ಹಾಸನ: ಖಾಸಗಿ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿರುವ ಸುಲಿಗೆ ನಿಲ್ಲಿಸದಿದ್ದರೇ ಜನರಿಗೆ ನಾನೇ ಹೇಳಿ ಹೊಡೆಸುತ್ತೇನೆ. ಹಾಸನ ಜಿಲ್ಲೆಯಲ್ಲಿ ಹೊಸ ಕೆಲಸಗಳು ಯಾವುದು ಬೇಡ. ಹೆಚ್.ಡಿ. ಕುಮಾರಸ್ವಾಮಿ ಕಾಲದಲ್ಲಿ ಜಾರಿಗೆ ಬಂದ ಅಭಿವೃದ್ಧಿ ಕೆಲಸ ಮಾಡಿಸಿದರೇ ಸಾಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯಿಸಿದರು.
ಹಾಸನ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಲೂಟಿ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಈ ಬಗ್ಗೆ ಕ್ರಮವಹಿಸದಿದ್ದರೆ ನಾವು ಸುಮ್ಮನಿರಲ್ಲ. ನಾನೇ ಜನರಿಗೆ ಹೇಳಿ ನುಗ್ಗಿ ಹೊಡೆಸ ಬೇಕಾಗುತ್ತದೆ ಎಂದು ಹಾಸನದಲ್ಲಿ ಸುಲಿಗೆ ಮಾಡುತ್ತಿರುವ ಅನೇಕ ಆಸ್ಪತ್ರೆಯ ಹೆಸರನ್ನು ಕೂಡ ಇದೆ ವೇಳೆ ಬಹಿರಂಗಪಡಿಸಿದರು. ಖಾಸಗಿ ಆಸ್ಪತ್ರೆಯಲ್ಲಿ ಸುಲಿಗೆ ಮಾಡಲು ಸರ್ಕಾರ ಅವರ ಜೊತೆ ಸೇರಿಕೊಂಡಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. ಕಳೆದ ಮೂರು ದಿನಗಳ ಹಿಂದೆ ನಡೆದ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಗ್ರೀನ್ ಫೀಲ್ಡ್ ಏರ್ ಪೋರ್ಟ್ ಸ್ಥಾಪಿಸುವ ಬಗ್ಗೆ, ಚನ್ನಪಟ್ಟಣ ಅಂಗಳದಲ್ಲಿ ವಿಹಾರ ಧಾಮ ಮತ್ತು ಉದ್ಯಾನವನ ನಿರ್ಮಾಣ ಕಾಮಗಾರಿ, ಚಿಕ್ಕಮಗಳೂರು-ಬೇಲೂರು, ಆಲೂರು ಹಾಗೂ ಹಾಸನ ನಡುವಿನ ರೈಲು ಮಾರ್ಗದ ಯೋಜನೆಯನ್ನು ಕೈಗೆತ್ತಿಕೊಳ್ಳುವ ಬಗ್ಗೆ ಮತ್ತು ತಾಲೂಕಿನ ಸೋಮನಹಳ್ಳಿಕಾವಲು ತೋಟಗಾರಿಕೆ ಕ್ಷೇತ್ರದಲ್ಲಿ ಹೊಸದಾಗಿ ತೋಟಗಾರಿಕ ಮಹಾವಿದ್ಯಾಲಯ ಸ್ಥಾಪಿಸಲು ಸರಕಾರದ ಆದೇಶವಾಗಿದ್ದು, ಸಚಿವ ಸಂಪುಟದಲ್ಲಿಯೂ ಕೂಡ ಅನುಮೋದನೆ ದೊರಕಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಅನುದಾನ ನೀಡಬೇಕು. ಹೊಸದಾಗಿ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೂ ಹೆಚ್.ಡಿ. ಕುಮಾರಸ್ವಾಮಿ ಆಡಳಿದಲ್ಲಿ ಜಾರಿಯಾದ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ಇದೆ ವೇಳೆ ಆಗ್ರಹಿಸಿದರು.
