ಕಡೂರು: ತಾಲೂಕಿನ ಬಿಸ್ಲೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ ಎನ್ನಲಾಗಿದೆ. ಆದರೇ, ಕಛೇರಿಯಲ್ಲಿ ವೈಯುಕ್ತಿಕ ಮಾತುಕತೆ ನಡೆದಿದ್ದು. ಪರಸ್ಪರ ಕೈಕೈ ಮಿಲಾಯಿಸುವ ಮಟ್ಟಿಗೆ ತುಲುಪಿದೆ.
ಮಾತಿಗೆ ಮಾತು ಬೆಳೆದು, ಹಾಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಕೈ ಕೈ ಮಿಲಾಯಿಸಿಕೊಂಡ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಕುರಿತು, ಹಾಲಿ ಮಾಜಿ ಸದಸ್ಯರಿಬ್ಬರೂ ಪೊಲೀಸರಿಗೆ ದೂರಿತ್ತಿದ್ದಾರೆ ಎಂದು ತಿಳಿದುಬಂದಿದೆ.
ಸುಂದರ, ಸ್ವಚ್ಛ ಪರಿಸರ ಜೀವಕ್ಕೆ ಜೀವನಕ್ಕೆ ಸಂಜೀವಿನಿ. ಸ್ವಚ್ಛ ಸುಂದರ ಪರಿಸರ ನಿರ್ಮಾಣವೂ ಸವಾಲಾಗಿ ಪರಿಣಮಿಸಿರುವ, ಮಾರಕ ಕರೊನಾ ಸಾಂಕ್ರಾಮಿಕ ಅಲೆಯ ಸಂಕಷ್ಟದ ಸಂದರ್ಭದಲ್ಲಿ ಜರುಗಿದ ಸಭೆಯಲ್ಲಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು, ಗಿಡ ನೆಡುವ ವಿಚಾರವನ್ನು ಪ್ರಶ್ನಿಸಿದ್ದೇ ಜಗಳಕ್ಕೆ ಕಾರಣವಾಯಿತು ಎನ್ನಲಾಗಿದೆ.