ಬೇಲೂರು: ಪಟ್ಟಣದ ಲಕ್ಷ್ಮೀಪುರ ಬಡಾವಣೆಯಲ್ಲಿರುವ ಆಶಾಢಮ್ಮ ದೇಗುಲದ ಪುನರ್‍ನಿರ್ಮಾಣವಾಗಿದ್ದು ಇಂದು ಲೋಕಾರ್ಪಣೆಗೊಂಡಿತು.
ಮುಂಜಾನೆ ಗಂಗೆಯನ್ನು ಕಳಸದ ಮೂಲಕ ತಂದು ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ದೇಗುಲದ ನಿರ್ಮಾಣ ಸಮಿತಿಯ ಪ್ರಮುಖರಾದ ಹಾಗೂ ದೇಗುಲದ ಅರ್ಚಕರೂ ಆದ ನಿರ್ವಾಣಶೆಟ್ಟಿ ಅವರು, ದೇಗುಲ ಪುರಾತನದಾಗಿದ್ದು ಮೂಲತಹ ಕೆ.ಆರ್.ಪೇಟೆಯಲ್ಲಿದ್ದು ಬೇಲೂರು ಪಟ್ಟಣಕ್ಕೆ ಕುಟುಂಬಸ್ಥರು ಆಗಮಿಸಿದ ಹಿನ್ನಲೆಯಲ್ಲಿ ಸ್ಥಳೀಯವಾಗಿ ಗುಡಿಯೊಂದನ್ನು ನಿರ್ಮಿಸಿಕೊಳ್ಳಲಾಗಿತ್ತು.
ವರ್ಷಗಳು ಕಳೆದ ನಂತರ ದೇಗುಲವು ಶಿಥಿಲಾವಸ್ತೆಗೊಂಡಿದ್ದು ಸ್ಥಳಾವಕಾಶದ ಕೊರತೆಯೂ ಕಾಡುತ್ತಿತ್ತು. ಇದನ್ನು ಮನಗಂಡು ಪುನರ್‍ನಿರ್ಮಾಣಕ್ಕೆ ಆಲೋಚಿಲಾಯಿತು. ಕುಟುಂಬಸ್ಥರು ಹಾಗೂ ದಾನಿಗಳ ಅಲ್ಪಪ್ರಮಾಣದ ನೆರವಿನಿಂದ ದೇಗುಲ ಪುನರ್‍ನಿರ್ಮಿಸಲಾಗಿದೆ.
ಕೊರೊನಾ ಕಾರಣದಿಂದ ಸರಳವಾಗಿ ಹಾಗೂ ಕೆಲವೇ ಭಕ್ತರ ಸಮ್ಮುಖದಲ್ಲಿ ದೇಗುಲದ ಲೋಕಾರ್ಪಣೆ ಕಾರ್ಯಕ್ರಮ ನಡೆಸಲಾಗಿದೆ ಎಂದು ಹೇಳಿದರು. ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭ ವೆಂಕಟೇಶ್, ರಾಜು ಇತರರು ಇದ್ದರು.
