ಮಳೆ ಅನಾಹುತ ಸ್ಪಂದಿಸಲು ಜಿಲ್ಲಾಧಿಕಾರಿ ಸಭೆ

ಸಕಲೇಶಪುರ:  ಮಳೆಯಿಂದ ಉಂಟಾಗಲಿರುವ ಅನಾಹುತಗಳಿಗೆ ಸ್ಪಂಧಿಸಲು ಸಕಲ ರೀತಿಯಲ್ಲೂ ತಾಲೂಕು ಆಡಳಿತ ಸನ್ನದ್ಧಗೊಂಡಿರುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಸೂಚಿಸಿದ್ದಾರೆ.
ಶುಕ್ರವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಪ್ರಕೃತಿ ವಿಕೋಪ ಮುಂಜಾಗ್ರತ ಸಭೆಯಲ್ಲಿ ಮಾತನಾಡಿ, ಅತಿಯಾದ ಮಳೆಯಿಂದ ಮಲೆನಾಡಿನಲ್ಲಿ ಯಾವುದೆ ಸಂದರ್ಭದಲ್ಲಿ ಅನಾಹುತಗಳು ಸಂಭವಿಸಬಹುದು. ಆದ್ದರಿಂದ, ಕಂದಾಯ ನಿರೀಕ್ಷಕರು ಅವಘಡಗಳಿಗೆ ತಕ್ಷಣಕ್ಕೆ ಸ್ಪಂದಿಸಲು ಅನುಕೂಲವಾಗುವಂತೆ ತಮ್ಮ ಮೊಬೈಲ್ ನಂಬರ್‌ಗಳನ್ನು ಸಾರ್ವಜನಿಕಗೊಳಿಸ ಬೇಕು ಹಾಗೂ ಅವಘಡಗಳ ಸಂದರ್ಭದಲ್ಲಿ ಅಗತ್ಯವಾಗಿ ಬೇಕಿರುವ ಜೆಸಿಬಿ,ಅಗ್ನಿಶಾಮಕಧಳ ಹಾಗೂ ಟ್ರಾಕ್ಟರ್ ಮಾಲೀಕರ ಮೊಬೈಲ್ ನಂಬರ್‌ಗಳನ್ನು ಅಗತ್ಯವಾಗಿ ಹೊಂದಿರ ಬೇಕು. ಅರಣ್ಯ ಇಲಾಖೆ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಮರ ಕಟಾವಿನ ಯಂತ್ರಗಳನ್ನು ಸಿದ್ದವಿಟ್ಟುಕೊಳ್ಳ ಬೇಕು ಎಂಬ ಸೂಚನೆ ನೀಡಿದರು. ತಾಲೂಕಿನಲ್ಲಿ ಈಗಾಗಲೇ ನಾಲ್ಕು ಮನೆಗಳು ಸಂಪೂರ್ಣ ಕುಸಿದಿದ್ದರೆ,10 ಮನೆಗಳು ಭಾಗಶಃ ಕುಸಿದಿದ್ದು ಸಂಪೂರ್ಣ ಮನೆ ಕಳೆದುಕೊಂಡ ವ್ಯಕ್ತಿಗಳಿಗೆ ಇನ್ನೆರಡು ದಿನಗಳಲ್ಲಿ ಪರಿಹಾರ ವಿತರಿಸಲಾಗುವುದು. ಕಳೆದ 24 ಗಂಟೆಯಿAದ ಬಿದ್ದ ಮಳೆಗೆ 31 ವಿದ್ಯುತ್ ಕಂಬಗಳು ಮುರಿದಿದ್ದು ಇವುಗಳ ಬದಲಾವಣೆ ಕಾರ್ಯ ಬಿರುಸುನಿಂದ ನಡೆದಿದೆ ಎಂದರು.
ಹೆದ್ದಾರಿ ಸಂಚಾರ ಬಂದ್; ತಾಲೂಕಿನಲ್ಲಿ ಹೆಚ್ಚುತಿರುವ ಮಳೆಗೆ ಹೆದ್ದಾರಿಯಲ್ಲಿ ಮತ್ತಷ್ಟು ಭೂಕುಸಿತವಾಗುವ ಸಾಧ್ಯತೆ ಇರುವುದರಿಂದ ಮುಂದಿನ ಮೂರು ದಿನಗಳ ಕಾಲ ಹೆದ್ದಾರಿಯಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇದಿಸಲಾಗಿದೆ ಎಂದರು.
ಎಚ್ ಆರ್‌ಪಿ ತನಿಖೆ: ಹೇಮಾವತಿ ಜಲಾಶಯ ಯೋಜನೆ ಹೆಸರಿನಲ್ಲಿ ನಡೆದಿದೆ ಎನ್ನಲಾದ ಭೂಹಗರಣ ತನಿಖೆಗೆ ಎರಡು ತಂಡಗಳನ್ನು ರಚಿಸಿದ್ದು ಎರಡು ತಂಡಗಳು ವರದಿ ಸಲ್ಲಿಸಿವೆ. ಈಗಾಗಲೇ ಕಳೆದ ಮೂರು ವರ್ಷಗಳಿಂದ ಭೂ ಮಂಜೂರಾತಿ ಪಡೆದಿರುವ ವ್ಯಕ್ತಿಗಳು ತಮ್ಮ ದಾಖಲೆಗಳ ಹಾಜರಾತಿಗೆ ಸೂಚಿಸಿದ್ದು ದಾಖಲೆಗಳ ಹಾಜರಾತಿಗೆ ವಿಫಲರಾದವರ ಮಂಜೂರಾತಿಯನ್ನು ರದ್ದುಗೊಳಿಸಲಾಗುವುದು ಎಂದರು.
23 ಎಸ್‌ಕೆಪಿಪಿ 2 ಜಿಲ್ಲಾಧಿಕಾರಿ ಆರ್ ಗಿರೀಶ್ ಪ್ರಕೃತಿ ವಿಕೋಪ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.

Post a Comment

Previous Post Next Post