ಹಾಸನ: ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಶಾಂತಿ ಗ್ರಾಮ ಟೋಲ್ ಬಳಿಯ ಪೆಟ್ರೋಲ್ ಬಂಕ್ ಮುಂಭಾಗ ಬಾಗೂರು ಮಂಜೇಗೌಡ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಿನೂತನ ಪ್ರತಿಭಟನೆಗೆ ಕೆಪಿಸಿಸಿ ಹಾಸನ ಜಿಲ್ಲಾ ಉಸ್ತುವಾರಿ ಡಿ.ಕೆ.ಸುರೇಶ್ ನೂರುಜನರಿಗೆ ತೆರಿಗೆ ರಹಿತ ಮೂಲ ಬೆಲೆಯಾದ ೩೫ ರೂ.ಗೆ ಪೆಟ್ರೋಲ್ ಹಾಕುವ ಮೂಲಕ ಬುಧವಾರ ಬೆಳಿಗ್ಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಬಿಜೆಪಿ ರ‍್ಕಾರ ತೈಲ ಬೆಲೆ ಏರಿಕೆ ಮಾಡಿ ಜನವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಇದೊಂದು ಪಿಕ್ ಪಾಕೇಟ್ ಮಾಡುವ ರ‍್ಕಾರವಾಗಿದೆ ಎಂದು ವ್ಯಂಗ್ಯವಾಡಿದರು.
ಆಮದು ಮಾಡಿಕೊಳ್ಳುವ ಪೆಟ್ರೋಲ್‌ನ ಮೂಲ ಬೆಲೆ ೩೫ ಇದೆ ಆದರೆ ಕೇಂದ್ರ ಹಾಗೂ ರಾಜ್ಯ ರ‍್ಕಾರ ಸೇರಿ ೧೫.೫೦ ಹೆಚ್ಚುವರಿ ತೆರಿಗೆ ಹಾಕುವ ಮೂಲಕ ಪೆಟ್ರೋಲ್ ದರ ೧೦೦ ರೂ ಏರಿಕೆ ಯಾಗಿದ್ದು, ಕಾಂಗ್ರೆಸ್ ಪಕ್ಷ ಇದನ್ನು ವಿರೋಧಿಸುತ್ತದೆ, ಇಂತಹ ಕೊರೋನಾ ಸಂಕಷ್ಟದಲ್ಲಿ ಬೆಲೆ ಏರಿಕೆ ಮಾಡಿರುವುದು ಜನ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿದರು.
ಇಂಧನಕ್ಕೆ ಅಧಿಕ ತೆರಿಗೆ ಹೇರುವ ಮೂಲಕ ಪೆಟ್ರೋಲ್ ,ಡಿಸೇಲ್ ದರ ನೂರರ ಗಡಿದಾಟಿದೆ. ಇದರ ವಿರೋಧ ಕಾಂಗ್ರೆಸ್ ಪಕ್ಷ ರಾಜ್ಯದ ಎಲ್ಲಾ ಪೆಟ್ರೋಲ್ ಮುಂಭಾಗ ಈಗಾಗಲೇ ಐದು ದಿನಗಳಿಂದ ಪ್ರತಿಭಟನೆ ಮಾಡಿ ಖಂಡಿಸಲಾಗಿದೆ.
ಹಾಸನದಲ್ಲಿ ಬೈಕ್ ಗಳಿಗೆ ಮೂಲ ಬೆಲೆ ನೀಡಿ ಪೆಟ್ರೋಲ್ ಹಾಕಿಸುವ ವಿನೂತನ ಪ್ರತಿಭಟನೆ ಹಮ್ಮಿಕೊಂಡು ಇಂಧನ ದರ ಖಂಡಿಸಲಾಗುತ್ತಿದೆ ಬಿಜೆಪಿ ರ‍್ಕಾರ ಜನರ ಜೀವ ಹಾಗೂ ಜೀವನದ ಮೇಲೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಹಾಸನ ನಗರದ ಡೈರಿ ವೃತ್ತ, ಕೇಂಚಾಂಬ ಪೆಟ್ರೋಲ್ ಬಂಕ್ ಮುಂಭಾಗ ನೂರಾರು ಕಾಂಗ್ರೆಸ್ ಕರ‍್ಯರ‍್ತರು ಡಿ.ಕೆ.ಸುರೇಶ್ ನೇತೃತ್ವದಲ್ಲಿ ಪ್ರತಿಭಟಿಸಿ ಕೇಂದ್ರ ಹಾಗೂ ರಾಜ್ಯ ರ‍್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವವಹಿಸಿದ ಬಾಗೂರು ಮಂಜೇಗೌಡ ಮಾತನಾಡಿ ಇಂಧನ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಕೊವೀಡ್ ಸಂಕಷ್ಟದಲ್ಲಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಜನವಿರೋಧಿ ನೀತಿ ಅನುಸರಿಸುತ್ತಿದೆ.ಮುಂದಿನಗಳಲ್ಲಿ ಜನರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮೈಸೂರು ವಿಭಾಗೀಯ ಉಸ್ತುವಾರಿ ದ್ರುವನಾರಾಯಣ್ , ಎಂಎಲ್ ಸಿ ಗೋಪಾಲಸ್ವಾಮಿ,, ಹೆರುಗು ವಾಸುದೇವ್, ಹೆರಗು ಗಣೇಶ್, ದುದ್ದ ಬ್ಲಾಕ್ ಅಧ್ಯಕ್ಷ ವಿಶ್ವನಾಥ್ ಹೊಳೆನರಸೀಪುರ ಬ್ಲಾಕ್ ಅಧ್ಯಕ್ಷ ಹೊನ್ನಿಕೊಪ್ಪಲು ಮಂಜಣ್ಣ, ಚೇತನ್, ಮೆಳಗೋಡು, ಗ್ರಾಪಂ ಅಧ್ಯಕ್ಷ ಲೋಕೇಶ್, ಮುಖಂಡರಾದ ವಕೀಲರಾದ ಹರೀಶ್, ಬಾಂಬೆ ಸುರೇಸ್ ,ಮಡೆನೂರು ರಮೇಶ್, ದೊಡ್ಡಕರಡೆವು ಸೋನು, ಯೂತ್ ಬ್ಲಾಕ್ ಅಧ್ಯಕ್ಷ ಕಟ್ಟೇಪ್ರಕಾಶ್, ಕಬಳಿ ರಾಮಚಂದ್ರ, ಗುರುಸ್ವಾಮಿ ಇನ್ನಿತರರು ಇದ್ದರು.
