ಹಾಸನ: ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಘೋಷಣೆ ಮಾಡುತ್ತಿದ್ದಾರೆ ಅಷ್ಟೆ. ಸುಳ್ಳಿನ ಆಶ್ವಾಸನೆ ಕೊಡುವುದು ಬೇಡ. ಲಸಿಕೆಯು ಕಾರ್ಯರೂಪಕ್ಕೆ ಬಂದ ಮೇಲೆ ಪ್ರಶಂಸೆ ವ್ಯಕ್ತಪಡಿಸೋಣ ಎಂದು ಸಂಸದ ಪ್ರಜ್ವಲ್ ರೇವಣ್ಣ ಟೀಕಸಿದರು.
ನಗರದ ಈದ್ಗಾ ಮೈದಾನದಲ್ಲಿರುವ ಕೊರೋನಾ ಸೆಂಟರ್ ಗೆ ಭೇಟಿ ನೀಡಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಡೆತ್ ರೇಟ್ ಕಡಿಮೆಯಾಗಿಲ್ಲ. ಪ್ರತಿದಿನ ೧೦ ರಿಂದ ೧೫ ಮಂದಿ ಸಾವನ್ನಪ್ಪುತ್ತಿದ್ದಾರೆ. ಸಾರ್ವಜನಿಕರೆಲ್ಲರಿಗೂ ಕೊವಿಡ್ ಪರೀಕ್ಷೆ ಮಾಡುತ್ತಿಲ್ಲ. ರೋಗ ಲಕ್ಷಣಗಳಿದ್ದವರಿಗೆ ಮಾತ್ರ ಪರೀಕ್ಷೆ ಮಾಡಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಪ್ರತಿದಿನ ೧೨೦೦ ರಿಂದ ೧೮೦೦ ಪ್ರಕಣಗಳು ಬರುತ್ತಿದ್ದವು
ಈಗ ಸಲ್ಪ ಕಡಿಮೆಯಾಗಿದೆ .ಆದರೆ ಕೊರೊನಾ ಇಲ್ಲ ಅನ್ನೋ ಭಾವನೆ ಅಲ್ಲ ಎಂದರು. ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ರಾಪಿಡ್ ಟೆಸ್ಟ್ ಮಾಡುತ್ತಿದ್ದಾರೆ ಅಷ್ಟೆ ಅದರಲ್ಲಿ ಶೇ.೪೦ ರಷ್ಡು ಮಾತ್ರ ರೋಗ ಲಕ್ಷಣ ಗೊತ್ತಾಗುತ್ತದೆ. ಜೂ.೨೧ ರಿಂದ ೧೮ ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪ್ರಜ್ವಲ್ ರವರು,
ಅದು ಜಾರಿಗೆ ಬಂದಮೇಲೆ ಮಾತಾನಾಡುತ್ತೇನೆ. ಕೇಂದ್ರದ ಬಜೆಟ್ ನಲ್ಲಿ ೩೯ ಸಾವಿರ ಕೋಟಿ ಕೊರೋನಾ ಲಸಿಕೆಗೆ ಇಟ್ಟಿದ್ದಾರೆ. ಎಷ್ಟು ಲಸಿಕೆ ಕೊಟ್ಟಿದ್ದಾರೆ, ಉಳಿದ ಹಣ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ ಅವರು, ಪ್ರಧಾನಿಯವರು ಬರಿ ಘೋಷಣೆ ಮಾಡುತ್ತಿದ್ದಾರೆ. ಸುಳ್ಳಿನ ಆಶ್ವಾಸನೆ ಕೊಡುವುದು ಬೇಡ. ಇಂತಹ ಆಶ್ವಾಸನೆಗಳನ್ನು ಬಹಳ ಕೇಳಿದ್ದೇವೆ. ಲಸಿಕೆ ಕಾರ್ಯ ರೂಪಕ್ಕೆ ತಂದ ಮೇಲೆ ಪ್ರಶಂಸೆ ವ್ಯಕ್ತಪಡಿಸೋಣ. ಉಚಿತ ಲಸಿಕೆ ಕೊಡ್ತಿನಿ ಅಂದಿರುವುದು ಆಶ್ವಾಸನೆ ಅಷ್ಟೇ ಎಂದು ಟೀಕಿಸಿದರು. ಇಂತಹ ಸಂದರ್ಭದಲ್ಲಿ ಲಾಕ್ ಡೌನ್ ಬೇಕೋ ಬೇಡವೊ ಚಿಂತನೆ ಮಾಡಬೇಕು. ರಾಜ್ಯದಲ್ಲಿ ಪ್ರತಿನಿತ್ಯ ೧೫ ರಿಂದ ೧೮ ಸಾವಿರ ಕೇಸ್ ಗಳು ಬರುತ್ತಿದ್ದು,
ಅನ್ ಲಾಕ್ ಮಾಡಿದರೆ ಜನರು ಓಡಾಡುತ್ತಾರೆ, ಮತ್ತೆ ಸಂಖ್ಯೆ ಹೆಚ್ಚಾಗುವುದರಿಂದ ಲಾಕ್ ಡೌನ್ ಮುಂದುವರಿಸುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಎಂದು ಜೆಡಿಎಸ್, ಕಾಂಗ್ರೆಸ್ ಪಕ್ಷದವರು ಪ್ರಾರಂಭ ಮಾಡಿದ್ದಾರಾ! ಬಿಜೆಪಿ ಪಕ್ಷದವರು ಹೇಳುತ್ತಿದ್ದಾರೆ. ನಾಯಕರ ಬದಲಾವಣೆ ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಯಾರನ್ನು ಬೀಳಿಸಬೇಕು, ಯಾರನ್ನು ಏಳಿಸಬೇಕು ಅಂತಿದ್ದಿರಲ್ಲಾ ಅವರನ್ನೆ ಕೇಳಿದರೆ ಒಳ್ಳೆಯದು ಎಂದು ಮಾಧ್ಯಮದವರ ಪ್ರಶ್ನೆಗೆ ಸಂಸದರು ಮಾಧ್ಯಮದವರಿಗೆ ಟಾಂಗ್ ಕೊಟ್ಟರು.