ಹಾಸನ: ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವುದಾದರೇ ಪಿಡಬ್ಲ್ಯೂ ಇಲಾಖೆಗೆ ನೀಡಬೇಕು. ಇಲ್ಲವಾದರೇ ಸ್ಥಗಿತಗೊಳಿಸಿ, ನಮಗೆ ಪಕ್ಷಕ್ಕೆ ಶಕ್ತಿ ಯಾವಾಗ ಶಕ್ತಿ ಬರುತ್ತದೆ ಆವಾಗಲೇ ನಿರ್ಮಿಸಲಾಗುವುದು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ತಮ್ಮ ಒಲವು ಪ್ರದರ್ಶಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನದ ಏರ್ ಪೋರ್ಟ್ನ್ನು ಸರಿಯಾಗಿ ಮಾಡುವುದಾದರೇ ಮಾಡಿ, ಇಲ್ಲವಾದರೇ ಸ್ಥಗಿತಗೊಳಿಸಿದರೇ ನಮ್ಮ ಪಕ್ಷಕ್ಕೆ ಯಾವಾಗ ಶಕ್ತಿ ಬರುತ್ತದೆ ಮಾಡಲಾಗುವುದು. ಏರ್ ಪೋರ್ಟ್ ನಿರ್ಮಾಣಕ್ಕೆ ಒಟ್ಟು ೭೪೧ ಎಕರೆ ಜಮೀನು ಅವಶ್ಯಕತೆ ಇದ್ದು, ೫೩೬ ಎಕರೆ ಭೂಮಿಯನ್ನು ಭೂಸ್ವಾಧೀನ ಪಡೆಯಲಾಗಿತ್ತು. ಉಳಿದ ೨೧೯.೦೫ ಎಕರೆ ಜಮೀನು ಬೇಕಾಗಿದೆ. ನಾನು ಮಂತ್ರಿ ಆಗಿದ್ದಾಗ ೪/೧ ಮತ್ತು ೬/೧ ಖರೀದಿ ಮಾಡಲು ಮುಂದಾಗಿದ್ದೇನು. ಶಿವಮೊಗ್ಗ ಮತ್ತು ಬಿಜಾಪುರ ಮತ್ತು ಕಲ್ಬುರ್ಗಿ ಏರ್ ಪೋರ್ಟ್ನ್ನು ಪಿಡಬ್ಲ್ಯೂ ಇಲಾಖೆಗೆ ಕೊಡಬಹುದು ಆದರೇ ಹಾಸನ ಕಾಮಗಾರಿಯನ್ನು ಏಕೆ ಪಿಡಬ್ಲ್ಯೂಗೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು. ಇಂಜಿನಿರ‍್ಸ್, ಟೆಕ್ನಿಕಲ್ಸ್ ಇದ್ದಾರೆ. ಈ ಕೆಲಸ ಮಾಡುವುದಕ್ಕೆ ನಾಚಿಕೆ ಆಗುತ್ತದೆ ಎಂದು ಅಸಮಧಾನವ್ಯಕ್ತಪಡಿಸಿದರು. ಹಾಸನದ ಏರ್ ಪೋರ್ಟ್ ವಿಚಾರದಲ್ಲಿ ಯಾವ ರಾಜಕೀಯ ಬೆರೆಸಿ ನಾಟಕ ರೀತಿ ಮಾಡುವುದು ಬೇಡ, ಮಾನಮರ್ಯಾದಿ ಗೌರವ ಎನ್ನುವುದು ಇದ್ರೆ ಪಿಡಬ್ಲ್ಯೂ ಇಲಾಖೆ ಮೂಲಕ ಮಾಡಲಿ ಇಲ್ಲವಾದರೇ ಸ್ಥಗಿತಗೊಳಿಸಿ. ಮುಂದೆ ಭಗವಂತ ಶಕ್ತಿ ಕೊಟ್ಟಾಗ ಅಂದು ನಾನು ಮಾಡಲಾಗುವುದು ಎಂದರು.
ನಾಮಕವಸ್ತೆಲಿ ಏರ್ ಪೋರ್ಟ್ ನಿರ್ಮಾಣ ಮಾಡಲು ಹೊರಟರೇ ನಾವೆ ಕೆಲಸವನ್ನು ತಡೆಯುತ್ತೇವೆ. ಇದು ನನ್ನ ಕಾಲದಲ್ಲ ಶತಮಾನದ್ದಾಗಿದೆ. ಏರ್ ಪೋರ್ಟ್ ಅಕ್ವೇರ್ ಮಾಡಿರುವುದು ಸುಮಾರು ೭೦ ರಿಂದ ೮೦ ವರ್ಷಗಳ ಹಿಂದೆ ಬ್ರಿಟಿಷರು ಮಾಡಿದಂತದ್ದು. ಮುಖ್ಯಮಂತ್ರಿಗಳು ಹಾಸನಕ್ಕೆ ಬಂದಾಗ ಏರ್ ಪೋರ್ಟ್ ಕಾಮಗಾರಿ ಗುತ್ತಿಗೆ ಯಾರಿಗೆ ಕೊಡಬೇಕೆಂದು ನನಗೆ ಕೇಳಿದರು ಆದರೇ ಗುತ್ತಿಗೆ ಯಾರಿಗಾದರೂ ಕೊಡಲಿ ಅದಕ್ಕೂ ನನಗೂ ಸಂಬಂಧವಿಲ್ಲ.
