ಬೆಂಗಳೂರು : ಸಿಬಿಎಸ್‌ಸಿ ಪರೀಕ್ಷೆಗಳ ರದ್ದು ಬೆನ್ನಲೆ ರಾಜ್ಯದಲ್ಲೂ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಇಂದು ಸುದ್ದಿಗೋಷ್ಟಿ ನಡೆಸಿದ ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪರೀಕ್ಷೆ ರದ್ದು ಮಾಡಿರುವ ಬಗ್ಗೆ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ಕಳೆದ ಬಾರಿ ಕೊರೊನಾ ಸಂಕಷ್ಟ ನಡುವೆಯೂ ಪರೀಕ್ಷೆಗಳನ್ನು ನಡೆಸಲಾಗಿತ್ತು, ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು ಮಕ್ಕಳಿಗೆ ಸೋಂಕು ತಗುಲುವ ಅಪಾಯಗಳು ಹೆಚ್ಚಿದೆ. ಈ ಬಗ್ಗೆ ಮಾಜಿ ಶಿಕ್ಷಣ ಸಚಿವರು, ಹಿರಿಯ ಮಾಧ್ಯಮ ಮಿತ್ರರು, ಪೊಷಕರು, ಮಕ್ಕಳ ಸಲಹೆ ಪಡೆದು ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಮಕ್ಕಳನ್ನು ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ಪಾಸ್ ಮಾಡಲಾಗುವುದು, ಅದಕ್ಕಾಗಿ ಕೆಲವು ಮಾನದಂಡಗಳನ್ನು ಮಾಡಿಕೊಂಡಿದ್ದು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಮತ್ತು ಇದರ ಅನ್ವಯ ಎಬಿಸಿ ಮಾದರಿ ಗ್ರೇಡ್ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ
ವಿದ್ಯಾರ್ಥಿಗಳಿಗೆ ಈಗ ನೀಡುವ ಫಲಿತಾಂಶ ಇಷ್ಟ ಆಗದೇ ಹೋದರೆ ಈ ಬಗ್ಗೆ ದೊಡ್ಡ ಪ್ರಮಾಣದ ಆಕ್ಷೇಪ ಕೇಳಿ ಬಂದಲ್ಲಿ ಕೋವಿಡ್ ನಿಯಂತ್ರಣದ ಬಳಿಕ ಅ ಮಕ್ಕಳಿಗೆ ಪರೀಕ್ಷೆ ಮಾಡೋ ಬಗ್ಗೆ ಚಿಂತನೆ ಮಾಡಲಾಗುವುದು, ಹೀಗಾಗೀ ಮಕ್ಕಳು ಸಿಇಟಿ, ನೀಟ್, ಜೆಇಇ ಪರೀಕ್ಷೆಗೆ ಹೆಚ್ಚು ಸಿದ್ದರಾಗಬೇಕು ಸುರೇಶ್ ಕುಮಾರ್ ಹೇಳಿದ್ದಾರೆ.
SSLC ಮಕ್ಕಳಿಗೆ ಕೋರ್ ಸಬ್ಜೆಕ್ಟ್ ಪರೀಕ್ಷೆ
ಇನ್ನು ಸಿಬಿಎಸ್ಇ, ರಾಜ್ಯ ಸಿಲಬಸ್‌ಗೆ ಕೆಲ ವ್ಯತ್ಯಾಸಗಳಿದ್ದು, ಸಿಬಿಎಸ್ಇ ಗೆ 3 ತಿಂಗಳಿಗೆ ಮೌಲ್ಯಮಾಪನ ನಡೆಯುತ್ತಿದೆ. ಆದರೆ ರಾಜ್ಯದಲ್ಲಿ ಆ ವ್ಯವಸ್ಥೆ ಇಲ್ಲದಿರುವ ಕಾರಣ SSLC ಪರೀಕ್ಷೆ ಇಲ್ಲದೇ ಫಲಿತಾಂಶ ನೀಡುವುದು ಕಷ್ಟವಾಗುತ್ತಿದೆ. ಈ ಹಿನ್ನಲೆಯಲ್ಲಿ 10 ನೇ ತರಗತಿ ಮಕ್ಕಳಿಗೆ ಕೋರ್ ಸಬ್ಜೆಕ್ಟ್ ಗಳ ಪರೀಕ್ಷೆ ನಡೆಸಲು ತಿರ್ಮಾನಿಸಲಾಗಿದೆ.
ವಿಜ್ಞಾನ, ಗಣಿತ, ಸಮಾಜ ವಿಜ್ಞಾನದಲ್ಲಿ ಒಂದು ಮತ್ತು ಭಾಷೆ ಪರೀಕ್ಷೆಯಲ್ಲಿ ಹಿಂದಿ,ಕನ್ನಡ, ಇಂಗ್ಲೀಷ್ ಎರಡನೇ ಪೇಪರ್ ಆಗಿರಲಿದೆ. ಸರಳ ಮತ್ತು ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲು ಚಿಂತಿಸಿದ್ದು 120 ಅಂಕಗಳ ಪ್ರಶ್ನೆ ಪತ್ರಿಕೆ ಇರಲಿದೆ ಇದಕ್ಕೆ ಸಂಬಂಧಿಸಿದ ಮಾಡೇಲ್ ಪ್ರಶ್ನೆ ಪತ್ರಿಕೆ ಕೂಡಾ ವೆಬ್ಸೈಟ್‌ನಲ್ಲಿ ಬಿಡುಗಡೆ ಆಗಲಿದೆ.
ಜುಲೈ 3 ನೇ ವಾರದಲ್ಲಿ ಪರೀಕ್ಷೆಗೆ ಚಿಂತನೆ ನಡೆಸಲಾಗಿದ್ದು, 20 ದಿನಗಳ ಮುಂಚಿತವಾಗಿ ಪರೀಕ್ಷೆಗಳ ದಿನಾಂಕ ಪ್ರಕಟಿಸಲಾಗುತ್ತದೆ. ರಾಜ್ಯದಲ್ಲಿ SSLC ಪರೀಕ್ಷೆಗೆ 8.7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ನೋಂದಣಿ ಆಗಿದ್ದಾರೆ. ಆರು ಸಾವಿರ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಪ್ರತಿ ಕೊಠಡಿಗೆ 12 ರಂತೆ ಮಕ್ಕಳನ್ನು ಕೂರಿಸಿ ಪರೀಕ್ಷೆ ನಡೆಸಲಾಗುವುದು ಮತ್ತು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲಾಗುವುದು.
ಜುಲೈ ಕೊನೆ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ ಮಾಡಲಾಗುವುದು. 2021-22 ನೇ ಸಾಲಿನ ಶೈಕ್ಷಣಿಕ ವರ್ಷ ಜುಲೈ1 ರಿಂದ ಶಾಲೆಗಳು ಪ್ರಾರಂಭವಾಗಲಿದೆ ಎಂದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.