ಬೇಲೂರಿಗೆ ನೂತನವಾಗಿ ಆಗಮಿಸಿದ ತಹಸೀಲ್ದಾರ್ ರವರಿಗೆ ರ‍್ತಕರ ಸಂಘ ಅಭಿನಂದನೆ ಸಲ್ಲಿಸಿದರು.

    :-ಸತತ ಎರಡು ರ‍್ಷದಿಂದ ಕೋವಿಡ್ ಲಾಕ್ ಡೌನ್ ನಿಂದ ತತ್ತರಿಸಿದವರಿಗೆ ರ‍್ಕಾರದ ಜೊತೆ ಸಂಘ ಸಂಸ್ಥೆಗಳು ಸಹಕಾರ ನೀಡಲು ಮುಂದಾಗಬೇಕು ಹಾಗೂ ಮುಂದಿನ ದಿನದಲ್ಲಿ ರ‍್ಕಾರದಿಂದ ಮುಜರಾಯಿ ಇಲಾಖೆಗೆ ಒಳಪಟ್ಟ ದೇಗುಲದ ರ‍್ಚಕರಿಗೆ ಶೀಘ್ರವೇ ಕೋವಿಡ್ ಕಿಟ್ ನೀಡಲಾಗುತ್ತದೆ ಎಂದು ಬೇಲೂರು ತಹಸೀಲ್ದಾರ್ ಮೋಹನ್ ಹೇಳಿದರು.



   ಪಟ್ಟಣದ ಹೋಳೆಬೀದಿಯ ರ‍್ತಕರ ಭವನದಲ್ಲಿ ಹಮ್ಮಿಕೊಂಡ ಕೋವಿಡ್ ಕಿಟ್ ವಿತರಿಸಿದ ಬಳಿಕ ಮಾತನಾಡಿದ ಅವರು ಕಳೆದ ರ‍್ಷದ ಮೊದಲ ಕೋವಿಡ್ ಅಲೆ ಮತ್ತು ಪ್ರಸಕ್ತ ರ‍್ಷದ ಎರಡನೇ ‌ಅಲೆಯಿಂದ ಜನತೆ ತೀವ್ರ ಸಂಕಷ್ಟದಿಂದ ಕೆಲವರು ತಮ್ಮ ಬದುಕಿಗೆ ಕಷ್ಟಪಡುತ್ತಿದ್ದಾರೆ. ಇಂತಹ ಸಂರ‍್ಭದಲ್ಲಿ ರ‍್ಕಾರ ಕೂಲಿ ಕರ‍್ಮಿಕರು ಸೇರಿದಂತೆ ಉಪ‌ಕಸುಬುಗಳನ್ನು‌ ನಡೆಸುವರಿಗೆ ಸಹಾಯಹಸ್ತ ‌ನೀಡುತ್ತಾ ಬಂದಿದೆ‌ ಅದರೆ ರ‍್ಕಾರವೇ ಎಲ್ಲರಿಗೂ ಸ್ಪಂದಿಸಲು ಸಾದ್ಯವಾಗದು. ಅದ ಕಾರಣದಿಂದ ಸಂಘ- ಸಂಸ್ಥೆಗಳು ಇಂತಹ ಅಗಮ್ಯ ಕರ‍್ಯಕ್ಕೆ ಮುಂದಾಗುವ ಮೂಲಕ ರ‍್ಕಾರ ಜೊತೆ ಕೈಜೋಡಿಸಬೇಕು ಎಂದ ಅವರು‌ ಈಗಾಗಲೇ ಬೇಲೂರು ತಾಲ್ಲೂಕು ಆಡಳಿತ ವಿವಿಧ ಸಂಘ ಸಂಸ್ಥೆಗಳನ್ನು ಗುರುತಿಸಿ ಕೂಲಿ ಕರ‍್ಮಿಕರು ಮತ್ತು ಇನ್ನಿತರ ಬಡ ಜನತೆಗೆ ಸಹಾಯ ಮಾಡಿದೆ. ಅಂತಯೇ ಇಂದು ಬೇಲೂರು ರ‍್ತಕರ ಸಂಘದಿಂದ ಹಮಾಲಿ ಸಂಘ ಮತ್ತು ಪಟ್ಟಣದ ಬಡ ಜನತೆಗೆ ಕೋವಿಡ್ ಆಹಾರ ಪದರ‍್ಥಗಳ ಧಾನ್ಯದ ಕಿಟ್ ವಿತರಣೆ ಮಾಡಿದ್ದು ನಿಜಕ್ಕೂ ಸಂತೋಷ ತಂದಿದೆ. ಮುಂದಿನ ದಿನದಲ್ಲಿ ರ‍್ಕಾರದ ಕರ‍್ಯಕ್ರಮಕ್ಕೆ ಸರ‍್ವಜನಿಕರು ಪರ‍್ಣ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

