ರಾಮನಾಥಪುರ: ಕಾವೇರಿ ನದಿಯಲ್ಲಿ ನೀರಿನ ಕಡಿಮೆ ಇರುವ ಸ್ಥಳಗಲ್ಲಿ ಕೆಲವು ಕಿಳಿಗೇಡಿ ಕಳ್ಳರುಗಳು ಪಂಚವರ್ಣಗಳ ವೈವಿಧ್ಯಮಯವಾದ ಹಾಗೂ ನಾನಾ ಜಾತಿಯ ಬೃಹತ್ ಮೀನುಗಳನ್ನು ಹಿಡಿಯಲು ಬಲೆ ಬಿಸಿರುವುದನ್ನು ಕಾವೇರಿ ನದಿ ಸ್ವಚ್ಚತಾ ಅಂದೋಲನಾ ಸಮಿತಿ ಸದಸ್ಯರು ಹಾಗೂ ಮುಖಂಡರು ಖಂಡಿಸಿ ನದಿಯಲ್ಲಿ ಬಲೆಯಲ್ಲಿ ಸಿಕ್ಕಿಕೊಂಡು ಸತ್ತಿರುವ ಮೀನುಗಳನ್ನು ಹಿಡಿದುಕೊಂಡು ಮೆರವಣಿಗೆ ಮಾಡಿ ಪ್ರತಿಭಟನೆ ಮಾಡಿದರು.
ರಾಮನಾಥಪುರ ಗಾಯತ್ರಿಶಿಲೆ ಹತ್ತಿರ ಕಾವೇರಿ ನದಿಯಲ್ಲಿ ರಾತ್ರಿಯ ವೇಳೆಯಲ್ಲಿ ಮೀನು ಹಿಡಿಯಲು ನದಿಯಲ್ಲಿ ಸುಮಾರು ೧೦೦ ಮೀಟರ್ ದೂರ ನದಿಯಲ್ಲಿ ಬಲೆ ಬಿಸಿದ್ದು ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದ ನೂರಾರು ಮೀನುಗಳು ಸಿಕ್ಕಿಕೊಂಡು ಕೆಲವು ಸತ್ತಿದ್ದರೆ ಕೆಲವು ಸಾಯುತ್ತಿರುವುದನ್ನು ಬಿಡಿಸಿದ ಬಲೆಯನ್ನು ನದಿಯ ದಡಕ್ಕೆ ತಂದು ಸಮಿತಿಯವರು ಸುಟ್ಟುಹಾಕಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮೋಹನ್ ಮಾತನಾಡಿ ಮಿನುಗಾರಿಕೆ ಇಲಾಖೆಯ ನಿಲ್ಯಷ್ಯದಿಂದ ಅಗಿದಾಗ್ಯೆ ಇಲ್ಲಿಯ ಕಾವೇರಿ ನದಿಯಲ್ಲಿರುವ ಸಾವಿರಾರು ಮೀನುಗಳು ಕಳ್ಳರಿಂದ ಕಣ್ಣುಮರೆಯಾಗುತ್ತಿವೆ. ಪ್ರತಿ ನಿತ್ಯ ರಾತ್ರಿ ವೇಳೆ ಬಲೆ ಬಿಸುತ್ತಾರೆ. ಈ ಬಗ್ಗೆ ಅನೇಕ ಸಾರಿ ಅವರಿಗೆ ತಿಳಿಸಿದರೂ ಎನು ಪ್ರಯೋಜನವಾಗಿಲ್ಲ. ಸಂಬAಧ ಪಟ್ಟ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಇಲ್ಲಿಯ ನದಿ ನೀರಿನಲ್ಲಿ ಅಗಿದ್ಯಾಗ್ಗೆ ಅಗುತ್ತಿರುವ ಕಳತನವನ್ನು ನಿಲ್ಲಿಸಿಕೊಡುವಂತೆ ಮನವಿ ಮಾಡಿದರು.
ಇಲ್ಲಿಯ ಗಾಯತ್ರಿ ಶಿಲೆ, ಗೋಗರ್ಭ, ರಾಮೇಶ್ವರಸ್ವಾಮಿ ದೇವಸ್ಥಾನದ ಹತ್ತಿರ ಕಾವೇರಿ ಈ ಮತ್ಸö್ಯಗಳೆಲ್ಲವೂ ಶಿವನ ಸಾನಿಧ್ಯದಲ್ಲಿರುವ ದೇವತೆಗಳ ಅವತಾರವೆಂದು ನಂಬಿಕೆ ಇದೆ. ಇಂತಹ ಪುಣ್ಯ ಸ್ಥಳದಲ್ಲಿರುವ ಇದು ನಂಬಿಕೆಯ ಬಲವಾದ ಬೇರುರಿರುವ ಪಂಚವರ್ಣದ ಮತ್ಸö್ಯಗಳನ್ನು ರಕ್ಷಿಸಬೇಕಾಗಿದೆ. ಕಾವೇರಿ ನದಿಯ ಗೋಗರ್ಭಶಿಲೆ, ವಹ್ನಿ ಪುಷ್ಕರಣಿಯ ರಾತ್ರಿ ವೇಳೆ ಮೀನು ಹಿಡಿಯುತ್ತಿದ್ದಾರೆ. ಅಲ್ಲದೇ ಈ ಸ್ಥಳದಿಂದ ೨೦೦ ಮೀ. ದೂರ ಸುತ್ತಮುತ್ತ ಮೀನುಗಾರಿಕೆ ಇಲಾಖೆ ನಿಷೇದಿಸಿದರೂ ಕಳ್ಳತನವಾಗಿ ಮೀನು ಹಿಡಿಯುವಿಕೆ ಕಾರ್ಯ ಮುಂದುವರಿದಿದೆ. ಈ ಸ್ಥಳದಲ್ಲಿ ಹಾಗೂ ಅಕ್ಕಪಕ್ಕದಲ್ಲಿ ಮೀನು ಹಿಡಿಯಲು ಬಲೆಯನ್ನು ಹಾಕಿ ಹಿಡಿಯುವವರನ್ನು ಕ್ರಮ ಕೈಗೊಳ್ಳದಿದ್ದರೆ ಇಲ್ಲಿಯ ಮೀನುಗಳನ್ನು ನೋಡಲು ಬರುವ ಪ್ರವಾಸಿಗರಿಗೆ ನೋಡಲು ಮೀನುಗಳು ಇಲ್ಲಾವಾಗುತ್ತವೆ ಎಂದು ಮೋಹನ್ ಬೇಸರ ವ್ಯಕ್ತಪಡಿಸಿದರು.
ಈ ಪ್ರತಿಭಟನೆ ವೇಳೆಯಲ್ಲಿ ಕಾವೇರಿ ನದಿ ಸ್ವಚ್ಚತಾ ಅಂದೋಲನಾ ಸಮಿತಿ ಅಧ್ಯಕ್ಷ ಸಿದ್ದರಾಜು, ಮೋಹನ್, ರಾಜು, ನಾಗೇಂದ್ರ, ಮಹೇಶ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿ, ಶ್ರೀಘವೇ ಈ ಬಗ್ಗೆ ಕ್ರಮ ಕೈಗೊಂಡು ರಾತ್ರಿ ವೇಳೆ ಕಾವಲು ಗಾರರನ್ನು ನೇಮಿಸುವಂತೆ ಅವರು ಒತ್ತಾಯಿಸಿದರು.