ರಾಮನಾಥಪುರ;- ಸಮಾಜ ನನಗೇನು ಕೊಟ್ಟಿದೆ ಎಂಬುದಕ್ಕಿAತ ನಾನು ಸಮಾಜಕ್ಕೆ ಏನು ಕೊಟ್ಟಿದ್ದೇನೆ ಎಂಬ ಮಾತಿನ ಜಾಡನ್ನು ಹಿಡಿದು ತಂಬಾಕು ಮಂಡಳಿಯಲ್ಲಿ ಉತ್ತಮ ಕಾರ್ಯನಿರ್ವಹಿಸಿ ಕೆಲಸ ಮಾಡಿದ ಕ್ಷೇತ್ರ ಸಹಾಯಕರು ಶ್ರೀ ಪರಮೇಶ್ವರಪ್ಪ ಅವರು ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ ಹಾಗು ಧಾರ್ಮಿಕವಾಗಿ ಜೀವ ಮಿಡಿವವರು ಎಂದು ಪ್ರಾದೇಶಿಕ ವ್ಯವಸ್ಥಾಪಕರು ಅರ್.ಎಂ. ಮಾರಣ್ಣ ಶ್ಲಾಘಿಸಿದರು.
ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆ ವ್ಯವಸ್ಥಪಕರು ಕ್ಷೇತ್ರ ಸಹಾಯಕರು ಶ್ರೀ ಪರಮೇಶ್ವರಪ್ಪ ಅವರನ್ನು ಸನ್ಮಾನಿಸಿದ ನಂತರ ಮಾತನಾಡಿದ ಅವರು ಇಂತಹ ಅಧಿಕಾರಿಗಳು ಅವರ ಉತ್ತಮ ಕೆಲಸ, ಕರ‍್ಯಗಳಿಂದ ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಡಿರುವ ಇಲ್ಲಿಯ ನಿವೃತ್ತ ಕ್ಷೇತ್ರ ಸಹಾಯಕರು ಶ್ರೀ ಪರಮೇಶ್ವರಪ್ಪನವರು ಅವರ ಸೇವಾ ಮನೋಭಾವ ಇನ್ನೂ ಹೆಚ್ಚಿನ ರೀತಿಯಲ್ಲಿ ವೃದ್ಧಿಸಿ ಸಂಸಾರ ಸುಖ ಮಯವಾಗಿರಲಿ ಹಾರೈಸಿದರು.
ತಂಬಾಕು ಮಂಡಳಿಯ ನಿವೃತ್ತ ಕ್ಷೇತ್ರ ಸಹಾಯಕರು ಶ್ರೀ ಪರಮೇಶ್ವರಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ ಪರಮಾತ್ಮನ ಕೃಪೆಯಿಂದ ಅದರಲ್ಲಿ ನಾನು ಅನೇಕ ನನ್ನ ಅಧಿಕಾರದ ೩೦ ವರ್ಷಗಳು ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿ ಉತ್ತಮ ಗುರಿ ಮುಟ್ಟಲು ನಿಮ್ಮಗಳ ಸಹಕಾರದಿಂದ ಎಂದರು.
ಈ ಸಂದರ್ಭದಲ್ಲಿ ತಂಬಾಕು ಹರಾಜು ಅದೀಕ್ಷಕರು ಸಿದ್ದರಾಮ ಡಾಂಗೆ, ದೇವಾನಂದ್, ರೈತರಾದ ಗುಡ್ಡೆನಹಳ್ಳಿ ನೇತ್ರಪಾಲ್, ಲಕ್ಕೂರು ಶಿವಣ್ಣ. ಮಲ್ಲಾಪುರ ಎಂ.ಕೆ. ನಾಗರಾಜು, ಹರಳಹಳ್ಳಿ ವಿಶ್ವನಾತ್, ತಮ್ಮೇಗೌಡ, ಮೇನೆಜರ್ ಮಂಜುನಾಥ್, ಕ್ಷೇತ್ರ ಸಹಾಯಕ ಸಿ.ಎ. ಪರಮೇಶ್, ಕ್ಷೇತ್ರಾಧಿಕಾರಿ ಉಮೇಶ್‌ಕುಮಾರ್, ಗೀರೀಶ್ ಮುಂತಾದವರು ಉಪಸ್ಥಿತರಿದ್ದರು.