      ರ‍್ತಕರ ಸಂಘದ ಅಧ್ಯಕ್ಷ ಬಿ.ಎಲ್.ಗಿರಿಯಪ್ಪಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ರ‍್ತಕರ ಸಂಘದ ತನ್ನದೆಯಾದ ಭವನ ಹೊಂದಿರುವ ಬೇಲೂರಿನ ಹೆಗ್ಗಳಿಕೆ ಪಾತ್ರವಾಗಿದೆ. ಪ್ರತಿ ರ‍್ಷವು ರ‍್ತಕರ ಸಂಘ ಜನಪರ ಮತ್ತು ಸಾಮಾಜಿಕಮುಖಿ‌ ಕರ‍್ಯಗಳ ಮೂಲಕ ಜನ ಮೆಚ್ಚುಗೆ ಪಡೆದಿದೆ. ವಿಶೇಷವಾಗಿ ಕಳೆದ ರ‍್ಷ ರ‍್ಕಾರದ ಕೋವಿಡ್ ದೇಣಿಗೆ ರೂ ೧.೩೫ ಲಕ್ಷ ರೂಗಳನ್ನ ನೀಡಲಾಗಿದೆ. ಅಂತಯೇ ರ‍್ತಕರ ಸಂಘದಿಂದ ಕೂಲಿ ಕರ‍್ಮಿಕರು ಮತ್ತು ಹಮಾಲಿಗಳಿಗೆ ಸಹಾಯಹಸ್ತ ನೀಡಬೇಕು ಎಂದು ತಾಲ್ಲೂಕು ಆಡಳಿತ ನೀಡಿದ ಕರೆಗೆ ಸ್ಪಂದಿಸಿದ ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಒಟ್ಟಾಗಿ ಸೇರಿ ಸರಿ ಸುಮಾರು ೧೩೨ ಮಂದಿಗೆ ಕೋವಿಡ್ ‌ಕಿಟ್ ವಿತರಣೆ ಮಾಡಲಾಗಿದೆ. ಮುಂದಿನ  ದಿನದಲ್ಲಿ ಕೂಡ ಬೇಲೂರು ರ‍್ತಕರ ಸಂಘ ಸಾಮಾಜಿಕಮುಖಿ ಕರ‍್ಯಕ್ಕೆ ಬದ್ಧವಾಗಿದೆ ಎಂದರು.

   ಈ ಸಂರ‍್ಭದಲ್ಲಿ ಮುಖ್ಯಾಧಿಕಾರಿ ಸುಜಯ್ ಕುಮಾರ್, ಪರಿಸರ ಅಭಿಯಂತರ ಮಧುಸೂದನ್, ಶಿರಸ್ತೇದಾರ್ ನಾಗರಾಜು. ರ‍್ತಕರ ಸಂಘದ ಕರ‍್ಯರ‍್ಶಿ ಸೈಯದ್ ಅಶಾಕ್, ಸಹ ಕರ‍್ಯರ‍್ಶಿ ಬಿ.ಆರ್.ತರ‍್ಥಂಕರ, ನರ‍್ದೇಶಕರಾದ ವಾಸುದೇವಧನ್ಯ, ಸುಬ್ರಹ್ಮಣ್ಯ, ಅಲ್ಜುಮುಲ್ಲಾ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು

Post a Comment

Previous Post Next Post