ಗರ್ಭ ಧರಿಸಿದ ಹಸುವಿಗೆ ವಿದ್ಯುತ್ ತಂತಿ ತಗಲಿ ಸ್ಥಳದಲ್ಲೆ ಸಾವು

ಹಾಸನ: ಗರ್ಭ ಧರಿಸಿ ಒಂಬತ್ತು ತಿಂಗಳು ಕಳೆದು ಕರುವಿಗೆ ಜನ್ಮ ನೀಡಬೇಕಾದ ಹಸುವಿಗೆ ವಿದ್ಯುತ್ ತಂತಿ ತಗಲಿ ಸ್ಥಳದಲ್ಲೆ ಸಾವನಪ್ಪಿದ ಘಟನೆ ನಗರದ ಶ್ರೀಸಂಗಮೇಶ್ವರ ಬಡಾವಣೆ, ಜವೇನಹಳ್ಳಿ ಕೆರೆ, ಶಿವಪಾರ್ವತಿ ದೇವಸ್ಥಾನದ ಎದುರು ನಡೆದಿದೆ.


       ಸಾವನಪ್ಪಿದ ಹಸುವಿನ ಮಾಲೀಕರಾದ ಸುಶೀಲ ಅವರು ಮಾಧ್ಯಮದೊಂದಿಗೆ ಮಾತನಾಡಿ, ಕಳೆದ ೫ ವರ್ಷಗಳಿಂದ ಸಾಕು ಸಲಗಿ ನಮ್ಮ ಜೀವನಕ್ಕೆ ಆಧಾರವಾಗಿದ್ದ ಹಸು ಶುಕ್ರವಾರ ಸಂಜೆ ಜವನಹಳ್ಳಿ ಕೆರೆ ಬಳಿ ಮೇಯುತ್ತಿದ್ದಾಗ ಅಲ್ಲೆ ಇದ್ದ ಟ್ರಾನ್ಸ್ ಫಾರಂ ವಿದ್ಯುತ್ ಕಂಬ ತಗಲಿ ಸಾವನಪ್ಪಿದೆ. ಹಸುವನ್ನು ಮೇಯಿಸಲು ಪ್ರತಿನಿತ್ಯ ಬರುತ್ತಿದ್ದು, ಹಸು ಮೇಯಲು ಮುಂದೆ ಹೋಯಿತು. ಈವೇಳೆ ಅಲ್ಲೆ ಇದ್ದ ವಿದ್ಯುತ್ ಕಂಬದ ಮೈನ್ ತಂತಿ ಕಟ್ಟಾಗಿರುವುದು ತಿಳಿಯದೇ ವಿದ್ಯುತ್ ತಗಲಿದಾಗ ಹಸು ಕಿರುಚಾಡಿತು. ನಾನು ಕೂಡ ಜೂರಾಗಿ ಕೂಗಿದೆ. ಆದರೇ ವಿದ್ಯುತ್ ಹರಿದಿದ್ದರಿಂದ ಯಾರು ಕೂಡ ಬಂದು ಕಾಪಾಡುವುದಕ್ಕೆ ಆಗಲಿಲ್ಲ. ೯ ತಿಂಗಳ ಗರ್ಭ ಕಟ್ಟಿದ ಹಸು ಸಲ್ಪ ಸಮಯದಲ್ಲೆ ಸಾವನಪ್ಪಿದ್ದು, ೫೦ ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಹಸು ಇಲ್ಲದಂತಾಗಿದೆ. ಸಂಬAಧಪಟ್ಟವರು ಕೂಡಲೇ ನಮಗೆ ಪರಿಹಾರ ಕೊಡಬೇಕೆಂದು ಇದೆ ವೇಳೆ ಒತ್ತಾಯಿಸಿದರು. ವಿಷಯ ತಿಳಿದ ಪೆನ್ಸನ್ ಮೊಹಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆಗಮಿಸಿ ವಿದ್ಯುತ್ ತಂತಿ ತಗಲಿರುವ ಬಗ್ಗೆ ಮಾಹಿತಿ ಪಡೆದುಕೊಂಡು ದೂರು ದಾಖಲಿಸಿಕೊಂಡರು. ಈಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಮೋಹನ್ ಅವರು ಆಗಮಿಸಿ ಮಾಹಿತಿ ಪಡೆದುಕೊಂಡರು. ನಂತರ ಹಸು ಮತ್ತು ಕರುವಿಗೆ ಪೂಜೆ ಮಾಡಿ ಜೆಸಿಬಿ ಮೂಲಕ ಅಲ್ಲೆ ಗುಂಡಿ ತೋಡಿಸಿ ಶಾಸ್ತೊçÃತ್ತವಾಗಿ ಮಣ್ಣು ಮಾಡಲಾಯಿತು.


Post a Comment

Previous Post Next Post