ಮುರಾರ್ಜಿ ಶಾಲೆ ಕೊರೋನಾ ಕೇಂದ್ರಕ್ಕೆ ಬಿ. ಶಿವರಾಂ ಭೇಟಿ

ಹಾಸನ: ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುರಾರ್ಜಿ ಶಾಲೆಯ ಕೋವಿಡ್ ಕೇಂದ್ರಕ್ಕೆ ಮಾಜಿ ಸಚಿವರು ಮತ್ತು ಕೆಪಿಸಿಸಿ ಉಪಾಧ್ಯಕ್ಷರಾದ ಬಿ. ಶಿವರಾಂ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ಸೋಂಕಿತರಿಗೆ ಹಾಲು, ಹಣ್ಣು ಬ್ರೆಡ್, ಬಿಸ್ಕೆಟ್ ಇತರೆಯನ್ನು ವಿತರಣೆ ಮಾಡಿ ಧೈರ್ಯ ತುಂಬಿದರು.


     ಇದೆ ವೇಳೆ ಹಳೇಬೀಡು ವಸತಿ ನಿಲಯದಲ್ಲಿರುವ ಕೋವಿಡ್ ಸೆಂಟರ್ ಗೂ ತೆರಳಿ ಹಣ್ಣು-ಹಂಪಲು ನೀಡಿ ಯೋಗಕ್ಷೇಮ ಆಲಿಸಿದರು.

      ಈಸಂದರ್ಭದಲ್ಲಿ ಹಿಂದುಳಿದ ವರ್ಗದ ಅಧ್ಯಕ್ಷ ಸತ್ಯನಾರಾಯಣ್, ಸದಸ್ಯ ನಾಸೀರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ದರ್ಶನ್, ಧರ್ಮಪಾಲ್, ಮಲ್ಲೇಶ್ ಕೊಟ್ಟಿಗನಹಳ್ಳಿ, ಅಶೋಕ್,, ಡಾಕ್ಟರ್ ನರಸೇಗೌಡ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post