ಮೃತರಾದ ಸಿದ್ದಲಿಂಗಯ್ಯ ರವರಿಗೆ ಜೆಡಿಎಸ್ ನಿಂದ ಶ್ರದ್ಧಾಂಜಲಿ ಕಲಾವಿದರಿಗೆ ಪುಡ್ ಕಿಟ್ ವಿತರಣೆ

ಹಾಸನ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜೆಡಿಎಸ್ ಮುಖಂಡರಾದ ಅಗಿಲೆ ಯೋಗೀಶ್ ನೇತೃತ್ವದಲ್ಲಿ ಇತ್ತಿಚಿಗೆ ಸಾವನಪ್ಪಿದ ಹಿರಿಯ ಸಾಹಿತಿ ಸಿದ್ದಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಮತ್ತು ಕಲಾವಿದರಿಗೆ ಆಹಾರದ ಕಿಟ್ ವಿತರಣೆ ಕಾರ್ಯಕ್ರಮ ನಡೆಸಿದರು.


      ನಂತರ ಮಾತನಾಡಿದ ಅವರು, ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಹಿರಿಯ ದಲಿತ ಕವಿ ಹಾಗೂ ಬಂಡಾಯ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರು ಮೃತರಾಗಿದ್ದಾರೆ. ದಲಿತ ಸಮುದಾಯದಲ್ಲಿ ಸ್ವಾಭಿಮಾನದ ಕಿಡಿ ಹಚ್ಚಿದ ಅವರು, ರಾಜ್ಯದ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು ಎಂದು ಹೇಳಿದರು. ಕರ್ನಾಟಕದ ದಲಿತ ಚಳವಳಿಗೆ ಹೊಸ, ಸಂಚಲನ ನೀಡಿದ್ದ ಅಪರೂಪದ ಸಾಹಿತಿ, ಸದಾಕಾಲ ಸಾಮಾಜಿಕ ಸಮಾನತೆಯ ಹೋರಾಟದಲ್ಲಿ ತೊಡಗಿಕೊಂಡವರು. 'ದಲಿತ ಕವಿ' ಎಂದೇ ಪ್ರಸಿದ್ಧರಾಗಿದ್ದರು ಎಂದು ಹೇಳಿದರು. ಕೊರೋನಾ ಎಂಬ ಮಹಾಮಾರಿ ಆವರಿಸಿ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಯಾವ ಕೆಲಸವಿಲ್ಲದೆ ಕಲಾವಿದರಂತು ತಮ್ಮ ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಇಂತಹ ಕಲಾವಿದರನ್ನು ಕರೆಯಿಸಿ ಅವರಿಗೆ ಸಲ್ಪವಾದರೂ ನೆರವಾಗೋಣ ಎಂಬ ದೃಷ್ಠಿಯಲ್ಲಿ ಆಹಾರದ ಕಿಟ್ ಗಳನ್ನು ಕೊಡುತ್ತಿರುವುದಾಗಿ ಹೇಳಿದರು. ಕಲಾವಿದರು ಯಾವ ಸಮಯದಲ್ಲಾರೂ ಕರೆದರೇ ಅವರ ನೆರವಿಗೆ ನಾನು ಬರುತ್ತೇನೆ. ಮುಂದೆ ನಡೆಯುವ ವಿಧಾನ ಪರಿಷತ್ತು ಚುನಾವಣೆಯಲ್ಲಿ ಏನಾದರೂ ಅಭ್ಯರ್ಥಿಯಾಗಿ ಅವಕಾಶ ಸಿಕ್ಕಿದರೇ ನಿಮ್ಮೆಲ್ಲರ ಸಹಕಾರ ನಮಗೆ ಅಗತ್ಯ. ನಾನು ಶಾಸಕನಾದರೇ ಕಲಾವಿದರ ಬಗ್ಗೆ ಹೆಚ್ಚು ಗಮನ ಕೊಡುವುದಾಗಿ ಇದೆ ವೇಳೆ ನಾನು ಶಾಸಕ ಸ್ಥಾನದ ಅಭ್ಯರ್ಥಿ ಎಂದು ಬಿಂಭಿಸಿಕೊAಡರು. ಶಾಸಕ ಸ್ಥಾನಕ್ಕೆ ಅವಕಾಶ ಸಿಗದಿದ್ದರೂ ನನ್ನ ಕೈಲಾದ ಸಹಕಾರ ಮಾಡುವುದಾಗಿ ಹೇಳಿದರು. ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಅನೇಕ ಸಂಘ-ಸAಸ್ಥೆಗಳಿಗೆ ಆಹಾರದ ಕಿಟ್ ಗಳನ್ನು ಕೊಟ್ಟಿರುವುದಾಗಿ ಹೇಳಿದರು.

     ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯ ಹೆಚ್.ಪಿ. ಗೋಪಾಲ್, ಹಿರಿಯ ಕಲಾವಿದರಾದ ರಂಗಪ್ಪ ದಾಸ್, ಯಲಗುಂದ ಶಾಂತಕುಮಾರ್, ಎ.ಸಿ. ರಾಜು, ಗಿರೀಶ್, ಜೆಡಿಎಸ್ ಮುಖಂಡ ದಸ್ತಾಗಿರ್ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post