ಯುವಮೋರ್ಚಾ ಬೇಲೂರು ಮಂಡಲದ ವತಿಯಿಂದ ಸೀಡ್ ಬಾಲ್ ಬಿತ್ತನೆ

 ಬೇಲೂರು : ತಾಲೂಕು  ಯುವಮೋರ್ಚಾ ಮಂಡಲದ ವತಿಯಿಂದ ದಿವಂಗತ ಡಾಕ್ಟರ್ ಶ್ಯಾಮಪ್ರಸಾದ್ ಮುಖರ್ಜಿ ರವರ ಜನ್ಮದಿನದ ಪ್ರಯುಕ್ತ   2000 ಸೀಡ್ ಬಾಲ್(ಬೀಜದ ಉಂಡೆ ) ಕಾರ್ಯಕ್ರಮವನ್ನುಯುವ ತಾಲ್ಲೂಕು ಮೋರ್ಚಾ ಅಧ್ಯಕ್ಷರಾದ ನಂದಕುಮಾರ್ ಎ.ಎಂ ಅಧ್ಯಕ್ಷತೆಯಲ್ಲಿ  ನಡೆಸಲಾಯಿತು.

 ಹಳೇಬೀಡು ಭಾಗದ ಹುಲಿಕೆರೆ ಗ್ರಾಮದ ಚಾಮುಂಡೇಶ್ವರಿ ಮತ್ತು ಕಾಲಭೈರವೇಶ್ವರ ಸುಕ್ಷೇತ್ರ   ಪ್ರದೇಶದಲ್ಲಿ  ಸೀಡ್ ಬಾಲ್ ( ಬೀಜದ ಉಂಡೆ) ಹಾಕಲಾಯಿತು .

  ಈ ಸಂದರ್ಭದಲ್ಲಿ  ಯುವ ತಾಲೂಕು ಮೋರ್ಚ ಅಧ್ಯಕ್ಷ ಎಂ ಎ ನಂದಕುಮಾರ್ ಮಾತನಾಡಿ  ಬೀಜದುಂಡೆಯನ್ನು ತಯಾರಿಸಿ ಸೂಕ್ತ ಸ್ಥಳಗಳಲ್ಲಿ ಹಾಕುವುದರಿಂದ ಕಡಿಮೆ ಖರ್ಚಿನಲ್ಲಿ ಗಿಡಗಳನ್ನು ಬೆಳೆಸಿದಂತಾಗುತ್ತದೆ. ಪರಿಸರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನಾವು ನೀಡಿದಂತಾಗುತ್ತದೆ’ಬೀಜದುಂಡೆಗಳನ್ನು ಇಟ್ಟಿರುವ ಕಡೆಗಳಲ್ಲೆಲ್ಲಾ ಗಿಡಗಳು ಆಳಕ್ಕೆ ಬೇರಿಳಿಸಿಕೊಂಡು ಅಚ್ಚ ಹಸುರಾಗಿ ಎದ್ದೇಳುತ್ತಿವೆ. ಇದರಿಂದಾಗಿ ಕಡಿಮೆ ಖರ್ಚಿನಲ್ಲಿ ಅರಣ್ಯ ಗಿಡಗಳ ನಾಟಿಯ ಉದ್ದೇಶ ಸಾಕಾರಗೊಂಡಂತಾಗಿದೆ. ಬೀಜ ಪ್ರಸರಣದಲ್ಲಿ, ಉತ್ತಮ ವಾತಾವರಣ ಸೃಷ್ಠಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಬರಡು ಜಾಗದಲ್ಲಿ ಮಣ್ಣಿನ ಪೋಷಕಾಂಶದಲ್ಲಿ ಮಾತ್ರ ಬೆಳೆಯುವ ಗಿಡಗಳನ್ನು ಗುರುತಿಸಿ ಅಲ್ಲಿ ೨ ಸಾವಿರ ಸೀಡ್ ಬಾಲ್ ( ಬೀಜದ ಉಂಡೆ) ಹಾಕಲಿದ್ದು ಮುಂದೆ ಪರಿಸರದ ಕಾಳಜಿಯಿಂದ ಎಲ್ಲಾ ಪ್ರತೀ ಹೋಬಳಿಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ 

ಬೇಲೂರು ಹಳೇಬೀಡು ನಗರ ಪ್ರಾಧಿಕಾರ  ಅಧ್ಯಕ್ಷರಾದ ಅಡಗೂರು ಬಸವರಾಜ್. ಮಂಡಲ ಅಧ್ಯಕ್ಷರಾದ ಅಡಗೂರು ಆನಂದ್. ಹೆಬ್ಬಾಳ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ರಮೇಶ್.  ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿ ಸುಮನ್ ನವಿಲಹಳ್ಳಿ.  ಯುವಮೋರ್ಚಾದ  ಪದಾಧಿಕಾರಿಗಳು ಹಾಗೂ ಮಂಡಲ ಪದಾಧಿಕಾರಿಗಳು  ಕಾರ್ಯಕರ್ತರು ಉಪಸ್ಥಿತರಿದ್ದರು.

Post a Comment

Previous Post Next Post