ಹಿಮ್ಸ್ನ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಹಾಸನ ಜೂ.೧೬ :-ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ಬೆಳ್ಳಿಹಬ್ಬ ಸಮಾರಂಭವು ಜೂ. ೧೪ ರಂದು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಧನ್ವಂತರಿ ಸಭಾಂಗಣದಲ್ಲಿ ನಡೆಸಲಾಗಿದ್ದು ಹಿಮ್ಸ್ನ ಮೂವರು ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.


ಸಮಾರಂಭದಲ್ಲ್ಲಿ ಕ್ರೀಡೆ, ರಾಷ್ಟ್ರೀಯ ಸೆವಾ ಯೋಜನೆ, ಸಾಂಸ್ಕöÈತಿಕ, ಕಲೆ, ಸಾಹಿತ್ಯ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.    

ರಾಷ್ಟ್ರೀಯ ಸೇವಾ ಯೋಜನೆ ಕ್ಷೇತ್ರದಲ್ಲಿ  ರಾಜ್ಯದಿಂದ ೫ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿಗಳಾದ ಡಾ.ಅಶೋಕ್, ಕುಮಾರ್.ಸಿ.ಪಿ, ಡಾ.ತೇಜಸ್ವಿನಿ.ಡಿ., ಡಾ.ಬಿ.ಆರ್.ಅನುಷಾ, ಅವರುಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ||ಕೆ.ಸುಧಾಕರ್ ಅವರು ಪ್ರಶಸ್ತಿ ಪ್ರಧಾನ ಮಾಡಿದರು ಎಂದು ಹಿಮ್ಸ್  ನಿರ್ದೇಶಕರಾದ ಡಾ||ರವಿಕುಮಾರ್ ತಿಳಿಸಿದ್ದಾರೆ.   

ಶಸ್ತç ಚಿಕಿತ್ಸಕರಾದ ಡಾ|| ಕೃಷ್ಣಮೂರ್ತಿ, ಪ್ರಾಂಶುಪಾಲರಾದ ಡಾ|| ನಾಗೇಶ್, ಮುಖ್ಯ ಆಡಳಿತಧಿಕಾರಿ ಕಲ್ಪಶ್ರೀ ಸಿ.ಆರ್, ರಾಷ್ಟ್ರೀಯ

 ಸೇವಾ ಯೋಜನ ಕಾರ್ಯಕ್ರಮಧಿಕಾರಿ ನಿಚಿತಕುಮಾರಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.  


Post a Comment

Previous Post Next Post