ಡಾ. ಶಾಲಿನಿ. ವಿ . ಎಲ್‌ ರವರ “ಪ್ರಾಥಮಿಕ ಆರೋಗ್ಯ ಕೇಂದ್ರ. ಹಗರೆ” - ಅನುಭವ ಲೇಖನಗಳು ಕೃತಿ ಲೋಕಾರ್ಪಣೆ

ಬೇಲೂರು : ಪುಸ್ತಕಗಳನ್ನು ಬರೆಯಲು ಮತ್ತು ಓದಲು ತುಂಬಾ ತಾಳ್ಮೆ ಬೇಕಿದೆ, ಪ್ರಸ್ತುತ ಸಂದರ್ಭದಲ್ಲಿ ವೈದ್ಯರು ಬಿಡುವಿಲ್ಲದಂತೆ ಕೆಲಸವನ್ನು ಮಾಡುತ್ತಿದ್ದಾರೆ, ಇದರ ನಡುವೆ ಡಾ ಶಾಲಿನಿ ಅವರು ಇಂದು ಕೃತಿ ರಚಿಸಿರುವುದು ಹೆಮ್ಮೆ ಸಂಗತಿ ಎಂದು ಹಾಸನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ರವರ ಹೇಳಿದರು.

ಅವರು ಹಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾ|| ಶಾಲಿನಿ ವಿ ಎಲ್‌ ರವರ ನಾಲ್ಕನೇ ಕೃತಿ ಲೋಕಾರ್ಪಣೆ ಹಾಗೂ ವೈದ್ಯರ‌ ದಿನಾಚರಣೆ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ನಂತರ ಮಾತನಾಡುತ್ತ ಪ್ರತಿಯೊಂದು ಜನರೇಷನ್ ನಲ್ಲಿಯೂ ಒಂದೊಂದು ರೋಗ ಬರುತ್ತಿದ್ದು ಆತಂಕದ ಸೃಷ್ಟಿಯ ನಡುವೆಯೂ ವೈದ್ಯರುಗಳು ಸಾರ್ವಜನಿಕರೊಂದಿಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ನಮ್ಮ ಭಾಗ್ಯ ಎಂದರು.

ನಂತರ  ನಿವೃತ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ   ಹಾಗೂ ಕೃತಿಯ ಮುನ್ನುಡಿ ಬರೆದಿರುನ ಡಾ. ಶ್ಯಾಮಲಾದೇವಿ ಮಾತನಾಡಿ ವೈದ್ಯರಲ್ಲಿ ಕೃತಿ ರಚಿಸಿ ಸಾಹಿತ್ಯ ಕೃಷಿ ಮಾಡುತ್ತಿರುವುದು ಕೆಲ ವೈದ್ಯರುಗಳಷ್ಟೆ,ಇಂತಹ ಸಾಲಿನಲ್ಲಿ ಡಾ|| ಶಾಲಿನಿ ಅವರು ಕಥೆ , ಲೇಖನಗಳಿಂದ ಸಮಾಜಕ್ಕೆ ಒಂದಷ್ಟು ಅನುಭವಗಳನ್ನು ಬರೆದು ಪುಸ್ತಕಗಳನ್ನು ಹೊರತಂದಿದ್ದಾರೆ. ಸರ್ಕಾರಿ ಆಸ್ಪತ್ರೆಯ ಅನುಭವಗಳನ್ನು ಪುಸ್ತಕ ಮಾಡಿರುವುದು ಅಭಿನಂದನಾರ್ಹ ಎಂದರು.

ಲೇಖಕಿ ಹಾಗೂ ವೈದ್ಯಾಧಿಕಾರಿ ಡಾ|| ಶಾಲಿನಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಸರ್ಕಾರಿ ವೈದ್ಯರ ಸವಾಲುಗಳು ಮತ್ತು ಅವರ ಅವಶ್ಯಕತೆಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ವೈದ್ಯರ ದಿನಾಚರಣೆಯಂದು ಸರ್ಕಾರಿ ವೈದ್ಯರ ನಿಸ್ವಾರ್ಥ ಸೇವೆಗೆ ಈ ಪುಸ್ತಕ ಅರ್ಪಣೆ ಮಾಡಲಾಗಿದೆ ಎಂದು ಕೃತಿ ರಚನೆಯ ಉದ್ದೇಶ ಮತ್ತು ಅನುಭವಗಳನ್ನು ಹಂಚಿಕೊಂಡರು. 


ಡಾ. ಮಮತ. ಸಮುದಾಯ ಆರೋಗ್ಯ ಕೇಂದ್ರ ಅರೇಹಳ್ಳಿ ಇವರು ಡಾ. ಬಿ ಸಿ ರಾಯ್‌ರವರ ಪರಿಚಯ ಮಾಡಿಕೊಟ್ಟರು. ಅವರ ಸಾಧನೆಗಳನ್ನು ಸ್ಮರಿಸಿದರು. ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯಿಂದ ಉದ್ಘಾಟನೆಯಾದ ಕಾರ್ಯಕ್ರಮ ವಿಭಿನ್ನತೆ ಮತ್ತು ವರ್ಣಮಯವಾಗಿತ್ತು. 

ಕೋವಿಡ್ ೧೯ ಕಾರಣದಿಂದ ಹಾಸನ ಸೀಮೆ ಯೂಟ್ಯೂಬ್ ಚಾನೆಲ್ ನಲ್ಲಿ ಕಾರ್ಯಕ್ರಮ  ನೇರ ಪ್ರಸಾರದಲ್ಲಿ ಪ್ರಕಟವಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು. ಹಾಸನ

ಡಾ. ತಿಮ್ಮಯ್ಯ. ತಾಲ್ಲೂಕು ಆರೋಗ್ಯಾಧಿಕಾರಿಗಳು. ಆಲೂರು

ಡಾ. ವಿಜಯ್‌. ತಾಲ್ಲೂಕು ಆರೋಗ್ಯಾಧಿಕಾರಿಗಳು.

ಬೇಲೂರು, ಬೇಲೂರು ತಾಲ್ಲೂಕಿನ ಎಲ್ಲಾ ವೈದ್ಯಾಧಿಕಾರಿಗಳು , ಪ್ರಾ ಥಮಿಕ ಆರೋಗ್ಯ ಕೇಂದ್ರ ಹಗರೆಯ ಸಿಬ್ಬಂಧಿ ಉಪಸ್ಥಿತರಿದ್ದರು.

Post a Comment

Previous Post Next Post