದು ಮಹಾಗನ್ನಿ ಹೊಂಗೆಮರಗಳು ಸೇರಿದಂತೆ ಇತರೆ ಗಿಡಗಳನ್ನು ನೆಡಲಾಯಿತು. ಮರಗಳನ್ನು ಕಡಿಯದೆ ಉಳಿಸುವ ಮೂಲಕ ಉತ್ತಮ ವಾತವರಣ ನಿರ್ಮಾಣ ಮಾಡೋನ ಎಂದು ಇದೆ ವೇಳೆ ಜಾಗೃತಿ ಮೂಡಿಸಲಾಯಿತು.
ಸ್ಥಳದಲ್ಲಿ ಕೆರೆ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಜನನಿ ಫೌಂಡೇಶನ್ ಅಧ್ಯಕ್ಷರಾದ ಭಾನಮತಿ, ಸಮಿತಿಯ ಪದಾಧಿಕಾರಿಗಳಾದ ರಾಮಚಂದ್ರ, ಭಾನುಪ್ರಕಾಶ್, ಶ್ರೇಯಸ್, ಪ್ರವೀಣ, ಬಾಲರಾಜು, ಅಧ್ಯಕ್ಷರಾದ ಚಂದ್ರಮ್ಮ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಸಂತೋಷದಿAದ ಗಿಡಗಳನ್ನು ನೆಟ್ಟು ಪಾತಿ ಮಾಡಿ ನೀರೆರೆದು ಸಂಭ್ರಮಿಸಿದರು.
Tags
ಹಾಸನ
