ಹೊಳೆನರಸೀಪುರ; ಪಟ್ಟಣದ ಮೂಲಭೂತ ಸಮಸ್ಯೆಗಳನ್ನು ಅಮೂಲಾಗ್ರವಾಗಿ ಪರಿಶೀಲನೆ ನಡೆಸಿ ಅವುಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪುರಸಭೆಅಧ್ಯಕ್ಷೆ ಶ್ರೀಮತಿ.ವೀಣಾರಾಜೇಶ್ ತಿಳಿಸಿದರು.
ಅವರುಇಂದು ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು, ಶಾಸಕ ಹೆಚ್.ಡಿ.ರೇವಣ್ಣನವರ ಮಾರ್ಗದರ್ಶನದಲ್ಲಿ ಪಟ್ಟಣದ ಸರ್ವಾಂಗೀಣಅಭಿವೃದ್ಧಿಗೆ ಪುರಸಭೆಕಾರ್ಯಪ್ರವೃತವಾಗಿದ್ದು, ರಸ್ತೆ, ಕುಡಿಯುವ ನೀರು,ಬೀದಿ ದೀಪದ ಸಮಸ್ಯೆಗಳನ್ನು ಪರಿಹರಿಸುವುದರಜೊತೆಗೆ ಸ್ವಚ್ಛತೆ ಮತ್ತುಕೋವಿಡ್ ನಿಯಂತ್ರಣ ಮಾಡಲು ಪಟ್ಟಣದಎಲ್ಲಾ ವಾರ್ಡ್ಗಳಲ್ಲಿ ಈಗಾಗಲೇ ಎರಡು ಸುತ್ತಿನ ಬೃಹತ್ ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಗಿದ್ದು,
ಕೋವಿಡ್ ಮಾರ್ಗಸೂಚಿಗಳನ್ನು ಪಟ್ಟಣದಾದ್ಯಂತಕಟ್ಟುನಿಟ್ಟಾಗಿ ಜಾರಿಗೊಳಿಸಲು ಪುರಸಭೆ ಅಧಿಕಾರಿಗಳು ಶ್ರಮಿಸುತ್ತಿದ್ದಾರೆಂದು ತಿಳಿಸಿ ಸಾರ್ವಜನಿಕರೂ ಸಹ ಕೋವಿಡ್ ನಿಯಂತ್ರಣ ಮಾಡಲು ಸ್ವಯಂ ಪ್ರೇರಿತರಾಗಿ ಪುರಸಭೆಜೊತೆಯಲ್ಲಿ ಕೈ ಜೋಡಿಸಬೇಕೆಂದುಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿಇಂದು ನಡೆದ ತಿಂಗಳ ಸಾಮಾನ್ಯ ಸಭೆಯ ಮುಖ್ಯಾಂಶಗಳನ್ನು ಮಾಧ್ಯಮಗಳಿಗೆ ತಿಳಿಸಿದ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ.ವಿ.ಡಿ.ಶಾಂತಲಾ ಅವರು, ಇಂದಿನ ಸಭೆಯಲ್ಲಿ ಬಹುತೇಕಎಲ್ಲಾ ಸದಸ್ಯರುಗಳು ಲವಲವಿಕೆಯಿಂದ ಭಾಗವಹಿಸಿ ಪಟ್ಟಣದಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಿದ್ದು ,ಇಂದಿನ ಸಭೆಯಲ್ಲಿಒಟ್ಟು ೧೩ ಪ್ರಮುಖ ವಿಷಯಗಳನ್ನು ಮಾನ್ಯ ಸದಸ್ಯರುಗಳ ಸಮಕ್ಷಮದಲ್ಲಿ ಮುಂಡಿಸಲಾಗಿದ್ದು, ಅವುಗಳಲ್ಲಿ ಹದಿನೈದನೇ ಹಣಕಾಸುಯೋಜನೆಯಡಿಯಲ್ಲಿ ಪಟ್ಟಣದ ಕೆಲವು ಅಭಿವೃದ್ಧಿಕಾಮಗಾರಿಯನ್ನುಕೈಗೊಂಡಿದ್ದು ಅವುಗಳಲ್ಲಿ ಮಹಾತ್ಮಾಗಾಂಧಿಯವರಉದ್ಯಾನವನದಅಭಿವೃದ್ಧಿ, ಸ್ಮಶಾನದಅಭಿವೃದ್ಧಿ,ದಿನದಇಪ್ಪತ್ತ ನಾಲ್ಕು ಘಂಟೆಗಳ ಕಾಲ ಜನತೆಗೆಕುಡಿಯುವ ನೀರನ್ನುಒದಗಿಸುವಕಾಮಗಾರಿ ಶರವೇಗದಿಂದ ಸಾಗಿದೆ, ರಸ್ತೆ,ಬೀದಿ ದೀಪಗಳ ನಿರ್ವಹಣೆ ಮಾಡಲು ಸದಸ್ಯರುಗಳು ಸೂಚಿಸಿದರು.