. ನಮ್ಮ ಮುಖ್ಯ ಒತ್ತಾಯ ಎಂದರೇ ಪಿಡಬ್ಲ್ಯೂ ಇಲಾಖೆಗೆ ನೀಡಿ, ಬೇಕಾದರೇ ಗುತ್ತಿಗೆಯನ್ನು ಯಾರಿಗಾದರೂ ಕೊಟ್ಟರೇ ನನ್ನ ಅಭ್ಯಂತರವಿಲ್ಲ. ಒಟ್ಟಾರೆ ೨೪ ಎಕರೆ ಅಕ್ವೇರ್ ಮಾಡಿ ೨೧೯ ಎಕರೆಯನ್ನು ಕೈಬಿಡಿ ಎಂದಿದ್ದಾರೆ. ೫೩೬ ಮತ್ತು ೨೪ ಎಕರೆ ಸೇರಿ ಒಟ್ಟು ೫೬೦ ಎಕರೆ ಭೂಮಿಯನ್ನು ಫೈನಲ್ ಮಾಡಿ ಎಂದಿದ್ದಾರೆ. ಭೂಮಿ ಸ್ವಾಧೀನಕ್ಕೆ ೧೩ ಕೋಟಿ ರೂಗಳನ್ನು ಮೀಸಲಿಟ್ಟಿದ್ದಾರೆ. ಇವರ ಹೆಸರೆ ಡಿ ನೋಟಿಫಿಕೇಶನ್ ಮುಖ್ಯಮಂತ್ರಿ ಎಂದು ಜರಿದರು. ಹೆಚ್.ಡಿ. ದೇವೇಗೌಡರು ಪ್ರಧಾನಿ ಆಗಿದ್ದಾಗಲೇ ಡೆಲ್ಲಿಯಿಂದಲೇ ಏರ್ ಪೋರ್ಟ್ ಮಾಡಬೇಕು ಎಂಬ ಉದ್ದೇಶವಿತ್ತು. ಕಾಮಗಾರಿ ಮಾಡುವ ವೇಳೆಗೆ ಅಧಿಕಾರ ಹೋಯಿತು. ನನ್ನ ೨೧ ವರ್ಷದ ರಾಜಕಾರಣದಲ್ಲಿ ಈ ಸುಳ್ಳು ಹೇಳುವ ಮುಖ್ಯಮಂತ್ರಿ ಯಾರಾದರೂ ಇದ್ರೆ ಬಿ.ಎಸ್. ಯಡಿಯೂರಪ್ಪನವರು ನಂಬರ್ ೧ ಸ್ಥಾನದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಜಕೀಯ ಧ್ವೇಷ, ಸುಳ್ಳು ಹೇಳುವವರು ಮುಂದಿನ ದಿನಗಳಲ್ಲಿ ದೇವರೆ ಶಿಕ್ಷೆ ಕೊಡುವ ಕಾಲ ಬರುತ್ತದೆ. ನಾನು ಕೂಡ ಬದುಕಿರುತ್ತೀನಿ ನೋಡುತ್ತೇನೆ. ಇಂತವರನ್ನೇಲ್ಲಾ ನಾನು ನೋಡಿದ್ದೇನೆ. ನಾವೇನು ಹೆದರು ಎಲ್ಲೂ ಓಡಿ ಹೋಗುವುದಿಲ್ಲ ಎಂದರು. ೨೦೨೩ಕ್ಕೆ ಬಿಜೆಪಿ ಪಕ್ಷಕ್ಕೆ ಎಷ್ಟು ಸೀಟು ಬರುತ್ತದೆ ನಾನು ರಾಜ್ಯದಲ್ಲಿ ನೋಡುತ್ತೇನೆ. ಯಡಿಯೂರಪ್ಪನವರೆ ಶಾಶ್ವತವಾಗಿ ಮುಖ್ಯಮಂತ್ರಿ ಆಗಿರಲು ಸಾಧ್ಯವೇ ಎಂದು ಕುಟುಕಿದರು.