ಸಕಲೇಶಪುರದಲ್ಲಿ ಹಸಿದ ಹೊಟ್ಟೆಗಳಿಗೆ ಆಹಾರ ಕಿಟ್ ವಿತರಣೆ

ಸಕಲೇಶಪುರ: ಹಸಿದ ಹೊಟ್ಟೆ ಗಳಿಗೆ ಅನ್ನ ನೀಡುವುದು ಜಗತ್ತಿನ ಸರ್ವಶ್ರೇಷ್ಠ  ಸೇವೆಗಳಲ್ಲಿ ಒಂದಾಗಿದೆ ಎಂದು ಸಕಲೇಶಪುರ ತಾಲ್ಲೂಕು ದಂಡಧಿಕಾರಿಗಳು ಹಾಗೂ  ತಹಸಿಲ್ದಾರ್ ಜಯಕುಮಾರ್ ಅವರು ಹೇಳಿದರು. 

ಅವರಿಂದು  ಪಟ್ಟಣದ  ಆಜಾದ್ ರಸ್ತೆ ನಲ್ಲಿರುವ ರಮೇಶ್ ಸ್ಟೂರ್ ಮಾಲಿಕರಾದ ರಾಘು, ಸಮಾಜ ಸೇವಕರಾದ ಶುಭೇಂದ್ರ ನಾಯ್ಡು ಮತ್ತು ಪತ್ರಕರ್ತ ಮೊಹಮ್ಮದ್ ವಸೀಂ  ರವರು ಇಂದು ಸುಮಾರು ಒಂಭೈನೂರು ರೂಪಾಯಿ ಯ  ಬೆಲೆ ಬಾಳುವ ಇಪ್ಪತ್ತು ದಿನಸಿ ಪದಾರ್ಥ ದ ಕಿಟ್ ಗಳನ್ನು ಕೊರೋನಾ ದಿಂದ ಸೋಂಕಿತರಾಗಿರುವ  ಬಡ ಕುಟುಂಬಗಳಿಗೆ  ನೀಡಲು  ತಾಲ್ಲೂಕು ಆಡಳಿತಕ್ಕೆ ತಹಸಿಲ್ದಾರ್ ಜಯಕುಮಾರ್ ಅವರ ಸಮ್ಮುಖದಲ್ಲಿ  ಹಸ್ತಾಂತರಿಸಿದರು. 


ಕೊರೋನಾ ಸೋಂಕು  ದುಡಿಯುವ ಕೈಗಳಿಂದ ಕೆಲಸ ಕಿತ್ತು ಕೊಂಡಿದೆ , ಇಂತಹ ಸಂದರ್ಭದಲ್ಲಿ ಕೆಲವು ಯುವಕರು ತಮ್ಮ ಶ್ರಮದ ದುಡಿಮೆಯ ಒಂದು ಭಾಗವನ್ನು ತೆಗೆದಿಟ್ಟು ಅದರಲ್ಲಿ ತಮ್ಮ ಪರಿಸರದ ಸುತ್ತ ಮುತ್ತಲಿನ ಕೊರೋನ ಮಹಾಮಾರಿಯಿಂದ ಗುಣಮುಖರಾಗಿರುವ    ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಆಹಾರದ ಕಿಟ್ ಗಳನ್ನು ವಿತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು. 

ಲಾಕ್ ಡೌನ್ ನಿಂದಾಗಿ ದಿನಂಪ್ರತಿ ಕೂಲಿ ಕೆಲಸ ಮಾಡಿಕೊಂಡು ಬದುಕುವ ಹಲವಾರು ಜನರು ಸೋಂಕಿತರಾಗಿದ್ದು ಉಳ್ಳುವವರ ಹತ್ತಿರ ಕೇಳಲು ಅವರ ಸ್ವಾಭಿಮಾನ ಅಡ್ಡ ಬರುತಿದ್ದು ಅಂತಹವರು ತಾಲೂಕುಕ್ಕೆ ಕರೆ ಮಾಡಿ ತಮ್ಮ ದುಸ್ಥಿತಿ ಹೇಳಿಕೊಳ್ಳುತ್ತಿದ್ದು ಅಂತಹವರಿಗೆ ಈ ಕಿಟ್ ಗಳನ್ನು ವಿತರಿಸಲಾಗುವುದು ಎಂದು ಹೇಳಿದರು. 

ಈ ಸಂದರ್ಭದಲ್ಲಿ ತಾಲೂಕು ಆಹಾರ ನಿರೀಕ್ಷಕ ಶರವಣನ್ ಹಾಜರಿದ್ದರು.

Post a Comment

Previous Post Next Post