ಕಳೆದ ನಾಲ್ಕು ದಿನಗಳ ಹಿಂದೆ ಮುಖ್ಯಮಂತ್ರಿಗಳು ಹಾಸನಕ್ಕೆ ಬಂದು ಸಭೆ ನಡೆಸಿ ನಿರ್ದೇಶನ ನೀಡಿದ್ದರು. ರಾಷ್ಟಿçÃಯ ವಿಪತ್ತು ನಿಧಿಯಲ್ಲಿ ೫ ಲಕ್ಷ ಕೊಡಬಹುದು. ರಾಜ್ಯ ಸರಕಾರವು ಕೂಡ ಬಿಪಿಎಲ್ ಕಾಡ್ ಇರುವ ಕುಟುಂಬಗಳಿಗೆ ೧ ಲಕ್ಷ ಕೊಡಲು ತೀರ್ಮಾನಿಸಿರುವುದನ್ನು ಸ್ವಾಗತಿಸುತ್ತೇನೆ. ಆದರೇ ಕೇಂದ್ರದ ವಿಪತ್ತು ನಿಧಿಯಿಂದಲೂ ಕೂಡ ೫ ಲಕ್ಷ ರೂಗಳ ಪರಿಹಾರ ಕೊಡಿಸಲು ರಾಜ್ಯ ಸರಕಾರ ಮನವಿ ಮಾಡಬೇಕು. ನಿಜವಾದ ಬಡವರಿಗೆ ೧ ಲಕ್ಷ ಕೊಡಲು ಕೂಡಲೇ ತಹಸೀಲ್ದಾರ್ ಅಂತಹ ಕುಟುಂಬಗಳ ಪಟ್ಟಿ ಮಾಡಬೇಕು. ಜಿಲ್ಲಾಧಿಕಾರಿಗಳು ಕೂಡಲೇ ಮುಖ್ಯಮಂತ್ರಿಗಳಿಗೆ ಪಟ್ಟಿ ಕಳುಹಿಸಬೇಕು. ಜಿಲ್ಲೆಯಲ್ಲಿ ಕೊರೋನಾದಿಂದ ಸತ್ತವರು ಒಟ್ಟು ೧ ಸಾವಿರ ಮಂದಿ ಇದ್ದಾರೆ. ಹಾಸನ ಹಾಲು ಒಕ್ಕೂಟದಿಂದ ಮತ್ತು ಹೆಚ್.ಡಿ.ಸಿ.ಸಿ. ಬ್ಯಾಂಕ್ ಸೇರಿ ಕೊರೋನಾದಿಂದ ಸಾವನಪ್ಪಿದ ಬಡ ಕುಟುಂಬಕ್ಕೆ ೧೦ ಸಾವಿರ ರೂಗಳನ್ನು ಕೊಡುತ್ತೇವೆ. ೨ನೇ ಅಲೆಯಲ್ಲಿ ಒಟ್ಟು ೬೯೫ ಜನರು ಸಾವನಪ್ಪಿದ್ದು, ಬಿಪಿಎಲ್ ಕಾರ್ಡ್ ಇದ್ದವರ ಪರಿಶೀಲಿಸಿ ಶೀಘ್ರವೇ ಕೊಡಲಾಗುವುದು. ಮುಖ್ಯಮಂತ್ರಿಗಳು ಪರಿಹಾರ ಕೊಡುವವರೆಗೂ ಕಾಯಲು ಆಗುವುದಿಲ್ಲ. ಅಷ್ಟರೊಳಗೆ ನಾವುಗಳು ೧೦ ಸಾವಿರ ರೂಗಳನ್ನು ಕೊಡಲಾಗುವುದು ಎಂದು ಭರವಸೆ ನೀಡಿದರು. ಕೊರೋನಾಕ್ಕೆ ಹೆದರಿ ನೇಣು ಹಾಕಿಕೊಂಡು ಸಾವನಪ್ಪಿದ ಕುಟುಂಬಕ್ಕೂ ಪರಿಹಾಕ ಕೊಡಲಿ ಎಂದು ಒತ್ತಾಯಿಸಿದರು. ಮುಂದೆ ಬರಬಹುದಾದ ೩ನೇ ಕೊರೋನಾ ಅಲೆಗೆ ಮೊದಲೆ ಸಿದ್ಧತೆ ಮಾಡಿಕೊಳ್ಳಬೇಕು. ತಜ್ಞರ ಸಲಹೆ ಪಡೆದುಕೊಂಡು ೨ನೇ ಅಲೆಯ ಲಾಕ್ ಡೌನ್ ಅಗತ್ಯವಿದ್ದರೇ ಗಂಭೀರವಾಗಿ ಚಿಂತನೆ ಮಾಡಿ ಇನ್ನು ೧೫ ದಿನಗಳ ಕಾಲ ವಿಸ್ತರಣೆ ಮಾಡಬೇಕು. ಮಾಡಿದರೇ ಉತ್ತಮ ಎಂದು ಅಭಿಪ್ರಾಯಪಟ್ಟರು.
ಹಾಸನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಂದಿರುವುದಕ್ಕೆ ಸಂತೋಷ ಪಡುತ್ತೇನೆ. ನಮ್ಮೂರಿಗೆ ಬಂದಾಗ ಗೌರವ ಕೊಡುತ್ತೇನೆ. ಸಭೆಯಲ್ಲಿ ಕೆಳಗೆ ಕೂರಲು ಛೇರು ಹಾಕಲಾಗಿತ್ತು. ಸಭೆ ವೇಳೆ ಸಿಎಂ ನನ್ನನ್ನ ವೇದಿಕೆ ಮೇಲೆ ಕರೆದರು. ಅವರಿಗೆ ಗೌರವ ಕೊಟ್ಟು ನಾನು ಅವರ ಜೊತೆ ಕುಳಿತುಕೊಂಡಿದ್ದೆನು. ಈವೇಳೆ ಜಿಲ್ಲೆಯ ಕೆಲಸಗಳ ಬಗ್ಗೆ ಸಮಗ್ರ ಪರಿಶೀಲನೆ ಆಗಬೇಕಾಗಿತ್ತು. ಕೊರೋನಾ ಮತ್ತು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತ್ರ ಸಭೆಯಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದರು. ಮುಖ್ಯಮಂತ್ರಿಗಳೇ ಕೇವಲ ನಾಮಕಾವಸ್ತೆಗೆ ಸಭೆ ಮಾಡಬಾರದು ಎಂದು ಅಸಮಧಾನ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಒಟ್ಟು ೭೩೩೧ ಪ್ರಕರಣಗಳಿವೆ. ಇಲ್ಲಿವರೆಗೂ ೮೭ ಸಾವಿರ ಜನರು ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ. ಕೆಲ ದಿನಗಳಿಂದ ಕೊರೋನಾ ಪಕ್ರರಣ ಕಡಿಮೆ ಆಗುತ್ತಿರುವುದು ಸಂತೋಷದ ವಿಚಾರ. ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಲಸಿಕೆಯೇ ಸಿಗುತ್ತಿಲ್ಲ. ಮೊದಲನೇ ಲಸಿಕೆ ಹಾಕಿಸಿಕೊಂಡು ಮೂರು ತಿಂಗಳಾದರೂ ಲಸಿಕೆ ಬಂದಿಲ್ಲ. ಇದರಲ್ಲೂ ರಾಜಕೀಯ ಎನ್ನುವಂತೆ ಬಿಜೆಪಿ ಇರುವ ಕಡೆ ಹೆಚ್ಚಿನ ಲಸಿಕೆ ಕೊಡಲಾಗುತ್ತಿದೆ ಎಂದು ದೂರಿದರು.