ಬಾರಿ ಮಳೆಗೆ ಏಳೆಂಟು ಅಂಗಡಿ ಒಳಗೆ ನುಗ್ಗಿದ ಚರಂಡಿ ನೀರು ೪ ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಸ್ತು ನಷ್ಟ

ಹಾಸನ: ನಗರದಲ್ಲಿ ಗುರುವಾರ ಸಂಜೆ ಸುರಿದ ಬಾರಿ ಮಳೆಗೆ ಏಳೆಂಟು ಅಂಗಡಿ ಮಳಿಗೆಗೆ ನೀರು ನುಗ್ಗಿದ ಪರಿಣಾಮ ೪ ಲಕ್ಷಕ್ಕಿಂತ ಹೆಚ್ಚು ಮೌಲ್ಯದ ವಸ್ತುಗಳು ನಷ್ಟವಾದ ಘಟನೆ ರಿಂಗ್ ರಸ್ತೆ, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಬಳಿ ನಡೆದಿದೆ.


      ಕಳೆದ ಒಂದು ದಿನಗಳ ಹಿಂದೆ ಸಂಜೆ ಸುರಿದ ಮಳೆಗೆ ಚರಂಡಿ ತುಂಬಿ ಕಟ್ಟಿಕೊಂಡ ನೀರು ಕೆಳ ಅಂತಸ್ಥಿತಿನ ಮಳಿಗೆಗಳಿಗೆ ನುಗ್ಗಿದೆ. ಈ ವೇಳೆ ಸಂತೋಷ್ ಇಂಟೀರಿರ‍್ಸ್ ಪ್ರೇವುಡ್ ಮಳಿಗೆಗೆ ಒಳಗೆ ನೀರು ಸೇರಿಕೊಂಡು ಒಳಗೆ ಇದ್ದ ಪ್ಲೇವುಡ್, ಮೈಕಾ ಸೀಟ್ ಸೇರಿದಂತೆ ಇತರೆ ಸೇರಿ ೧ ಲಕ್ಷದ ೫೦ ಸಾವಿರ ಮೌಲ್ಯಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ನೀರು ಪಾಲಾಗಿದೆ. ಇನ್ನು ಪಕ್ಕದಲ್ಲಿ ಇರುವ ಮಳಿಗೆಗಳಿಗೂ ನುಗ್ಗಿರುವ ನೀರು ಪ್ರಿಡ್ಜ್, ಮೋಟರ್ ಸೇರಿ ಒಟ್ಟು ೪ ಲಕ್ಷಕ್ಕೂ ಹೆಚ್ಚು ಮೌಲ್ಯದ ಪೀಠೋಪಕರಣಗಳು ನಷ್ಟವಾಗಿದೆ. ಈ ಬಗ್ಗೆ ಸತ್ಯಮಂಗಲ ಗ್ರಾಮ ಪಂಚಾಯಿತಿಗೆ ತಿಳಿಸಿದ ಹಿನ್ನಲೆಯಲ್ಲಿ ಗ್ರಾಪಂ ಪಿಡಿಒ ಅಧಿಕಾರಿ ನಟರಾಜ್ ಆಗಮಿಸಿ ಸ್ಥಳ ವೀಕ್ಷಣೆ ಮಾಡಿದರು. ನಷ್ಟವಾಗಿರುವ ವಸ್ತುಗಳಿಗೆ ಕೂಡಲೇ ಪರಿಹಾರ ಕೊಡಬೇಕೆಂದು ಇದೆ ವೇಳೆ ಅಂಗಡಿ ಮಾಲೀಕರಾಧ ಜಿ.ಓ. ಮಹಾಂತಪ್ಪ ಒತ್ತಾಯಿಸಿದ್ದಾರೆ.


Post a Comment

Previous Post Next Post