ಮತ್ತುಕೋವಿಡ್ -೧೯ ನ ಮೂರನೆಯಅಲೆಯು ಬರುವ ಸಂಭವವಿದ್ದುಅದನ್ನು ನಿಯಂತ್ರಣ ಮಾಡಲು ಸೂಕ್ತವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಮತ್ತುಕೋವಿಡ್ ವ್ಯಾಕ್ಸಿನೇಷನ್ ಹೆಚ್ಚಿಸುವುದು, ಮತ್ತು ಪಟ್ಟಣದಅಭಿವೃದ್ಧಿಗಾಗಿ ಈಗಾಗಲೇ ಚಾಲ್ತಿಯಲ್ಲಿರುವ ಮತ್ತು ಮುಗಿಯುವ ಹಂತದಲ್ಲಿರುವ ಕಾಮಗಾರಿಗಳಿಗೆ ಸರ್ಕಾರವುತಕ್ಷಣವೇ ಹಣಕಾಸಿನ ಅನುದಾನವನ್ನು ಬಿಡುಗಡೆ ಮಾಡಬೇಕೆಂದುಅಧ್ಯಕ್ಷರು ಮತ್ತುಉಪಾಧ್ಯಕ್ಷರು ಮತ್ತುಎಲ್ಲಾ ಸದಸ್ಯರುಗಳು ಒಮ್ಮತದಿಂದ ಸರ್ಕಾರವನ್ನು ಒತ್ತಾಯಿಸಿದ್ದಾರೆ, ಮತ್ತು ಶಾಸಕ ಹೆಚ್.ಡಿ.ರೇವಣ್ಣನವರು ಪಟ್ಟಣದಅಭಿವೃದ್ಧಿಗೆ ಸರ್ಕಾರದ ವತಿಯಿಂದ ಹಣಕಾಸಿನ ನೆರವನ್ನುಕೊಡಿಸಲು ಶ್ರಮಿಸುತ್ತಿದ್ದುಅವರಅಶಯದಂತೆ ಪಟ್ಟಣದ ಯೋಜನೆಗಳು ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸವನ್ನು ಪುರಸಭೆ ಮುಖ್ಯಾಧಿಕಾರಿ ವ್ಯಕ್ತಪಡಿಸಿದರು.
ಇಂದಿನ ಸಭೆಯಲ್ಲಿ ಪುರಸಭೆಉಪಾಧ್ಯಕ್ಷರಾದಜಿ.ತ್ರಿಲೋಚನಾ ಸೋಮೇಶ್, ಪುರಸಭೆ ಸದಸ್ಯರಾದ ಕೆ.ಶ್ರೀಧರ್, ಜಕ್ರುಲ್ಲಾ ಷರೀಫ್,ಶ್ರೀಮತಿ. ಜಿ.ಕೆ.ಸುಧಾನಳಿನಿ, ನಿಂಗಯ್ಯ ಮಾವನೂರು, ಜ್ಯೋತಿ ಮಂಜುನಾಥ್, ಟಿ.ಶಾಂತಿ, ಮಮತಕುಮಾರಿ,ಸಾವಿತ್ರಿ. ಹೆಚ್.ಡಿ.ಉಮೇಶ್.ಹೆಚ್.ಟಿ.ಕುಮಾರ ಸ್ವಾಮಿ, ವಾಸಿಂ.ಪುರಸಭೆ ಅಧಿಕಾರಿಗಳಾದ ಸಮುದಾಯದ ಸಂಘಟನಾಧಿಕಾರಿ.ಎನ್.ಆರ್.ಪಂಕಜಾ , ಸಮುದಾಯ ಸಂಘಟಕರಾದಎನ್ರ.ಎಂ
ಮೇಶ್, ಪರಿಸರಇಂಜಿನಿಯರ್‌ರುಚಿ ದರ್ಶಿನಿ,ವ್ಯವಸ್ಥಾಪಕರಾದ ಮೋಹನ್‌ಕುಮಾರಿ, ಮಂಜೇಗೌಡ, ಪರಮೇಶ್,ಹೇಮಂತ್,ಹುಸೇನ್, ಮೋಹನ್,ವೆಂಕಟೇಶ್, ಸುನಿಲ್,ಶೇಖರ್, ಅಬ್ಬಾಸ್.ಮನು,ದೀಪಾ, ಮತ್ತುಇನ್ನಿತರರು ಹಾಜರಿದ್ದರು.