ಹಾಸನ: ನಗರದ ಗೊರೊರು ರಸ್ತೆ ಬಳಿ ದೇವೇಗೌಡ ನಗರದಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಮಾಜಸೇವಕರಾದ ಜೀವನ್ ಕೆ. ಗೌಡ ರವರು ತಮ್ಮ ಜನ್ಮ ದಿನವನ್ನು ಸಂಭ್ರಮವಾಗಿ ಆಚರಿಸಿಕೊಳ್ಳದೇ ಕೇಕ್ ಕತ್ತರಿಸಿ ಮಂಗಳಮುಖಿಯವರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ಪುಡ್ ಕಿಟ್ ವಿತರಣೆ ಮಾಡುವ ಮೂಲಕ ಸರಳವಾಗಿ ಆಚರಿಸಿಕೊಂಡರು.
ನಂತರ ಮಾತನಾಡಿದ ಅವರು, ಕೊರೋನಾ ಸಂಕಷ್ಟದ ಕಾಲದಲ್ಲಿ ಕೆಲಸವಿಲ್ಲದೇ ಅನೇಕರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಂತವರಲ್ಲಿ ಮಂಗಳಮುಖಿಯರು ಕೂಡ ಸೇರುತ್ತಾರೆ, ಇನ್ನು ತಮ್ಮ ಜೀವದ ಅಂಗನ್ನು ತೊರೆದು ಕೊರೋನಾ ಜಾಗೃತಿ ಮೂಡಿಸಿ ಪಾಸಿಟಿವ್ ನಿಯಂತ್ರಣ ಮಾಡುವಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಪಾತ್ರ ಬಹಳ ಮುಖ್ಯವಾಗಿದೆ ಎಂದರು. ಈ ನಿಟ್ಟಿನಲ್ಲಿ ನನ್ನ ಜನ್ಮ ದಿನವನ್ನು ಸಂಭ್ರಮದಲ್ಲಿ ಆಚರಿಸಿಕೊಳ್ಳದೇ ಅದೆ ಖರ್ಚನ್ನು ಪ್ರತಿನಿತ್ಯ ಬಳಕೆ ಮಾಡುವ ಆಹಾರದ ಕಿಟ್ ಕೊಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ನಂತರದಲ್ಲಿ ಮಂಗಳಮುಖಿಯರು ಮತ್ತು ಆಶಾ ಕಾರ್ಯಕರ್ತೆಯರು ಲಾಕ್ ಡೌನ್ ಸಂದರ್ಭದ ಸಮಸ್ಯೆಯನ್ನು ಇದೆ ವೇಳೆ ಹೇಳಿಕೊಂಡರು.
ಈಸಂದರ್ಭದಲ್ಲಿ ದೇವೇಗೌಡ ನಗರದ ಅರುಣ್, ಸಂತೋಷ್, ವಿರೂಪಾಕ್ಷ, ಸುನೀಲ್, ಕಾಂತರಾಜು, ಕಿರಣ್, ಮಂಜು, ಸುಪ್ರೀತ್, ಉಮರ್, ರಮ್ಮಿದ್ ಇತರರು ಪಾಲ್ಗೊಂಡಿದ್ದರು.
Tags
ಹಾಸನ