೪೫ ಕ್ಕೂ ಹೆಚ್ಚು ಸಿಲೆಂಡರ್ ಗಳ ವಶ.

 ಬೇಲೂರು: ಗೃಹ ಬಳಕೆಗೆ ಬಳಸುವಂತಹ ಸಿಲೆಂಡರ್ ಗಳನ್ನು ಕಮರ್ಷಿಯಲ್ ಆಗಿ ಉಪಯೋಗಿಸುತ್ತಿದ್ದ ಅಂಗಡಿಗಳ ಮೇಲೆ ದಾಳಿ ನೆಡಸಿ ಸುಮಾರು ೪೫ ಕ್ಕೂ ಹೆಚ್ಚು ಸಿಲೆಂಡರ್ ಗಳನ್ನು ತಹಶಿಲ್ದಾರ್ ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಯಿತು.

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕೋಳಿ ಅಂಗಡಿ,ಹೋಟೇಲ್,ಬೇಕರಿ,ಪಾನೀಪುರಿ ಇತರೆ ಅಂಗಡಿಗಳು ಸೇರಿದಂತೆ ಕಮರ್ಷಿಯಲ್ ಸಿಲೆಂಡರ್ ಸೇರಿದಂತೆ ಆಹಾರ ಇಲಾಖೆಯಿಂದ ಕಠಿಣ ಸುತ್ತೋಲೆ ಇದ್ದರೂ ಕೆಲವರು ಅದನ್ನು ಗಾಳಿಗೆ ತೂರಿ ಗೃಹಪಯೋಗಕ್ಕೆ ಬಳಸುವಂತಹ ಸಿಲೆಂಡರ್ ಅನ್ನು ಕಮರ್ಷಿಯಲ್ ಆಗಿ ಬಳಸುತ್ತಿದ್ದಾರೆ ಎಂಬ ದೂರಿನ ಮೇಲೆ ತಹಶಿಲ್ದಾರ್ ನೇತೃತ್ವದಲ್ಲಿ ನಾಲ್ಕು ತಂಡಗಳಾಗಿ ರಚಿಸಿಕೊಂಡು ಮುಖ್ಯಾಧಿಕಾರಿ ಸುಜಯ್,ಆಹಾರ ಶಿರಸ್ಥೇದಾರ್ ಮಂಜುನಾಥ್,ಶಿರಸ್ಥೇದಾರ್ ನಾಗರಾಜ್  ದಾಳಿ ನಡೆಸಿ ಸುಮಾರು ೪೦ ಸಿಲೆಂಡರ್ ವಶಪಡಿಸಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿ‌ ತಹಶಿಲ್ದಾರ್ ಮೋಹನ್ ಕುಮಾರ್  ನಮಗೆ ಈಗಾಗಲೇ ಮೌಖಿಕವಾಗಿ ದೂರು ಬಂದ ಹಿನ್ನಲೆಯಲ್ಲಿ ಕೆಲ ವರ್ತಕರು,ವ್ಯಾಪಾರಸ್ಥರು ಗೃಹೋಪಯೋಗಿ ಸಿಲೆಂಡರ್ ಬಳಸುತ್ತಿದ್ದು ಕಮರ್ಷಿಯಲ್ ಸಿಲೆಂಡರ್ ಬಳಸುತ್ತಿಲ್ಲ ಎಂಬ ದೂರಿನ ಅನ್ವಯ ದಿಡೀರನೆ ದಾಳಿ ನಡೆಸಿದಾಗ ಪಟ್ಟಣದ ಕೆಲ ಅಂಗಡಿಗಳಲ್ಲಿ ೪೫ ಸಿಲೆಂಡರ್ ವಶಪಡಿಸಿಕೊಳ್ಳಲಾಗಿದೆ.ಮುಂದೆ ವ್ಯಾಪರಸ್ಥರು ಇದನ್ನೇ ಪುನಃ ವರ್ತಿಸಿಕೊಂಡರೆ ಅವರ ಪರವಾನಗಿ ರದ್ದುಗೊಳಿಸಲಾಗುವುದು ಹಾಗೂ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು.ಆಹಾರ ಇಲಾಖೆಯಿಂದ ಅವರಿಗೆ ದಂಡ ವಿಧಿಸಲಾಗುವುದು ಎಂದರು.

ಆಹಾರ ಶಿರಸ್ಥೇದಾರ್ ಮಂಜುನಾಥ್ ಮಾತನಾಡಿ ಈಗಾಗಲೇ ಹೋಟೇಲ್ ಸೇರಿದಂತೆ ಎಲ್ಲಾ ವ್ಯಾಪರಸ್ಥರಿಗೆ ನೋಟೀಸ್ ಜಾರಿ ಮಾಡಿದ್ದರು ಸಹ ಕೆಲವರು ಕಮರ್ಷಿಯಲ್ ಸಿಲೆಂಡರ್ ಉಪಯೋಗಿಸದೆ ಗೃಹೋಪಯೋಗಿ ಸಿಲೆಂಡರ್ ಉಪಯೋಗಿಸುತ್ತಿದ್ದರು.

Advertisement


ಪತ್ರಿಕೆಗಳ ಮೂಲಕ ಎಚ್ಚರಿಸಿದ್ದರೂ ಅದನ್ನು ಗಾಳಿಗೆ ತೂರಿ ಕಮರ್ಷಿಯಲ್ ಬದಲು ಡೊಮೆಸ್ಟಿಕ್ ಸಿಲೆಂಡರ್ ಗಳನ್ನು ಉಪಯೋಗಿಸುತ್ತಿದ್ದದ್ದು ಕಂಡು ಬಂದ ಹಿನ್ನಲೆ ನಾವು ದಾಳಿ ನೆಡೆಸಿದ್ದೇವೆ.

ಮುಂದೆಯೂ ಸಹ ವಾರಕ್ಕೊಮ್ಮೆ ಅವರಿಗೆ ಮಾಹಿತಿ ನೀಡದೆ ದಾಳಿ ಮಾಡಿ ಸಿಲೆಂಡರ್ ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಆರೋಗ್ಯ ಅಧಿಕಾರಿ ಲೋಹಿತ್,ಆರ್ ಐ ಪ್ರಕಾಶ್,ಹನುಮಂತು,ಆರೋಗ್ಯ ಇಲಾಖೆಯ ಗೀತಾಂಜಲಿ,ಇತರರು ಹಾಜರಿದ್ದರು.


Advertisement


Post a Comment

Previous Post Next Post